ಅತಿ ವೇಗದ 50 ವಿಕೆಟ್‌: ಐಸಿಸಿ ವಿಶ್ವಕಪ್ ನಲ್ಲಿ ದಾಖಲೆ ಬರೆದ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್

ಭಾರತದ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಬೌಲರ್‌ ಎಂಬ ದಾಖಲೆಗೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್‌ ಪಾತ್ರರಾಗಿದ್ದಾರೆ. 
ಮಿಚೆಲ್ ಸ್ಟಾರ್ಕ್
ಮಿಚೆಲ್ ಸ್ಟಾರ್ಕ್

ಚೆನ್ನೈ: ಭಾರತದ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಬೌಲರ್‌ ಎಂಬ ದಾಖಲೆಗೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್‌ ಪಾತ್ರರಾಗಿದ್ದಾರೆ. 

ಭಾರತ (India vs Australia) ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಇಶಾನ್‌ ಕಿಶನ್‌ ವಿಕೆಟ್‌ ಪಡೆದ ಸ್ಟಾರ್ಕ್‌ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ಓವರ್‌ನಲ್ಲೇ ಇಶಾನ್‌ ವಿಕೆಟ್‌ ಪಡೆದರು. ಸ್ಲಿಪ್‌ನಲ್ಲಿ ನಿಂತಿದ್ದ ಗ್ರೀನ್‌ ಕ್ಯಾಚ್‌ ಪಡೆದು ಸಂಭ್ರಮಿಸಿದರು.

ಆ ಮೂಲಕ ಐಸಿಸಿ ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಬೌಲರ್ ಎನಿಸಿಕೊಂಡರು. ಈ ಸಾಧನೆಗಾಗಿ ಸ್ಟಾರ್ಕ್ 941 ಎಸೆತಗಳನ್ನು ಎಸೆದಿದ್ದಾರೆ. ಆ ಮೂಲಕ ಮಿಚೆಲ್ ಸ್ಟಾರ್ಕ್ ಐಸಿಸಿ ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ಆಸ್ಟ್ರೇಲಿಯದ ಎರಡನೇ ಮತ್ತು ಜಾಗತಿಕ ಐದನೇ ಬೌಲರ್ ಆಗಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳು
ಗ್ಲೆನ್ ಮೆಕ್‌ಗ್ರಾತ್ (71 ವಿಕೆಟ್)
ಮುತ್ತಯ್ಯ ಮುರಳೀಧರನ್ (68 ವಿಕೆಟ್)
ಲಸಿತ್ ಮಾಲಿಂಗ (56 ವಿಕೆಟ್)
ವಾಸಿಂ ಅಕ್ರಮ್ (55 ವಿಕೆಟ್)
ಮಿಚೆಲ್ ಸ್ಟಾರ್ಕ್ (50 ವಿಕೆಟ್)

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಆಸ್ಟ್ರೇಲಿಯಾದ ಗ್ಲೆನ್‌ ಮೆಕ್‌ಗ್ರಾತ್‌ (Glenn McGrath) ಹೆಸರಲ್ಲಿದೆ. ಅವರು 71 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಈ ಪಟ್ಟಿಯಲ್ಲಿ ಶ್ರೀಲಂಕಾ ಸ್ಪಿನ್ನರ್‌‌ ಮುತ್ತಯ್ಯ ಮುರಳೀಧರನ್ ಹಾಗೂ ವೇಗಿ ಮಲಿಂಗಾ ಸ್ಥಾನ ಪಡೆದಿದ್ದಾರೆ. ಆಸೀಸ್‌ ವೇಗಿ ಸ್ಟಾರ್ಕ್‌ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ಶ್ರೀಲಂಕಾ ವೇಗಿ ಲಸಿತ್‌ ಮಲಿಂಗಾ ದಾಖಲೆಯನ್ನು ಮುರಿದಿದ್ದಾರೆ.

ಈ ಹಿಂದೆ ಮಲಿಂಗಾ 25 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಮತ್ತೊಂದೆಡೆ ಅತಿ ಕಡಿಮೆ ಎಸೆತಗಳಲ್ಲಿ 50 ವಿಕೆಟ್‌ ಪಡೆದ ಸಾಧನೆಯೂ ಸ್ಟಾರ್ಕ್‌ ಹೆಸರಲ್ಲಿ ದಾಖಲಾಗಿದೆ. ಈ ಸಾಧನೆಗೆ ಅವರು ಎಸೆದಿದ್ದು 941 ಎಸೆತಗಳು ಮಾತ್ರ. ಲಂಕಾ ವೇಗಿ ಮಲಿಂಗಾ ಈ ಹಿಂದೆ 1187 ಎಸೆತಗಳಲ್ಲಿ ಅರ್ಧಶತಕದ ಸಾಧನೆ ಮಾಡಿದ್ದರು. ಇದೀಗ ಈ ಪಟ್ಟಿಯಲ್ಲಿ ಸ್ಟಾರ್ಕ್‌ ಅಗ್ರಸ್ಥಾನ ಪಡೆದಿದ್ದಾರೆ.

ವಿಶ್ವಕಪ್‌ನಲ್ಲಿ ಕಡಿಮೆ ಎಸೆತಗಳಲ್ಲಿ 50 ವಿಕೆಟ್‌ ಕಬಳಿಸಿದ ಬೌಲರ್‌ಗಳು
ಮಿಚೆಲ್ ಸ್ಟಾರ್ಕ್ (941 ಎಸೆತಗಳು)
ಲಸಿತ್ ಮಾಲಿಂಗ (1187 ಎಸೆತಗಳು) 
ಗ್ಲೆನ್ ಮೆಕ್‌ಗ್ರಾತ್ (1540 ಎಸೆತಗಳು) 
ಎಂ ಮುರಳೀಧರನ್ (1562 ಎಸೆತಗಳು) 
ವಾಸಿಂ ಅಕ್ರಮ್ (1748 ಎಸೆತಗಳು) 

Fewest balls taken to 50 wickets in World Cup:
941 - Mitchell Starc*
1187 - Lasith Malinga
1540 - Glenn McGrath
1562 - M Muralitharan
1748 - Wasim Akram

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com