ಕೋಹ್ಲಿ ಅಬ್ಬರದ ಶತಕ: ಹೈದರಾಬಾದ್ ವಿರುದ್ಧ ಆರ್ ಸಿಬಿಗೆ ರೋಚಕ ಜಯ; ಪ್ಲೇ ಆಫ್ ಕನಸು ಜೀವಂತ!

ಹೈದರಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಶತಕ (64 ಎಸೆತಗಳಲ್ಲಿ 100 ರನ್) ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಜಯ ಗಳಿಸಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರದ ಶತಕ (64 ಎಸೆತಗಳಲ್ಲಿ 100 ರನ್) ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿಬಿ 8 ವಿಕೆಟ್ ಗಳ ಜಯ ಗಳಿಸಿದೆ.
 
ಈ ಗೆಲುವಿನ ಮೂಲಕ ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತವಾಗಿದೆ. ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಆರ್ ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯದಂತಾಗಿತ್ತು. 

187 ರನ್ ಗಳ ಗುರಿ ಬೆನ್ನತ್ತಿದ ಆರ್ ಸಿಬಿ ತಂಡದ ಪರ ಆರಂಭಿಕ ಆಟಗಾರರಾಗಿದ್ದ ಕೊಹ್ಲಿ, ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ನಡೆಸುತ್ತಾ ಬಂದರು. ಕೊಹ್ಲಿಗೆ ಪಾಫ್ ಡುಪ್ಲೆಸಿಸ್ ಸಾಥ್ ನೀಡಿದರು.

4 ವರ್ಷಗಳ ಬಳಿಕ ಭರ್ಜರಿ ಶತಕ ದಾಖಲಿಸಿರುವ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಕ್ರಿಸ್ ಗೇಲ್ ಜತೆಗೆ ಸ್ಥಾನ ಹಂಚಿಕೊಂಡಿದ್ದಾರೆ.

ಕೊಹ್ಲಿ ಹಾಗೂ ಪ್ಲೆಸಿಸ್​ ಜೋಡಿ ಮೊದಲ ವಿಕೆಟ್​ಗೆ 108 ಎಸೆತಗಳಲ್ಲಿ 172 ರನ್​ಗಳ ಜತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com