IPL 2023: ಒಂದು ಟ್ರೋಫಿ ಗೆಲ್ಲುವುದೇ ಕಷ್ಟ... 5 ಬಾರಿ ಟ್ರೋಫಿ ಗೆದ್ದಿರುವುದು ಅಭೂತ ಪೂರ್ವ ಸಾಧನೆ: ಚೆನ್ನೈಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ RCB ಕಾಲೆಳೆದ ಗಂಭೀರ್!

ಲಕ್ನೋ ಸೂಪರ್ ಜೈಂಟ್ಸ್ ಮೆಂಟಪ್ ಗೌತಮ್ ಗಂಭೀರ್ ಆರ್ ಸಿಬಿ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಐಪಿಎಲ್ ಟ್ರೋಫಿ ಗೆದ್ಜ ಚೆನ್ನೈಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಗಂಭೀರ್ ಆರ್ ಸಿಬಿ ತಂಡದ ಕಾಲೆಳೆದಿದ್ದಾರೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಕ್ನೋ ಸೂಪರ್ ಜೈಂಟ್ಸ್ ಮೆಂಟಪ್ ಗೌತಮ್ ಗಂಭೀರ್ ಆರ್ ಸಿಬಿ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಐಪಿಎಲ್ ಟ್ರೋಫಿ ಗೆದ್ಜ ಚೆನ್ನೈಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಗಂಭೀರ್ ಆರ್ ಸಿಬಿ ತಂಡದ ಕಾಲೆಳೆದಿದ್ದಾರೆ ಎಂದು ಹೇಳಲಾಗಿದೆ.

ಹೌದು.. ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ವಿರೋಚಿತವಾಗಿ ಗೆದ್ದು ಐದನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  ಮುಂಬೈ ಇಂಡಿಯನ್ಸ್ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆದ ತಂಡ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ದಾಖಲೆ ಮಾಡಿದ್ದು, ಅನೇಕರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶುಭ ಕೋರಿದ್ದಾರೆ. 

ಅಂತೆಯೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೋಚ್ ಆಗಿ ಕೆಲಸ ಮಾಡಿದ್ದ ಗೌತಮ್ ಗಂಭೀರ್ ಸಹ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್, "ಕಂಗ್ರಾಜುಲೇಷನ್ಸ್ ಚೆನ್ನೈ ಸೂಪರ್ ಕಿಂಗ್ಸ್. ಒಂದು ಟ್ರೋಫಿ ಗೆಲ್ಲುವುದೇ ಕಷ್ಟ. ಅಂತದ್ದರಲ್ಲಿ ಐದು ಟ್ರೋಫಿ ಗೆಲ್ಲುವುದು ನಂಬಲಸಾಧ್ಯವಾದದ್ದು" ಎಂದು ಬರೆದುಕೊಂಡಿದ್ದಾರೆ. 

ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಶುಭ ಕೋರಿರುವ ಗಂಭೀರ್ ನೇರವಾಗಿ ಐದು ಕಪ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ವಿಶ್ ಮಾಡುವುದನ್ನು ಬಿಟ್ಟು ಒಂದು ಕಪ್ ಗೆಲ್ಲುವುದೇ ಕಷ್ಟ ಎಂದು ಉಲ್ಲೇಖಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟ್ರೋಲ್ ಮಾಡಿದ್ದಾರೆ ಎಂಬುದು ಸುಲಭವಾಗಿ ತಿಳಿದುಬರುತ್ತದೆ.

ಸದ್ಯ ಗಂಭೀರ್ ಅವರ ಈ ಟ್ವೀಟ್ ವೈರಲ್ ಆಗುತ್ತಿದ್ದು, ಯಥಾವತ್ತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಧೋನಿ ಎಂದರೆ ಕಿಡಿಕಾರುತ್ತಿದ್ದ ಗಂಭೀರ್ ಈಗ ಕೊಹ್ಲಿ ತಂಡವನ್ನು ಟ್ರೋಲ್ ಮಾಡುವ ಸಲುವಾಗಿ ಧೋನಿ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ ಎಂದೆಲ್ಲಾ ಕಾಲೆಳೆಯುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com