ICC Cricket World Cup 2023: ಪಾಕ್ ವಿರುದ್ಧ ರಚಿನ್ ರವೀಂದ್ರ ಶತಕ, ಸಚಿನ್ ರೆಕಾರ್ಡ್ ಸೇರಿ ಹಲವು ದಾಖಲೆ ಧೂಳಿಪಟ

ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕರ್ನಾಟಕ ಮೂಲದ ನ್ಯೂಜಿಲ್ಯಾಂಡ್ ತಂಡದ ಯುವ ಆಟಗಾರ ರಚೀನ್ ರವೀಂದ್ರ(Rachin Ravindra) ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ (Sachin Tendulkar)​ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ರಚಿನ್ ರವೀಂದ್ರ ದಾಖಲೆ
ರಚಿನ್ ರವೀಂದ್ರ ದಾಖಲೆ

ಬೆಂಗಳೂರು: ಹಾಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಇಂದಿನ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಕರ್ನಾಟಕ ಮೂಲದ ನ್ಯೂಜಿಲ್ಯಾಂಡ್ ತಂಡದ ಯುವ ಆಟಗಾರ ರಚೀನ್ ರವೀಂದ್ರ(Rachin Ravindra) ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ (Sachin Tendulkar)​ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

ಹೌದು.. ಪಾಕಿಸ್ತಾನ ವಿರುದ್ಧ ಕೇವಲ 94 ಎಸೆತಗಳಲ್ಲಿ 108ರನ್ ಸಿಡಿಸಿದ ರಚಿನ್ ರವೀಂದ್ರ ತಮ್ಮ ಈ ಅಮೋಘ ಶತಕದ ಮೂಲಕ ಭಾರತದ ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್(Sachin Tendulkar)​ ದಾಖಲೆ ಸೇರಿ ಹಲವರ ದಾಖಲೆಯನ್ನು ಮುರಿದಿದ್ದಾರೆ. ಇದು ರಚೀನ್​ ಅವರ ಚೊಚ್ಚಲ ವಿಶ್ವಕಪ್​ ಟೂರ್ನಿಯಾಗಿದ್ದು, ಇಂದಿನ ಶತಕವೂ ಸೇರಿದಂತೆ ರಚಿನ್ ಇಲ್ಲಿ ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.

ಸಚಿನ್​ ದಾಖಲೆ ಪತನ
ರಚಿನ್ ಶತಕ ಬಾರಿಸುವ ಮೂಲಕ ಟೀಮ್​ ಇಂಡಿಯಾದ ಮಾಜಿ ಆಟಗಾರ ಸಚಿನ್​ ತೆಂಡೂಲ್ಕರ್​ ಅವರ ವಿಶ್ವಕಪ್​ನ ದಾಖಲೆಯೊಂದನ್ನು ಮುರಿದರು. ಅತಿ ಕಿರಿಯ ವಯಸ್ಸಿನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 3 ಶತಕ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ರಚಿನ್ ಭಾಜನರಾಗಿದ್ದಾರೆ. ಈ ಹಿಂದೆ ಸಚಿನ್​ ತೆಂಡೂಲ್ಕರ್ ಅವರು 1996 ವಿಶ್ವಕಪ್​ ಟೂರ್ನಿಯಲ್ಲಿ 2 ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಚಿನ್​ ಅವರು ಕಳೆದ ಆಸೀಸ್​ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಸರಿಗಟ್ಟಿದ್ದರು. ಇದೀಗ ಪಾಕ್​ ವಿರುದ್ಧ ಶತಕ ಬಾರಿಸಿ ಸಚಿನ್​ ಅವರನ್ನು ಹಿಂದಿಕ್ಕಿದ್ದಾರೆ. ಉಭಯ ಆಟಗಾರರು ಈ ದಾಖಲೆಯನ್ನು ತಮ್ಮ 23ನೇ ವರ್ಷದಲ್ಲಿ ಮಾಡಿದ್ದಾರೆ.

