3ನೇ ಟಿ20: ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು, ರನ್ ದಾಖಲೆ ಬರೆದ ಸೂರ್ಯ, ತಿಲಕ್ ವರ್ಮಾ

ಮೊದಲೆರಡು ಪಂದ್ಯಗಳನ್ನು ಸೋತಿದ್ದ ಭಾರತ ತಂಡ ಕೊನೆಗೂ ಮಾಡು ಇಲ್ಲವೇ ಮಡಿ ಎಂಬಂತಿದ್ದ ಮೂರನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಜಯ ದಾಖಲಿಸಿದ್ದು, ಇದೇ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮಹತ್ವದ ದಾಖಲೆ ನಿರ್ಮಿಸಿದ್ದಾರೆ.
ವಿಂಡೀಸ್ ವಿರುದ್ಧ ಗೆದ್ದ ಭಾರತ
ವಿಂಡೀಸ್ ವಿರುದ್ಧ ಗೆದ್ದ ಭಾರತ

ಗಯಾನಾ: ಮೊದಲೆರಡು ಪಂದ್ಯಗಳನ್ನು ಸೋತಿದ್ದ ಭಾರತ ತಂಡ ಕೊನೆಗೂ ಮಾಡು ಇಲ್ಲವೇ ಮಡಿ ಎಂಬಂತಿದ್ದ ಮೂರನೇ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಜಯ ದಾಖಲಿಸಿದ್ದು, ಇದೇ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮಹತ್ವದ ದಾಖಲೆ ನಿರ್ಮಿಸಿದ್ದಾರೆ.

ಗಯಾನದ ಪ್ರಾವಿಡೆನ್ಸ್‌ ಮೈದಾನದಲ್ಲಿ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 160 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಟೀಂ ಇಂಡಿಯಾ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಗಳ ಅಂತರದಲ್ಲಿ ವಿಂಡೀಸ್ ತಂಡವನ್ನು ಮಣಿಸಿತು. ಅಂತೆಯೇ ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-2 ಅಂತರದಲ್ಲಿದ್ದು ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.

ಇನ್ನು ಇದೇ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅಪರೂಪದ ದಾಖಲೆಯೊಂದನ್ನು ಬರೆದಿದ್ದು, ತಮ್ಮ ಮೊದಲ ಮೂರು ಇನ್ನಿಂಗ್ಸ್ ನಲ್ಲೇ ಗರಿಷ್ಠ ರನ್ ದಾಖಲಿಸಿದ ಜಂಟಿ 2ನೇ ಆಟಗಾರರು ಎಂಬ ಕೀರ್ತಿಗೆ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಪಾತ್ರರಾಗಿದ್ದಾರೆ. ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಮ್ಮ ಮೊದಲ 3 ಇನ್ನಿಂಗ್ಸ್ ನಲ್ಲಿ ತಲಾ 139ರನ್ ಗಳಿಸಿದ್ದು ಆ ಮೂಲಕ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಮೂರು ಇನ್ನಿಂಗ್ಸ್ ನಲ್ಲಿ 172 ರನ್ ಗಳನ್ನು ಕಲೆಹಾಕಿರುವ ದೀಪಕ್ ಹೂಡ ಮೊದಲ ಸ್ಥಾನದಲ್ಲಿದ್ದು, 109ರನ್ ಗಳಿಸಿರುವ ಗೌತಮ್ ಗಂಭೀರ್ 3ನೇ ಸ್ಥಾನದಲ್ಲಿದ್ದಾರೆ.

ಹಾಲಿ ಟೂರ್ನಿಯ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 39ರನ್, 2ನೇ ಟಿ20 ಪಂದ್ಯದಲ್ಲಿ 51 ರನ್ ಮತ್ತು ಇಂದಿನ ಮೂರನೇ ಪಂದ್ಯದಲ್ಲಿ 49ರನ್ ಗಳಿಸಿದ್ದಾರೆ. ಅಂತೆಯೇ ತಿಲಕ್ ವರ್ಮಾ ಅವರು ತಮ್ಮ ಮೊದಲ ಮೂರು T20I ಇನ್ನಿಂಗ್ಸ್‌ಗಳಲ್ಲಿ 30ಕ್ಕೂ ಅಧಿಕ ರನ್ ಗಳನ್ನು ದಾಖಲಿಸಿದ 2ನೇ ಆಟಗಾರರಾಗಿದ್ದು, ಮೊದಲ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ.

Most T20I runs for India in first three innings
172 Deepak Hooda
139 Suryakumar Yadav/ Tilak Varma
109 Gautam Gambhir
*Tilak Varma is the second Indian batter after Suryakumar Yadav to register 30+ scores in each of his first three T20I innings.

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com