ಸ್ಕೂಲ್ ಕ್ರಶ್ ಜೊತೆಗೆ ಸಿಎಸ್‌ಕೆ ಸ್ಟಾರ್ ಪ್ಲೇಯರ್ ತುಷಾರ್ ದೇಶಪಾಂಡೆ ನಿಶ್ಚಿತಾರ್ಥ!

16ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ತುಷಾರ್ ದೇಶಪಾಂಡೆ ಜೂನ್ 13 ರಂದು ತಮ್ಮ ಶಾಲೆಯ ಕ್ರಶ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ಸ್ಕೂಲ್ ಕ್ರಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಸಿಎಸ್‌ಕೆ ಸ್ಟಾರ್ ಪ್ಲೇಯರ್!
ಸ್ಕೂಲ್ ಕ್ರಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಸಿಎಸ್‌ಕೆ ಸ್ಟಾರ್ ಪ್ಲೇಯರ್!
Updated on

16ನೇ ಆವೃತ್ತಿಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ತುಷಾರ್ ದೇಶಪಾಂಡೆ ಜೂನ್ 13 ರಂದು ತಮ್ಮ ಶಾಲೆಯ ಕ್ರಶ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತುಷಾರ್ ದೇಶಪಾಂಡೆ ಮತ್ತು ಗೆಳತಿ ನಭಾ ಗಡ್ಡಂವಾರ್‌ ಇಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

ನಿಶ್ಚಿತಾರ್ಥಕ್ಕೂ ಕ್ರಿಕೆಟ್‌ನ ಸ್ಪರ್ಶ ನೀಡಿರುವ ಅವರು, ಕೆಂಪು ಬಣ್ಣದ ಚೆಂಡಿನ ಮೇಲೆ ಉಂಗುರಗಳನ್ನಿಟ್ಟು ಪೋಸ್ ನೀಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಪೊಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಸಿಎಸ್‌ಕೆ ವೇಗಿ `ನನ್ನ ಶಾಲೆಯಲ್ಲಿನ ಕ್ರಶ್ ಆಗಿದ್ದ ನಭಾ ಈಗ ಬಾಳಸಂಗಾತಿಯಾಗಿ ಬಡ್ತಿ ಪಡೆದಿದ್ದಾಳೆ' ಎಂದು ಬರೆದುಕೊಂಡಿದ್ದಾರೆ.

'12.06.23 ರಂದು ಆಕೆ ನನ್ನ ಶಾಲೆಯ ಕ್ರಶ್ ಹುದ್ದೆಯಿಂದ ನನ್ನ ಬಾಳಸಂಗಾತಿಯಾಗಿ ಬಡ್ತಿ ಪಡೆದಳು' ಎಂದು ತುಷಾರ್ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.

ಐಪಿಎಲ್ ಚಾಂಪಿಯನ್ ಸಿಎಸ್‌ಕೆ ಪರ 16 ಪಂದ್ಯಗಳಲ್ಲಿ 21 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತುಷಾರ್ ಅಗ್ರ ಆಟಗಾರರಲ್ಲಿ ಒಬ್ಬರಾಗಿದ್ದರು.

ಜೂನ್ 3 ರಂದು ತಮ್ಮ ದೀರ್ಘಕಾಲದ ಪ್ರೇಯಸಿ ಹಾಗೂ ಕ್ರಿಕೆಟ್ ಆಟಗಾರ್ತಿ ಉತ್ಕರ್ಷ ಪವಾರ್ ಅವರನ್ನು ವರಿಸಿದ ಸಿಎಸ್‌ಕೆ ತಂಡದ ಸಹ ಆಟಗಾರ ರುತುರಾಜ್ ಗಾಯಕ್ವಾಡ್ ದಂಪತಿಗೆ ಶುಭಕೋರಿದ್ದಾರೆ.

'ಶುಭಾಶಯಗಳು ದೇಶಪಾಂಡೆ, ಕ್ಲಬ್‌ಗೆ ಸ್ವಾಗತ' ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com