WTC ಫೈನಲ್, 2ನೇ ದಿನದಾಟ ಅಂತ್ಯಕ್ಕೆ ಭಾರತ 151/5, 318 ರನ್ ಗಳ ಹಿನ್ನಡೆ

ಇಲ್ಲಿನ ಓವೆಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್  ನ ಎರಡನೇ ದಿನದಾಟವಾದ ಗುರುವಾರ ಭಾರತೀಯ ಬೌಲರ್ ಗಳ ಉತ್ತಮ ಕಮ್ ಬ್ಯಾಕ್ ಹೊರತಾಗಿಯೂ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿತು.
ಆಸ್ಟ್ರೇಲಿಯಾ ಆಟಗಾರರ ಸಂಭ್ರಮ
ಆಸ್ಟ್ರೇಲಿಯಾ ಆಟಗಾರರ ಸಂಭ್ರಮ

ಲಂಡನ್: ಇಲ್ಲಿನ ಓವೆಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್  ನ ಎರಡನೇ ದಿನದಾಟವಾದ ಗುರುವಾರ ಭಾರತೀಯ ಬೌಲರ್ ಗಳ ಉತ್ತಮ ಕಮ್ ಬ್ಯಾಕ್ ಹೊರತಾಗಿಯೂ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿತು.

ಮೊಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾವನ್ನು 469 ರನ್‌ಗಳಿಗೆ ಆಲೌಟ್ ಮಾಡಿತು.ನಂತರ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನೇತೃತ್ವದ ತಂಡ, ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಬ್ಮಾನ್ ಗಿಲ್ ಇಬ್ಬರನ್ನೂ ಕೇವಲ 30 ರನ್ ಗಳಿಗೆ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.

ಭರವಸೆಯ ಆಟಗಾರರಾದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಕೂಡಾ ಕೇವಲ 14 ರನ್ ಗಳಿಸಿ ಫೆವಿಲಿಯನ್ ಕಡೆ ಹೆಜ್ಜೆ ಹಾಕಿದರು.  ಆಲ್ ರೌಂಡರ್ ಖ್ಯಾತಿಯ ರವೀಂದ್ರ ಜಡೇಜಾ 48 ರನ್ ಗಳಿಸಿದಾಗ ಸ್ಮಿತ್ ಗೆ ಕ್ಯಾಚ್ ನೀಡಿದರು. ಅಜಿಂಕಾ ರೆಹಾನ್ಯ ಅಜೇಯ 29 ಮತ್ತು ಶ್ರೀಕಾರ್ ಭರತ್ 5 ರನ್ ಗಳೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com