
ಡೆಲ್ಲಿ ಕ್ಯಾಪಿಟಲ್ಸ್ ಗೆ ಜಯ
ಮುಂಬೈ: ಮಹಿಳಾ ಪ್ರೀಮೀಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಮಹಿಳೆಯರ ತಂಡ 9 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.
ಮುಂಬೈ ನೀಡಿದ 110 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 9 ಓವರ್ ನಲ್ಲಿ 1 ವಿಕೆಟ್ ಕಳೆದುಕೊಂಡು 110ರನ್ ಗಳಿಸಿ 9 ವಿಕೆಟ್ ಗಳ ಅಂತರದ ಗೆಲುವು ಸಾಧಿಸಿದೆ.
An innings full of entertainment @AliceCapsey hammered 5⃣ sixes in her match-winning 38* off just 17 balls! #TATAWPL | #mivdc
WATCH here knock herehttps://t.co/7eOmHswZe4 pic.twitter.com/cNrr8Ng0sw— Women's Premier League (WPL) (@wplt20) March 20, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿತು. ಕೇವಲ 10 ರನ್ ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಕ್ರೀಸ್ ಗೆ ಬಂದ ಹರ್ಮನ್ ಪ್ರೀತ್ ಕೌರ್ 23 ರನ್ ಗಳಿಸಿ ಭರವಸೆ ಮೂಡಿಸಿದ್ದರಾದರೂ ಶಿಖಾ ಪಾಂಡೇ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ಪೂಜಾ ವಸ್ತ್ರಾಕರ್ (26 ರನ್) ಮತ್ತು ವಾಂಗ್ (23 ರನ್) ಜೋಡಿ ತಂಡದ ಮೊತ್ತ 100 ಗಡಿ ದಾಟಲು ನೆರವಾದರು. ಅಂತಿಮವಾಗಿ ನಿಗದಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 109ರನ್ ಗಳಿಸಿತು. ಡೆಲ್ಲಿ ಪರ ಮರಿಜಾನ್ನೆ ಕ್ಯಾಪ್, ಶಿಖಾ ಪಾಂಡೆ ಮತ್ತು ಜೋನಾಸೆನ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ: ಮುಂದಿನ ಸಲ ಕಪ್ ನಮ್ದೇ: ಯುಪಿ ವಾರಿಯರ್ಸ್ ಗೆ ಗೆಲುವು; RCB ಮಹಿಳಾ ತಂಡ ಪ್ಲೇಆಫ್ ನಿಂದ ಹೊರಕ್ಕೆ!
ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕಿ ಮೆಗ್ ಲ್ಯಾನಿಂಗ್ (ಅಜೇಯ 32 ರನ್), ಶಫಾಲಿ ವರ್ಮಾ (33ರನ್) ಮತ್ತು ಆಲಿಸ್ ಕ್ಯಾಪ್ಸಿ (ಅಜೇಯ 38 ರನ್) ಬ್ಯಾಟಿಂಗ್ ನೆರವಿನಿಂದ 110 ರನ್ ಗಳಿಸಿ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.