'40 ಓವರ್, 458 ರನ್, 1 ಶತಕ, 3 ಅರ್ಧಶತಕ': ಭಾರತ-ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ಹಲವು ದಾಖಲೆಗಳ ಪತನ

ಭಾರತ ಮತ್ತು ದಕ್ಷಿಣಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. 
'40 ಓವರ್, 458 ರನ್, 1 ಶತಕ, 3 ಅರ್ಧಶತಕ': ಭಾರತ-ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ಹಲವು ದಾಖಲೆಗಳ ಪತನ

ಗುವಾಹತಿ: ಭಾರತ ಮತ್ತು ದಕ್ಷಿಣಆಫ್ರಿಕಾ ನಡುವಿನ 2ನೇ ಟಿ20 ಪಂದ್ಯದಲ್ಲಿ ಭಾರತ 16 ರನ್ ಗಳ ವಿರೋಚಿತ ಜಯ ದಾಖಲಿಸಿದ್ದು, ಇದೇ ಒಂದು ಪಂದ್ಯ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದೆ. 

ಹೌದು.. ಭಾರತ ನೀಡಿದ 238ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ (ಅಜೇಯ 106ರನ್) ಮತ್ತು ಕ್ವಿಂಟನ್ ಡಿಕಾಕ್ (ಅಜೇಯ 69) ಮುರಿಯದ ನಾಲ್ಕನೇ ವಿಶ್ವ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತದ ವಿರೋಚಿತ ಪ್ರದರ್ಶನ ನೀಡಿತು. 

ವಿಶ್ವದಾಖಲೆಯ ಶತಕದ ಜೊತೆಯಾಟ
ಈ ಪಂದ್ಯದಲ್ಲಿ ಈ ಜೋಡಿ 174 ರನ್ ಗಳ ವಿಶ್ವ ದಾಖಲೆಯ ಜೊತೆಯಾಟವಾಡಿತು. ಇದು ಟಿ20  ಕ್ರಿಕೆಟ್ ನಲ್ಲಿ 4 ಅಥವಾ ಅದಕ್ಕಿಂತ ಕೆಳ ಕ್ರಮಾಂಕದದಲ್ಲಿ ದಾಖಲಾದ ಗರಿಷ್ಠ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ.

174* partnership by De Kock & Miller is the highest in the history of T20 Internationals for fourth wicket or below for any team

ಅಜೇಯ ಶತಕ, ಮಿಲ್ಲರ್ 2ನೇ ಆಟಗಾರ
ಅಂತೆಯೇ ಈ ಪಂದ್ಯದಲ್ಲಿ ಆಫ್ರಿಕಾ ಪರ ಅಜೇಯ 106ರನ್ ಗಳಿಸಿದ ಮಿಲ್ಲರ್ ದಾಖಲೆ ನಿರ್ಮಿಸಿದ್ದು, ಬೃಹತ್ ಮೊತ್ತದ ಚೇಸಿಂಗ್ ವೇಳೆ ಅಜೇಯ ಶತಕ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೆಎಲ್ ರಾಹುಲ್ ಅಜೇಯ 110 ರನ್ ಗಳಿಸಿದ್ದರು. ಅಂದಿನ ಬೃಹತ್ ಮೊತ್ತದ ಪಂದ್ಯದಲ್ಲಿ ಭಾರತ ಸೋತಿತ್ತು.

Unbeaten hundreds in a losing run chase in T20Is
110* KL Rahul vs WI Lauderhill 2016
106* D Miller vs Ind Guwahati 2022

ಡೆತ್ ಓವರ್ ನಲ್ಲಿ ಗರಿಷ್ಠ
ಇನ್ನು ಈ ಪಂದ್ಯದ ಉಭಯ ಇನ್ನಿಂಗ್ಸ್ ನ ಡೆತ್ ಓವರ್ ನಲ್ಲಿ  ದಾಖಲೆಯ ರನ್ ಗಳು ದಾಖಲಾಗಿದ್ದು, ಅಂದರೆ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ತನ್ನ ಪಾಲಿನ ಡೆತ್ ಓವರ್ ನಲ್ಲಿ ಅಂದರೆ 16 ರಿಂದ 20ನೇ ಓವರ್ ವರೆಗೂ 82 ರನ್ ಪೇರಿಸಿದರೆ, ದಕ್ಷಿಣ ಆಫ್ರಿಕಾ ತಂಡ ಇದೇ ಅವಧಿಯಲ್ಲಿ 78 ರನ್ ಕಲೆ ಹಾಕಿತು. ಆ ಮೂಲಕ ಉಭಯ ತಂಡಗಳ ಡೆತ್ ಓವರ್ ಗಳಿಕೆ 160 ರನ್ ಗಳಾಗಿದ್ದು, ಆ ಮೂಲಕ ಈ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದಲೇ ಡೆತ್ ಓವರ್ ನಲ್ಲಿ ಗರಿಷ್ಠ ರನ್ ದಾಖಲಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ 2010ರಲ್ಲಿ ಪಾಕಿಸ್ತಾನ (73) ಮತ್ತು ಆಸ್ಚ್ರೇಲಿಯಾ (75) ತಂಡಗಳ ಪಂದ್ಯ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು. ಆ ಪಂದ್ಯದಲ್ಲಿ ಉಭಯ ತಂಡಗಳು ಡೆತ್ ಓವರ್ ನಲ್ಲಿ 148 ರನ್ ಕಲೆಹಾಕಿದ್ದವು.

