ICC Cricket World Cup 2023: ಶ್ರೀಲಂಕಾ ವಿರುದ್ಧ '5-ಫರ್' ಸಾಧನೆ, ಮಹಮದ್ ಶಮಿ ಹೆಸರಿಗೆ ತ್ರಿವಳಿ ದಾಖಲೆ

ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಗಳ ಗೊಂಚಲಿನ ಮೂಲಕ ಭಾರತ ತಂಡದ ವೇಗಿ ಮಹಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಮಹಮದ್ ಶಮಿ ದಾಖಲೆ
ಮಹಮದ್ ಶಮಿ ದಾಖಲೆ

ಮುಂಬೈ: ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ(ICC Cricket WorldCup 2023)ಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಗಳ ಗೊಂಚಲಿನ ಮೂಲಕ ಭಾರತ ತಂಡದ ವೇಗಿ ಮಹಮದ್ ಶಮಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಮಹಮದ್ ಶಮಿ (Mohammed Shami) 5 ಓವರ್ ಎಸೆದು 1 ಮೇಡಿನ್ ಸಹಿತ 3.60 ಸರಾಸರಿಯಲ್ಲಿ ಕೇವಲ 18ರನ್ ನೀಡಿ 5 ವಿಕೆಟ್ ಕಬಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಮಹಮದ್ ಸಿರಾಜ್ 7 ಓವರ್ ಎಸೆದು 2 ಮೇಡಿನ್ ಮಾಡಿ 2.30 ಸರಾಸರಿಯಲ್ಲಿ ಕೇವಲ 16ರನ್ ನೀಡಿ 3 ವಿಕೆಟ್ ಪಡೆದರು. ಈ ಜೋಡಿ ಭರ್ಜರಿ ಬೌಲಿಂಗ್ ಗೆ ಪತರುಗುಟ್ಟಿದ ಶ್ರೀಲಂಕಾ ತಂಡ (SriLanka) ಕೇವಲ 55 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ತಂಡ (Team india) 302 ರನ್ ಗಳ ಅಂತರದಲ್ಲಿ ಜಯ ಗಳಿಸಿ ಅಧಿಕೃತವಾಗಿ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಗೇರಿದ ಮೊದಲ ಎಂಬ ಕೀರ್ತಿಗೆ ಭಾಜನವಾಯಿತು.

ಅಂತೆಯೇ ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಬಾರಿ 4 ಪ್ಲಸ್ ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡರು. 2019 ರ ವಿಶ್ವಕಪ್‌ನಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ (4/40, 4/16 ಮತ್ತು 5/69) ಶಮಿ ಈ ಸಾಧನೆ ಮಾಡಿದ್ದಾರೆ. ಇದು ಅವರ ಎರಡನೇ ವಿಶ್ವಕಪ್ ಸರಣಿಯಾಗಿದ್ದು, ಪಾಕಿಸ್ತಾನ (Pakistan)ದ ವಕಾರ್ ಯೂನಿಸ್ ಮಾತ್ರ ಈ ಸಾಧನೆಯನ್ನು ಹೆಚ್ಚು ಬಾರಿ ಅಂದರೆ ಮೂರು ಬಾರಿ (1990 ರಲ್ಲಿ ಎರಡು ಬಾರಿ ಮತ್ತು 1994 ರಲ್ಲಿ ಒಮ್ಮೆ) ಸಾಧಿಸಿದ್ದಾರೆ.

ಶಮಿ ದಾಖಲೆಗಳ ಪಟ್ಟಿ
ಭಾರತ ಪರ ವಿಶ್ವಕಪ್​ಕಪ್​ನಲ್ಲಿ ಅತ್ಯಧಿಕ ವಿಕಟ್​

33 ವರ್ಷದ ಶಮಿ ಅವರು ಲಂಕಾ ವಿರುದ್ಧ 5 ವಿಕೆಟ್​ ಕೀಳುವ ಮೂಲಕ ಭಾರತ ಪರ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕಟ್​ ಕಿತ್ತ ಮೊದಲ ಬೌಲರ್​ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ಜಹೀರ್​ ಖಾನ್ (Zaheer khan)​ ಮತ್ತು ಜಾವಗಲ್​ ಶ್ರೀನಾಥ್ (javagal Srinath)​ ಅವರ ಹೆಸರಿನಲ್ಲಿತ್ತು. ಜಹೀರ್​ ಮತ್ತು ಶ್ರೀನಾಥ್​ ತಲಾ 44 ವಿಕೆಟ್​ ಪಡೆದಿದ್ದರು. ಆದರೆ ಈಗ ಶಮಿ 45* ವಿಕೆಟ್​ ಪಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. 33 ವಿಕೆಟ್​ ಪಡೆದಿರುವ ಜಸ್​ಪ್ರೀತ್​ ಬುಮ್ರಾ (Jasprit Bumrah) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೂ ಜಹೀರ್​ ಮತ್ತು ಶ್ರೀನಾಥ್​ ದಾಖಲೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಬುಮ್ರಾಗೆ ಇನ್ನು 12 ವಿಕೆಟ್​ ಬೇಕಿದೆ. 

