ಭಾರತದ ಬೃಹತ್ ಮೊತ್ತದ ಹೊರತಾಗಿಯೂ ಸೋಲಿನ ಭೀತಿ ಮೂಡಿಸಿದ ಬ್ರೇಸ್ ವೆಲ್ ಆರ್ಭಟಕ್ಕೆ ಹಲವು ದಾಖಲೆಗಳು ಧೂಳಿಪಟ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭಾರತದ ಬೃಹತ್ ಮೊತ್ತದ ಹೊರತಾಗಿಯೂ ಸೋಲಿನ ಭೀತಿ ಎದುರಿಸಿತ್ತು. ಇದಕ್ಕೆ ಕಾರಣ ನ್ಯೂಜಿಲೆಂಡ್ ಕೆಳಕ್ರಮಾಂಕದಲ್ಲಿ ಆರ್ಭಟಿಸಿದ ಆಲ್ ರೌಂಡರ್ ಮೈಕೆಲ್ ಬ್ರೇಸ್ ವೆಲ್...
ಬ್ರೇಸ್ ವೆಲ್ ಬ್ಯಾಟಿಂಗ್
ಬ್ರೇಸ್ ವೆಲ್ ಬ್ಯಾಟಿಂಗ್

ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭಾರತದ ಬೃಹತ್ ಮೊತ್ತದ ಹೊರತಾಗಿಯೂ ಸೋಲಿನ ಭೀತಿ ಎದುರಿಸಿತ್ತು. ಇದಕ್ಕೆ ಕಾರಣ ನ್ಯೂಜಿಲೆಂಡ್ ಕೆಳಕ್ರಮಾಂಕದಲ್ಲಿ ಆರ್ಭಟಿಸಿದ ಆಲ್ ರೌಂಡರ್ ಮೈಕೆಲ್ ಬ್ರೇಸ್ ವೆಲ್...

ಹೌದು.. ಭಾರತದ ವಿರುದ್ಧ ಅಕ್ಷರಶಃ ಆರ್ಭಟಿಸಿದ ಬ್ರೇಸ್ ವೆಲ್ ಕೇವಲ 78 ಎಸೆತಗಳಲ್ಲಿ 140 ರನ್ ಗಳನ್ನು ಸಿಡಿಸಿದ್ದರು. ಅವರ ಈ ಅಮೋಘ ಬ್ಯಾಟಿಂಗ್ ನಲ್ಲಿ ಬರೊಬ್ಬರಿ 10 ಸಿಕ್ಸರ್ ಹಾಗೂ 12 ಬೌಂಡರಿಗಳು ಸೇರಿದ್ದವು. ಈ ಅಮೋಘ ಬ್ಯಾಟಿಂಗ್ ಮೂಲಕ ಬ್ರೇಸ್ ವೆಲ್ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. 

ಹೌದು..ಬ್ರೇಸ್‌ವೆಲ್ ODI ಕ್ರಿಕೆಟ್‌ನ ಇತಿಹಾಸದಲ್ಲಿ MS ಧೋನಿ ನಂತರ 7ನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ  ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಬಹು ಶತಕಗಳನ್ನು ಗಳಿಸಿದ ಎರಡನೇ ಬ್ಯಾಟರ್ ಆಗಿದ್ದಾರೆ. ಕಳೆದ ಜುಲೈನಲ್ಲಿ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧ 301 ರನ್ ಚೇಸಿಂಗ್ ವೇಳೆ ಕೇವಲ 82 ಎಸೆತಗಳಲ್ಲಿ ಅಜೇಯ 127 ರನ್ ಸಿಡಿಸಿದ್ದರು. ನಂತರ ಈ ಸ್ವರೂಪದಲ್ಲಿ ಅವರ ಎರಡನೇ ಮೂರು ಅಂಕಿ ಸ್ಕೋರ್ ಇದಾಗಿದೆ. ಒಟ್ಟಾರೆಯಾಗಿ, ODIಗಳಲ್ಲಿ ಏಳು ಅಥವಾ ಅದಕ್ಕಿಂತ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಜಂಟಿ ಮೂರನೇ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ.

