2ನೇ ಟಿ20: ಬೃಹತ್ ಮೊತ್ತ ಪೇರಿಸಿದ ಭಾರತ, ದಾಖಲೆ ಬರೆದ ಕೊಹ್ಲಿ-ಸೂರ್ಯಕುಮಾರ್ ಯಾದವ್ ಜೋಡಿ

ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಪರ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ದಾಖಲೆ ನಿರ್ಮಿಸಿದೆ.
ಕೊಹ್ಲಿ-ಸೂರ್ಯ ಕುಮಾರ್ ಯಾದವ್ ಜೋಡಿ
ಕೊಹ್ಲಿ-ಸೂರ್ಯ ಕುಮಾರ್ ಯಾದವ್ ಜೋಡಿ

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡದ ಪರ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ದಾಖಲೆ ನಿರ್ಮಿಸಿದೆ.

ಗುವಾಹತಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬರೊಬ್ಬರಿ 237 ರನ್ ಗಳ ಬೃಹತ್ ಗುರಿ ನೀಡಿತು. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 96 ರನ್ ಗಳ ಅಮೋಘ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಆರಂಭ ನೀಡಿತು. ಕೆಎಲ್ ರಾಹುಲ್ ಕೇವಲ 26 ಎಸೆತೆಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಮೇತ 76 ರನ್ ಸಿಡಿಸಿದರೆ, 37 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ರೋಹಿತ್ ಶರ್ಮಾ 43 ರನ್ ಪೇರಿಸಿದರು. ಆ ಮೂಲಕ ಅಮೋಘ 96 ರನ್ ಗಳ ಜೊತೆಯಾಟ ನೀಡಿತು. 

ಬಳಿಕ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ (61 ರನ್) ಮತ್ತು ವಿರಾಟ್ ಕೊಹ್ಲಿ (ಅಜೇಯ 49) ಜೋಡಿ 102 ರನ್ ಗಳ ಅಮೋಘ ಶತಕದ ಜೊತೆಯಾಟ ನೀಡಿತು. ಈ ಪೈಕಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ ಯಾದವ್ 5 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 61 ರನ್ ಗಳನ್ನು ಸಿಡಿಸಿದರು. 28 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 49ರನ್ ಸಿಡಿಸಿದರು.

ಅಂತಿಮ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೂಡ ಕೇವಲ 7 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಮೇತ 17 ರನ್ ಸಿಡಿಸಿ ತಂಡದ ಮೊತ್ತವನ್ನು 237ಕ್ಕೇರಿಸಿದರು.

ದಾಖಲೆ ಬರೆದ ಕೊಹ್ಲಿ-ಸೂರ್ಯಕುಮಾರ್ ಯಾದವ್ ಜೋಡಿ
ಇನ್ನು ಈ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಜೋಡಿ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ಭರ್ಜರಿ ಶತಕದ ಜೊತೆಯಾಟವಾಡಿತು. ಸೂರ್ಯ ಕುಮಾರ್ ಯಾದವ್ (61 ರನ್) ಮತ್ತು ವಿರಾಟ್ ಕೊಹ್ಲಿ (ಅಜೇಯ 49) ಜೋಡಿ 102 ರನ್ ಗಳ ಅಮೋಘ ಶತಕದ ಜೊತೆಯಾಟ ನೀಡಿತು. ಈ ಪೈಕಿ ಕೇವಲ 22 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ ಯಾದವ್ 5 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 61 ರನ್ ಗಳನ್ನು ಸಿಡಿಸಿದರು. 28 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 1 ಸಿಕ್ಸರ್ ಮತ್ತು 7 ಬೌಂಡರಿ ಸಹಿತ ಅಜೇಯ 49ರನ್ ಸಿಡಿಸಿದರು. ಈ ಪಂದ್ಯದಲ್ಲಿ ಈ ಜೋಡಿ 14.57 ರನ್ ರೇಟ್ ನಲ್ಲಿ ಶತಕದ ಜೊತೆಯಾಟವಾಡಿದ್ದು, ಇದು ದಾಖಲೆಯಾಗಿದೆ.

ಅಂತೆಯೇ ಭಾರತದ ಪರ ಗರಿಷ್ಠ ರನ್ ರೇಟ್ ನೊಂದಿಗೆ ಶತಕದ ಜೊತೆಯಾಟವಾಡಿದ ಮೊದಲ ಜೋಡಿ ಎಂಬ ಕೀರ್ತಿಗೂ ಕೊಹ್ಲಿ-ಸೂರ್ಯ ಕುಮಾರ್ ಯಾದವ್ ಜೋಡಿ ಪಾತ್ರವಾಗಿದೆ. ಇದ್ಕೂ ಮೊದಲು 2016ರಲ್ಲಿ ಕೆಎಲ್ ರಾಹುಲ್ ಮತ್ತು ಎಂಎಸ್ ಧೋನಿ ಜೋಡಿ ವಿಂಡೀಸ್ ವಿರುದ್ಧ ಪ್ರತೀ ಓವರ್ ಗೆ 13.10 ಸರಾಸರಿಯಲ್ಲಿ 49 ಎಸೆತಗಳಲ್ಲಿ 107 ರನ್ ಗಳ ಜೊತೆಯಾಟವಾಡಿತ್ತು. ಇದು ಈ ವರೆಗಿನ ಗರಿಷ್ಠ ರನ್ ರೇಟ್ ಜೊತೆಯಾಟವಾಗಿತ್ತು. ಇದೀಗ ಈ ದಾಖಲೆಯನ್ನು ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಜೋಡಿ ಮುರಿದಿದೆ.

Fastest 100+ stands for India in T20Is by run rate
14.57 SK Yadav - V Kohli (102 off 42) vs SA Guwahati 2022 *
13.10 KL Rahul - MS Dhoni (107 off 49) vs WI Lauderhill 2016
13.02 KL Rahul - Rohit Sharma (165 off 76) vs SL Indore 2017

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com