3ನೇ ಟೆಸ್ಟ್ ಸೋಲಿನ ಬೆನ್ನಲ್ಲೇ ಬಿಸಿಸಿಐ ಐಸಿಸಿ ಶಾಕ್: ಇಂದೋರ್ ಪಿಚ್ ಗೆ ಕಳಪೆ ರೇಟಿಂಗ್!

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದೋರ್ ಸ್ಟೇಡಿಯಂನಲ್ಲಿ ಮೂರನೇ ದಿನಕ್ಕೆ ಮುಕ್ತಾಯಗೊಂಡಿದ್ದು ಪಿಚ್ ಗೆ ಸಂಬಂಧಿಸಿದಂತೆ ಐಸಿಸಿಯಿಂದ ದೊಡ್ಡ ಶಿಕ್ಷೆಯಾಗಿದೆ.
ಇಂದೋರ್ ಪಿಚ್ ವೀಕ್ಷಿಸುತ್ತಿರುವ ದ್ರಾವಿಡ್-ರೋಹಿತ್
ಇಂದೋರ್ ಪಿಚ್ ವೀಕ್ಷಿಸುತ್ತಿರುವ ದ್ರಾವಿಡ್-ರೋಹಿತ್

ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಇಂದೋರ್ ಸ್ಟೇಡಿಯಂನಲ್ಲಿ ಮೂರನೇ ದಿನಕ್ಕೆ ಮುಕ್ತಾಯಗೊಂಡಿದ್ದು ಪಿಚ್ ಗೆ ಸಂಬಂಧಿಸಿದಂತೆ ಐಸಿಸಿಯಿಂದ ದೊಡ್ಡ ಶಿಕ್ಷೆಯಾಗಿದೆ.

ಆಸ್ಟ್ರೇಲಿಯ ವಿರುದ್ಧ ಇಂದೋರ್ ಟೆಸ್ಟ್ ನಲ್ಲಿ ಭಾರತ ತಂಡ 9 ವಿಕೆಟ್ ಗಳಿಂದ ಹೀನಾಯ ಸೋಲು ಕಂಡಿದೆ. ಮೂರನೇ ದಿನದ ಮೊದಲ ಸೆಷನ್‌ನಲ್ಲಿ ಪಂದ್ಯ ಅಂತ್ಯಗೊಂಡಿತು. ಇದಕ್ಕಾಗಿ ಪಿಚ್ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು. ಅನೇಕ ಹಿರಿಯ ಆಟಗಾರರು ಪಿಚ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೂಡ ಪಿಚ್ ಬಗ್ಗೆ ದೊಡ್ಡ ಶಿಕ್ಷೆ ನೀಡಿದೆ.

ವಾಸ್ತವವಾಗಿ, ಇಂದೋರ್ ಪಿಚ್‌ಗೆ ಐಸಿಸಿ ಕಳಪೆ ರೇಟಿಂಗ್ ನೀಡಿದೆ. ಐಸಿಸಿ ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆಯ ಅಡಿಯಲ್ಲಿ ಈ ರೇಟಿಂಗ್ ನೀಡಲಾಗಿದೆ. ಇದರೊಂದಿಗೆ ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂಗೆ ಮ್ಯಾಚ್ ರೆಫರಿ ವರದಿಯ ನಂತರ ಮೂರು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ.

ಐಸಿಸಿಗೆ ಮ್ಯಾಚ್ ರೆಫರಿ ವರದಿ ಕಳುಹಿಸಿದ್ದರು!
ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಎರಡೂ ತಂಡಗಳ ಅಧಿಕಾರಿಗಳು ಮತ್ತು ನಾಯಕರೊಂದಿಗೆ ಪಂದ್ಯದ ಬಗ್ಗೆ ಚರ್ಚಿಸಿದ್ದರು. ಕ್ರಿಸ್ ಬ್ರಾಡ್ ಮುಂದೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು. ಇದೆಲ್ಲದರ ನಂತರ ವರದಿಯನ್ನು ಸಿದ್ಧಪಡಿಸಿ ಐಸಿಸಿಗೆ ಕಳುಹಿಸಲಾಗಿದೆ. ಬಿಸಿಸಿಐಗೂ ವರದಿ ಕಳುಹಿಸಲಾಗಿದೆ. ಈಗ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಲು 14 ದಿನ ಕಾಲಾವಕಾಶವಿದೆ. ಕ್ರಿಸ್ ಬ್ರಾಡ್, 'ಆ ಪಿಚ್ ತುಂಬಾ ಶುಷ್ಕವಾಗಿತ್ತು. ಇದರಲ್ಲಿ ಬ್ಯಾಟ್ಸ್‌ಮನ್ ಮತ್ತು ಬೌಲರ್ ನಡುವೆ ಸಮತೋಲನ ಇರಲಿಲ್ಲ. ಇಲ್ಲಿ ಆರಂಭದಿಂದಲೂ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗಿತ್ತು. ಪಂದ್ಯದುದ್ದಕ್ಕೂ ಅಸಮಾನ ಬೌನ್ಸ್ ಕಂಡುಬಂದಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com