ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್: ವಿಶ್ವದಾಖಲೆ ಹೊಸ್ತಿಲಲ್ಲಿ ಭಾರತದ ರನ್ ಮೆಷಿನ್ ಕೊಹ್ಲಿ, ವಿರಾಟ್ ಗೆ ಬೇಕು ಕೇವಲ 27 ರನ್!

ಟಿ20 ವಿಶ್ವಕಪ್ ನ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಇದೀಗ ಟಿ20 ವಿಶ್ವಕಪ್ ನಲ್ಲಿ ಅಪರೂಪದ ದಾಖಲೆ ಹೊಸ್ತಿಲಲ್ಲಿದ್ದು, ಕೊಹ್ಲಿ ಕೇವಲ 27ರನ್ ಗಳಿಸಿದರೆ ಈ ಸಾಧವೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಸಿಡ್ನಿ: ಟಿ20 ವಿಶ್ವಕಪ್ ನ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಇದೀಗ ಟಿ20 ವಿಶ್ವಕಪ್ ನಲ್ಲಿ ಅಪರೂಪದ ದಾಖಲೆ ಹೊಸ್ತಿಲಲ್ಲಿದ್ದು, ಕೊಹ್ಲಿ ಕೇವಲ 27ರನ್ ಗಳಿಸಿದರೆ ಈ ಸಾಧವೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ನೆದರ್ಲೆಂಡ್ ವಿರುದ್ಧ ಇಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ನ ಗ್ರೂಪ್ 2ನ 2ನೇ ಪಂದ್ಯದಲ್ಲಿ ಭಾರತ 179 ರನ್ ಗಳನ್ನು ಪೇರಿಸಿದೆ. ಈ ಮೊತ್ತದಲ್ಲಿ ವಿರಾಟ್ ಕೊಹ್ಲಿಯದ್ದಿ ಸಿಂಹಪಾಲಿದ್ದು, ಕೊಹ್ಲಿ ಕೇವಲ 44 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿಗಳ ನೆರವಿನಿಂದ ಅಜೇಯ 62 ರನ್ ಕಲೆಹಾಕಿದರು. 

ಅಲ್ಲದೇ ಇದೇ ಇನ್ನಿಂಗ್ಸ್ ಮೂಲಕ ಕೊಹ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ದಾಖಲೆಯನ್ನು ಕೂಡ ಹಿಂದಿಕ್ಕಿದ್ದು ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಗರಿಷ್ಛ ರನ್ ಕಲೆಹಾಕಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕೊಹ್ಲಿ ಟಿ20 ವಿಶ್ವಕಪ್ ನಲ್ಲಿ ಒಟ್ಟು 989ರನ್ ಗಳಿಸಿದ್ದು, 965ರನ್ ಕಲೆಹಾಕಿರುವ ಕ್ರಿಸ್ ಗೇಯ್ಲ್ ರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ. ಇನ್ನು 1016ರನ್ ಕಲೆಹಾಕಿರುವ ಶ್ರೀಲಂಕಾದ ಮಹೇಲಾ ಜಯವರ್ಧನೆ ಅಗ್ರ ಸ್ಥಾನದಲ್ಲಿದ್ದಾರೆ. 904 ರನ್ ಗಳನ್ನು ಗಳಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಕೇವಲ 27ರನ್ ಗಳಿಸಿದರೆ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಆ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಜಗತ್ತಿನ ಮತ್ತು ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾಗಲಿದ್ದಾರೆ.

ಇಂದು ಕೊಹ್ಲಿ ಗಳಿಸಿದ ಅರ್ಧಶತಕ ಟೂರ್ನಿಯಲ್ಲಿ ಅವರು ಗಳಿಸಿದ 2ನೇ ಅರ್ಧಶತಕವಾಗಿದೆ. ಅಂತೆಯೇ ಟೂರ್ನಿಯಲ್ಲಿ ಅವರದ್ದು ಸತತ 2 ಅರ್ಧಶತಕವಾಗಿದ್ದು, ಈ ಹಿಂದೆ ಪಾಕಿಸ್ತಾನದ ವಿರುದ್ಧವೂ ಅಬ್ಬರಿಸಿದ್ದ ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com