ICC Cricket World Cup 2023: ಭಾರತದ ವಿರುದ್ಧ ಸೋಲು; ಶ್ರೀಲಂಕಾ ಹೆಸರಲ್ಲಿ ಮೂರು ಹೀನಾಯ ದಾಖಲೆ!

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಿನ್ನೆಯ ಪಂದ್ಯದ ಹೀನಾಯ ಸೋಲಿನ ಮೂಲಕ ಶ್ರೀಲಂಕಾ ತಂಡ 3 ಅನಗತ್ಯ ದಾಖಲೆಗಳಿಗೆ ಪಾತ್ರವಾಗಿದೆ.
ಶ್ರೀಲಂಕಾ ತಂಡದ ಕಳಪೆ ಬ್ಯಾಟಿಂಗ್
ಶ್ರೀಲಂಕಾ ತಂಡದ ಕಳಪೆ ಬ್ಯಾಟಿಂಗ್

ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ (ICC Cricket WorldCup 2023)ಯ ನಿನ್ನೆಯ ಪಂದ್ಯದ ಹೀನಾಯ ಸೋಲಿನ ಮೂಲಕ ಶ್ರೀಲಂಕಾ ತಂಡ 3 ಅನಗತ್ಯ ದಾಖಲೆಗಳಿಗೆ ಪಾತ್ರವಾಗಿದೆ.

ಹೌದು.. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 358 ರನ್ ಗಳ ಗುರಿಯನ್ನು ಬೆನ್ನು ಹತ್ತಿದ್ದ ಶ್ರೀಲಂಕಾ ತಂಡ ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ (India)ದ ವಿರುದ್ಧ 302ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಮೂಲಕ ಸಿಂಹಳೀಯರು ಜಾಗತಿಕ ಕ್ರಿಕೆಟ್ ನಲ್ಲಿ ಮೂರು ಅನಗತ್ಯ ಹೀನಾಯ ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾದ 3ನೇ ಅತ್ಯಲ್ಪ ಮೊತ್ತ
ಇನ್ನು ನಿನ್ನೆ ಶ್ರೀಲಂಕಾ ತಂಡ (SriLanka) ಕೇವಲ 19.4 ಓವರ್ ನಲ್ಲಿ ಕೇವಲ 55 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಶ್ರೀಲಂಕಾ ಏಕದಿನ ಕ್ರಿಕೆಟ್ ನಲ್ಲಿ ಗಳಿಸಿದ 3ನೇ ಅತ್ಯಲ್ಪ ಮೊತ್ತವಾಗಿದೆ. ಈ ಹಿಂದೆ 2012ರಲ್ಲಿ ಪಾರ್ಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 43ರನ್ ಗಳಿದೆ ಸರ್ವ ಪತನ ಕಂಡಿತ್ತು. ಇದು ಶ್ರೀಲಂಕಾ ಕ್ರಿಕೆಟ್ ಇತಿಹಾಸದ ಅತ್ಯಂತ ಕಳಪೆ ಮೊತ್ತವಾಗಿದೆ. ಬಳಿಕ ಇದೇ ವರ್ಷ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಲಂಕನ್ನರು 50ರನ್ ಗಳಿಗೆ ಆಲೌಟ್ ಆಗಿದ್ದರು. ಇದು ಶ್ರೀಲಂಕಾ ತಂಡದ 2ನೇ ಕಳಪೆ ಮೊತ್ತವಾಗಿ ದಾಖಲಾಗಿದೆ. ನಿನ್ನೆಯ ಪಂದ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

Lowest ODI totals for Sri Lanka
43 vs SA, Paarl, 2012
50 vs IND, Colombo RPS, 2023
55 vs IND, Mumbai WS, today*
55 vs WI, Sharjah 1986
67 vs ENG, Manchester 2014
73 vs IND, Trivandrum 2023

ಭಾರತದ ವಿರುದ್ಧ 2ನೇ ಕಳಪೆ ಮೊತ್ತ
ಇನ್ನು ನಿನ್ನೆ ಲಂಕಾ ಗಳಿಸಿದ 55 ರನ್ ಗಳ ಮೊತ್ತ ಭಾರತದ ವಿರುದ್ಧ ದಾಖಲಾದ 2ನೇ ಕಳಪೆ ಮೊತ್ತವಾಗಿದೆ. ಇದೇ ವರ್ಷ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಲಂಕನ್ನರು 50ರನ್ ಗಳಿಗೆ ಆಲೌಟ್ ಆಗಿದ್ದರು. ಇದು ಶ್ರೀಲಂಕಾ ತಂಡದ 2ನೇ ಕಳಪೆ ಮೊತ್ತವಾಗಿ ದಾಖಲಾಗಿದೆ. ನಿನ್ನೆಯ ಪಂದ್ಯ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. 2014ರಲ್ಲಿ ಮೀರ್ ಪುರ್ ನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ (Bangladesh)ಭಾರತದ ವಿರುದ್ಧ 58ರನ್ ಗಳಿಗೆ ಆಲೌಟ್ ಆಗಿತ್ತು. ಇದು ಮೂರನೇ ಸ್ಥಾನದಲ್ಲಿದೆ.

Lowest ODI totals against India
50 by SL, Colombo RPS 2023 *
55 by SL, Mumbai WS, today*
58 by BAN, Mirpur 2014
65 by ZIM, Harare 2005
73 by SL, Trivandrum 2023

ವಿಶ್ವಕಪ್ ನಲ್ಲಿ ತಂಡವೊಂದರ ಅತ್ಯಂತ ಕಳಪೆ ಮೊತ್ತ
ಇನ್ನು ಲಂಕಾ ಗಳಿಸಿದ 55ರನ್ ಗಳ ಮೊತ್ತ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಮೊದಲ ಕಳಪೆ ಮೊತ್ತವಾಗಿದೆ. ಈ ಹಿಂದೆ 2011ರಲ್ಲಿ ಮೀರ್ ಪುರ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West indies) ವಿರುದ್ಧ ಬಾಂಗ್ಲಾದೇಶ 58ರನ್ ಗಳಿಗೆ ಆಲೌಟ್ ಆಗಿತ್ತು. ಇದು ಈ ವರೆಗೂ ವಿಶ್ವಕಪ್ ನಲ್ಲಿ ತಂಡವೊಂದರ ಕಳಪೆ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಇದೀಗ ಈ ದಾಖಲೆಯನ್ನು ಲಂಕಾ ತನ್ನ ಹೆಸರಿಗೆ ಬರೆದುಕೊಂಡಿದೆ.

Lowest totals in World Cups by a full-members team
55 - SL vs IND, Wankhede, today*
58 - BAN vs WI, Mirpur, 2011
74 - PAK vs ENG, Adelaide, 1992

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com