Most runs in death overs (16-20) in a T20I
160 Ind (82) vs SA (78) Guwahati 2022
148 Pak (73) vs Aus (75) Gros Islet 2010
145 Ind (80) vs Eng (65) Durban 2007

ತವರಿನಲ್ಲಿ ಭಾರತಕ್ಕೆ ಮೊದಲ ಟಿ20 ಸರಣಿ ಜಯ
ಇನ್ನು ಈ ಪಂದ್ಯದಲ್ಲಿ ವಿರೋಚಿತ ಜಯದ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಗೆಲುವಿನ ಬರವನ್ನು ನೀಗಿಸಿಕೊಂಡಿದೆ. ಭಾರತ ನೆಲದಲ್ಲಿ ಈ ವರೆಗೂ ಟೀಂ ಇಂಡಿಯಾ ಟಿ20 ಸರಣಿ ಜಯ ಕಂಡಿರಲಿಲ್ಲ. ಇಂದಿನ ಗೆಲುವಿನ ಮೂಲಕ ಭಾರತ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ 3 ಟಿ20 ಸರಣಿಗಳು ನಡೆದಿದ್ದವು. ಈ ಪೈಕಿ 1 ಸರಣಿ ಸೋತಿದ್ದ ಭಾರತ, 2 ಸರಣಿಯಲ್ಲಿ ಸಮಬಲ ಸಾಧಿಸಿತ್ತು.

First T20I series win for India against South Africa at home
Lost 2-0 in 2015
Drew 1-1 in 2019
Drew 2-2 in 2022
Lead 2-0* in 2022

ಕಳೆದ 7 ಸರಣಿಗಳಲ್ಲಿ ದಕ್ಷಿಣ ಆಫ್ರಿಕಾಗೆ ಮೊದಲ ದ್ವಿಪಕ್ಷೀಯ ಸರಣಿ ಸೋಲು
ಇನ್ನು ಈ ಪಂದ್ಯದ ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿ ಕೈ ಚೆಲ್ಲಿದ್ದು ಆ ಮೂಲಕ ತನ್ನದೇ ದಾಖಲೆಯ ಸರಪಳಿಯನ್ನು ಕಳಚಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡ ಕಳೆದ 7 ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಲ್ಲಿ ಸೋಲು ಕಂಡಿರಲಿಲ್ಲ. ಆದರೆ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಸೋಲು ಕಾಣುವ ಮೂಲಕ ಈ ಗೆಲುವಿನ ನಾಗಾಲೋಟದ ಅಜೇಯ ಸರಪಳಿಯನ್ನು ಕಳಚಿಕೊಂಡಿದೆ.

STAT: First bilateral series defeat for South Africa in seven series

5ನೇ ಕ್ರಮಾಂದಲ್ಲಿ ಶತಕ ದಾಖಲೆ ನಿರ್ಮಿಸಿದ ಡೇವಿಡ್ ಮಿಲ್ಲರ್
ಇನ್ನು ಆಫ್ರಿಕಾ ಪರ 5ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ ಡೇವಿಡ್ ಮಿಲ್ಲರ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 5 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ ಮತ್ತು ಗರಿಷ್ಟ ವೈಯುಕ್ತಿಕ ಗರಿಷ್ಛ ರನ್ ದಾಖಲಿಸಿದ ಜಗತ್ತಿನ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಮಿಲ್ಲರ್ ಭಾಜನರಾಗಿದ್ದಾರೆ.

David Miller - first player to score multiple T20I hundreds batting at #5 or below
101*(36) vs Ban Potchefstroom 2017
106*(47) vs Ind Guwahati 202
2

ಭಾರತದ ವಿರುದ್ಧ ಭರ್ಜರಿ ಜೊತೆಯಾಟ; ದಾಖಲೆ ಬರೆದ ಡೇವಿಡ್ ಮಿಲ್ಲರ್-ಡಿಕಾಕ್  ಜೋಡಿ
ಅಂತೇಯ ಈ ಪಂದ್ಯದಲ್ಲಿ ಸೋಲಿನ ದವಡೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಭರ್ಜರಿ ಬ್ಯಾಟಿಂಗ್ ಮೂಲಕ ಗೆಲುವಿನ ತುದಿಗೆ ತಂದು ನಿಲ್ಲಿಸಿದ್ದ ಡೇವಿಡ್ ಮಿಲ್ಲರ್-ಡಿಕಾಕ್  ಜೋಡಿ ಕೂಡ ವಿಶ್ವ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಈ ಜೋಡಿ ಅಜೇಯ 154ರನ್ ಗಳ ಬೃಹತ್ ಜೊತೆಯಾಟವಾಡಿದ್ದು, ಇದು ಭಾರತದ ವಿರುದ್ಧ ದಾಖಲಾದ ಗರಿಷ್ಛ ರನ್ ಗಳ ಜೊತೆಯಾಟ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 2021ರಲ್ಲಿ ದುಬೈನಲ್ಲಿ ಪಾಕಿಸ್ತಾನದ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ಜೋಡಿ 152ರನ್ ಕಲೆಹಾಕಿತ್ತು. ಇದು ಭಾರತದ ವಿರುದ್ಧ ದಾಖಲಾದ ಈ ವರೆಗಿನ ಗರಿಷ್ಠ ರನ್ ಗಳ ಜೊತೆಯಾಟವಾಗಿತ್ತು. 

Highest partnerships vs India in T20Is for any wkt
154* Q de Kock - D Miller Guwahati 2022
152* Babar Azam - Mohd Rizwan Dubai 2021
133 D Warner - S Watson Colombo RPS 2012
131* R vd Dussen - D Miller Delhi 2022

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com