ಸಚಿನ್​ ವಿಶ್ವಕಪ್​ ರನ್​ ದಾಖಲೆ ಸರಿಗಟ್ಟಿದ ರಚಿನ್​
ಇದೊಂದೇ ಅಲ್ಲ.. ರಚಿನ್ 25 ವರ್ಷದ ಒಳಗೆ ವಿಶ್ವಕಪ್​ ಆವೃತ್ತಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಸಚಿನ್​ ತೆಂಡೂಲ್ಕರ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್​ ಅವರು 1996ರ ವಿಶ್ವಕಪ್​ ಟೂರ್ನಿಯಲ್ಲಿ 523 ರನ್​ ಬಾರಿಸಿದ್ದರು. ಸದ್ಯ ರಚಿನ್ ಕೂಡ 523* ರನ್​ ಬಾರಿಸಿ ಈ ದಾಖಲೆ ಸರಿಗಟ್ಟಿದ್ದಾರೆ. ಮುಂದಿನ ಪಂದ್ಯದಲ್ಲಿ ಕೇವಲ ಒಂದು ರನ್​ ಗಳಿಸಿದರೂ ಸಚಿನ್​ ರ ಈ ದಾಖಲೆ ಪತನಗೊಳ್ಳಲಿದೆ.

Most runs in a single WC edition before turning 25
523 - Rachin Ravindra in 2023*
523 - Sachin Tendulkar in 1996
474 - Babar Azam in 2019
372 - AB de Villiers in 2007

ಕಿವೀಸ್​ನ ಮೊದಲ ಆಟಗಾರ
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್​ ಪರ ಮೂರು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ರಚಿನ್​ ಬರೆದಿದ್ದಾರೆ. ಅಲ್ಲದೆ ವಿಶ್ವಕಪ್​ ಆವೃತ್ತಿಯೊಂದರಲ್ಲಿ 500 ರನ್ ಗಡಿ ದಾಟಿದ ನ್ಯೂಜಿಲ್ಯಾಂಡ್​ನ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೇನ್​ ವಿಲಿಯಮ್ಸನ್ (2019 ರಲ್ಲಿ 578) ಮತ್ತು ಮಾರ್ಟಿನ್ ಗಪ್ಟಿಲ್ (2015 ರಲ್ಲಿ 547 ) ರನ್​ ಬಾರಿಸಿದ್ದರು.

Most runs in their maiden World Cup edition
532 - Jonny Bairstow in 2019 (11 inns)
522 - Rachin Ravindra in 2023 (8 inns)
474 - Babar Azam in 2019 (8 inns)
465 - Ben Stokes in 2019 (10 inns)

ಬಾಬರ್​ ಅಜಂ ದಾಖಲೆ ಪತನ
ಚೊಚ್ಚಲ ವಿಶ್ವಕಪ್​ ಆಡಿ ಅತ್ಯಧಿಕ ರನ್​ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಪಾಕ್​ ನಾಯಕ ಬಾಬರ್ ಅಜಂ ಅವರನ್ನು ರಚಿನ್ ಹಿಂದಿಕ್ಕಿದ್ದಾರೆ. 523 ರನ್​ ಗಳಿಸಿ ಬಾಬರ್​ ಅವರ ದಾಖಲೆಯನ್ನು ಮುರಿದರು. ಬಾಬರ್​ 2019ರ ಆವೃತ್ತಿಯ ವಿಶ್ವಕಪ್​ನಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದು 474 ರನ್​ ಬಾರಿಸಿ ಇದುವರೆಗೆ 2ನೇ ಸ್ಥಾನದಲ್ಲಿದ್ದರು. ಈಗ ಮೂರಕ್ಕೆ ಜಾರಿದ್ದಾರೆ. ದಾಖಲೆ ಜಾನಿ ಬೇರ್​ಸ್ಟೋ​ ಹೆಸರಿನಲ್ಲಿದೆ. ಅವರು 2019ರ ಆವೃತ್ತಿಯಲ್ಲಿ 11 ಪಂದ್ಯ ಆಡಿ 532 ರನ್​ ಬಾರಿಸಿದ್ದರು. ರಚಿನ್​ ಅವರು ಮುಂದಿನ ಪಂದ್ಯದಲ್ಲಿ 10 ರನ್​ ಬಾರಿಸಿದರೆ ಬೇರ್​ಸ್ಟೋ​ ದಾಖಲೆ ಪತನಗೊಳ್ಳಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com