Most wickets for India in World Cup
45 - Mohammed Shami*
44 - Zaheer Khan
44 - Javagal Srinath
33 - Jasprit Bumrah
31 - Anil Kumble

ವಿಶ್ವಕಪ್ ನ ಒಂದು ಆವೃತ್ತಿಯಲ್ಲಿ ಹೆಚ್ಚು ಬಾರಿ 4+ ವಿಕೆಟ್ ಸಾಧನೆ
ಇನ್ನು ವಿಶ್ವಕಪ್ ಟೂರ್ನಿ (ICC Cricket World Cup 2023)ಯ ಒಂದು ಆವೃತ್ತಿಯಲ್ಲಿ ಹೆಚ್ಚು ಬಾರಿ 4ಕ್ಕೂ ಅಧಿಕ ವಿಕೆಟ್ ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಇದೀಗ 5ನೇ ಸ್ಥಾನದಲ್ಲಿದ್ದಾರೆ. ಹಾಲಿ ಟೂರ್ನಿಯಲ್ಲಿ 3 ಬಾರಿ ಶಮಿ 4ಕ್ಕೂ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ (Shahid Afridi) ಮೊದಲ ಸ್ಥಾನದಲ್ಲಿದ್ದು, 2011ರಲ್ಲಿ ಅಫ್ರಿದಿ 4 ಪಂದ್ಯಗಳಲ್ಲಿ 4ಕ್ಕೂ ಹೆಚ್ಚು ವಿಕೆಟ್ ಗಳನ್ನು ಕಬಳಿಸಿದ್ದರು.

Most 4-wicket hauls in a World Cup edition
4 - Shahid Afridi in 2011
4 - Mitchell Starc in 2019
3 - Mohammed Shami in 2019
3 - Adam Zampa in 2023*
3 - Mohammed Shami in 2023*

ಏಕದಿನದಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ 5 ವಿಕೆಟ್ ಸಾಧನೆ ಮಾಡಿದ ಸಾಧಕರ ಪಟ್ಟಿಯಲ್ಲಿ ಮಹಮದ್ ಶಮಿ (Mohammed Shami) ಮೊದಲ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿತ್ತು. ಅವರು 3 ಬಾರಿ ಸಾಧನೆ ಮಾಡಿದ್ದು. ಇದೀಗ ಶಮಿ ನಾಲ್ಕು ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನ ಪಡೆದಿದ್ದಾರೆ.

Most ODI five-fors for India
4 - Mohammed Shami
3 - Javagal Srinath
3 - Harbhajan Singh

ವಿಶ್ವಕಪ್ ನಲ್ಲಿ ಹೆಚ್ಚು ಬಾರಿ 5 ವಿಕೆಟ್ ಗೊಂಚಲು: ಸ್ಟಾರ್ಕ್ ದಾಖಲೆ ಸರಿಗಟ್ಟಿದ ಶಮಿ
ಇನ್ನು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಬಾರಿ 5 ವಿಕೆಟ್ ಗಳ ಗೊಂಚಲು ಪಡೆದ ಆಟಗಾರರ ಪಟ್ಟಿಯಲ್ಲಿ ಭಾರತದ ಮಹಮದ್ ಶಮಿ ಆಸ್ಚ್ರೇಲಿಯಾದ ಮಿಚೆಲ್ ಸ್ಟಾರ್ಕ್ (Mitchell Starc) ದಾಖಲೆಯನ್ನು ಸರಿಗಟ್ಟಿದ್ದಾರೆ. ಶಮಿ ಮತ್ತು ಸ್ಟಾರ್ಕ್ ತಲಾ 3 ಬಾರಿ ವಿಶ್ವಕಪ್ ನಲ್ಲಿ 5 ವಿಕೆಟ್ ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ.

Most 5-fer in ODI World Cups
3 - Mitchell Starc
3 - Mohammed Shami*

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com