ನ್ಯೂಜಿಲೆಂಡ್ ಪರ ವೇಗದ ಶತಕ
ಇದೇ ಪಂದ್ಯದಲ್ಲಿ ಬ್ರೇಸ್ ವೆಲ್ ನ್ಯೂಜಿಲೆಂಡ್ ಪರ ವೇಗದ ಶತಕ ಸಿಡಿಸಿದ ದಾಖಲೆ ಮಾಡಿದ್ದು, ಈ ಪಂದ್ಯದಲ್ಲಿ ಅವರು ಕೇವಲ 57 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ನ್ಯೂಜಿಲೆಂಡ್ ಪರ ದಾಖಲಾದ 3ನೇ ವೇಗದ ಶತಕವಾಗಿದೆ. ಈ ಹಿಂದೆ 2014ರಲ್ಲಿ ವಿಂಡೀಸ್ ವಿರುದ್ಧ ಕೋರಿ ಆ್ಯಂಡರ್ಸನ್ ಸಿಡಿಸಿದ 36 ಎಸೆತೆಗಳ ಶತಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕ್ರಿಕೆಟ್ ಇತಿಹಾಸದಲ್ಲಿ 2005ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಶಾಹಿದ್ ಅಫ್ರಿದಿ ಗಳಿಸಿದ 45 ಎಸೆತಗಳ ಶತಕ ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ವೇಗದ ಶತಕವಾಗಿದೆ.

STAT: Fastest ODI 100s for New Zealand (balls faced)
36 Corey Anderson vs WI Queenstown 2014
46 Jesse Ryder vs WI Queenstown 2014
57 Michael Bracewell vs Ind Hyderabad 2023 *
67 Craig McMillan vs Aus Hamilton 2007 

ಜೊತೆಯಾಟದಲ್ಲೂ ದಾಖಲೆ
ಇನ್ನು ಕೇವಲ ಬ್ರೇಸ್ ವೆಲ್ ಬ್ಯಾಟಿಂಗ್ ಮಾತ್ರವಲ್ಲದೇ ಜೊತೆಯಾಟದಲ್ಲೂ ಈ ನ್ಯೂಜಿಲೆಂಡ್ ಇನ್ನಿಂಗ್ಸ್ ದಾಖಲೆ ನಿರ್ಮಿಸಿದ್ದು, ಬ್ರೇಸ್‌ವೆಲ್ ಮತ್ತು ಸ್ಯಾಂಟ್ನರ್ ನಡುವಿನ 162 ರನ್‌ಗಳ ಜೊತೆಯಾಟವು ODI ಕ್ರಿಕೆಟ್‌ನಲ್ಲಿ ಏಳನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ದಾಖಲಾದ ಮೂರನೇ ಗರಿಷ್ಠ ರನ್ ಜೊತೆಯಾಟವಾಗಿದೆ..

ಅಂತೆಯೇ ನ್ಯೂಜಿಲೆಂಡ್‌ ಪರ ಇದು ಅತ್ಯಧಿಕ ಜೊತೆಯಾಟವಾಗಿದೆ, 2010 ರಲ್ಲಿ ನೇಪಿಯರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಜಾಕಬ್ ಓರಮ್ ಮತ್ತು ನೀಲ್ ಬ್ರೂಮ್ ಅವರು 123 ರನ್ ಗಳಿಸಿದ್ದರು. ಈ ದಾಖಲೆಯನ್ನು ಬೇರ್ಸ್ ವೆಲ್-ಸ್ಯಾಂಟ್ನರ್ ಜೋಡಿ ಹಿಂದಿಕ್ಕಿಗೆ. ಕಳೆದ ತಿಂಗಳು ಮೀರ್‌ಪುರದಲ್ಲಿ ಭಾರತ ವಿರುದ್ಧ ಮಹಮ್ಮದುಲ್ಲಾ ಮತ್ತು ಮೆಹಿದಿ ಹಸನ್ ಜೋಡಿ 148 ರನ್ ಗಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com