ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023: ಕೊಹ್ಲಿ ಮ್ಯಾಜಿಕ್ ಗೆ ಹಲವು ದಾಖಲೆಗಳು ಪತನ, ಪುಣೆ ಮೈದಾನದಲ್ಲಿ 'ವಿರಾಟ' ದರ್ಶನ

ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆರ್ಭಟ ಮುಂದುವರೆದಿದ್ದು, ಪುಣೆ ಮೈದಾನದಲ್ಲಿನ ಕೊಹ್ಲಿ ಮ್ಯಾಜಿಕಲ್ ಬ್ಯಾಟಿಂಗ್ ಗೆ ಹಲವು ದಾಖಲೆಗಳು ಪತನವಾಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಪುಣೆ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಆರ್ಭಟ ಮುಂದುವರೆದಿದ್ದು, ಪುಣೆ ಮೈದಾನದಲ್ಲಿನ ಕೊಹ್ಲಿ ಮ್ಯಾಜಿಕಲ್ ಬ್ಯಾಟಿಂಗ್ ಗೆ ಹಲವು ದಾಖಲೆಗಳು ಪತನವಾಗಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 41.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿತು. ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಕೊಹ್ಲಿ ಕೇವಲ 97 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ ಅಜೇಯ 103ರನ್ ಗಳಿಸಿ ತಂಡಕ್ಕೆ ಜಯ ತಂದಿತ್ತರು.

ಈ ಪಂದ್ಯದ ಅದ್ಭುತ ಬ್ಯಾಟಿಂಗ್ ಮೂಲಕ ಕೊಹ್ಲಿ ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳನ್ನು ಮುರಿದಿದ್ದಾರೆ. 

ವಿಶ್ವಕಪ್ ನಲ್ಲಿ ಅತೀ ಹೆಚ್ಚು ಶತಕ, 5ನೇ ಸ್ಥಾನದಲ್ಲಿ ಕೊಹ್ಲಿ
ಇನ್ನು ಇಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿನ ಶತಕದ ಮೂಲಕ ವಿರಾಟ್ ಕೊಹ್ಲಿ ತಮ್ಮ ವಿಶ್ವಕಪ್ ಟೂರ್ನಿಯಲ್ಲಿ ಶತಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿಕೊಂಡರು. ಅಂತೆಯೇ ಇದು ಚೇಸಿಂಗ್ ನಲ್ಲಿ ಬಂದ ಅವರ ಮೊದಲ ಶತಕ ಕೂಡ ಆಗಿದೆ. ಅಲ್ಲದೆ ಭಾರತ ವಿಶ್ವಕಪ್ ಟೂರ್ನಿಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 5ನೇ ಸ್ಥಾನಕ್ಕೇರಿದರು. ಈ ಪಟ್ಟಿಯಲ್ಲಿ 7 ಶತಕಗಳನ್ನು ಸಿಡಿಸಿರುವ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದು, 6 ಶತಕಗಳನ್ನು ಸಿಡಿಸಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 2ನೇ ಸ್ಥಾನದಲ್ಲಿದ್ದಾರೆ. 4 ಶತಕಗಳನ್ನು ಸಿಡಿಸಿರುವ ಸೌರವ್ ಗಂಗೂಲಿ 3ನೇ ಸ್ಥಾನದಲ್ಲಿದ್ದು, ತಲಾ 3 ಶತಕಗಳನ್ನು ಸಿಡಿಸಿರುವ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜಂಟಿ 4ನೇ ಸ್ಥಾನದಲ್ಲಿದ್ದಾರೆ.

Most World Cup hundreds for India
7 - Rohit Sharma
6 - Sachin Tendulkar
4 - Sourav Ganguly
3 - Shikhar Dhawan
3 - Virat Kohli
*This was Kohli’s first hundred in a World Cup chase.

ಪುಣೆ ಮೈದಾನದಲ್ಲಿ ಕೊಹ್ಲಿ 500 ರನ್ ದಾಖಲೆ
ಇನ್ನು ಇಂದಿನ ಶತಕದ ಮೂಲಕ ವಿರಾಟ್ ಕೊಹ್ಲಿ ಪುಣೆ ಮೈದಾನದಲ್ಲಿನ ತಮ್ಮ ರನ್ ಗಳಿಕೆಯನ್ನು 500ಕ್ಕೆ ಏರಿಕೆ ಮಾಡಿಕೊಂಡರು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 61 ರನ್ ಸಿಡಿಸಿದ್ದರು. ಬಳಿಕ 2017ರಲ್ಲಿ ಇಂಗ್ಲೆಂಡ್ ವಿರುದ್ಧ 122ರನ್, ಅದೇ ವರ್ಷ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 29ರನ್ ಗಳಿಸಿದ್ದರು. ಬಳಿಕ 2017ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ 107ರನ್ ಗಳಿಸಿದ್ದರು. 2021ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ನಡೆದ 2 ಪಂದ್ಯಗಳಲ್ಲಿ ಕ್ರಮವಾಗಿ 56 ರನ್, 66 ರನ್ ಮತ್ತು 7 ರನ್ ಗಳಿಸಿದ್ದರು. ಬಳಿಕ ಇಂದು ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 103ರನ್ ಗಳಿಸಿದ್ದಾರೆ. ಆ ಮೂಲಕ ಪುಣೆ ಮೈದಾನದಲ್ಲಿನ ತಮ್ಮ ರನ್ ಗಳಿಕೆಯನ್ನು 551ರನ್ ಗಳಿಕೆ ಏರಿಕೆ ಮಾಡಿಕೊಂಡಿದ್ದಾರೆ. ಕೊಹ್ಲಿ 8 ಇನ್ನಿಂಗ್ಸ್ ಗಳಲ್ಲಿ 78.71ಸರಾಸರಿಯಲ್ಲಿ 94.34ಸ್ಟ್ರೈಕ್ ರೇಟ್ ನಲ್ಲಿ 551ರನ್ ಗಳಿಸಿದ್ದಾರೆ.

Virat Kohli in ODIs at the MCA, Pune
61(85) vs AUS, 2013
122(105) vs ENG, 2017
29(29) vs NZ, 2017
107(119) vs WI, 2018
56(60) vs ENG, 2021
66(79) vs ENG, 2021
7(10) vs ENG, 2021
103*(97) vs BAN, today
Total: 8 inns, 551 runs at 78.71, SR: 94.34

500-plus ODI runs for Virat Kohli at a venue
800 - SBNS, Mirpur, Dhaka
644 - RPS, Colombo
587 - Visakhapatnam
571 - Port of Spain, Trinidad
551 - MCA, Pune

ಒಂದೇ ಮೈದಾನದಲ್ಲಿ ಅತೀ ಹೆಚ್ಚು ರನ್ ಗಳಿಕೆ
ಕೊಹ್ಲಿ ವಿಶಾಖಪಟ್ಟಣಂನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದು, ಇಲ್ಲಿ ಅವರ ರನ್ ಗಳಿಕೆ 587 ರನ್ ಗಳಾಗಿದೆ. 2ನೇ ಸ್ಥಾನದಲ್ಲಿ ಪುಣೆ ಮೈದಾನವಿದೆ. ಇಲ್ಲಿ ಕೊಹ್ಲಿ 551ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ಇದ್ದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತೆಂಡೂಲ್ಕರ್ ಒಟ್ಟು 534  ರನ್ ಕಲೆಹಾಕಿದ್ದಾರೆ. ಬಳಿಕ ಗ್ವಾಲಿಯರ್ ಮೈದಾನದಲ್ಲಿ ಸಚಿನ್ 529 ರನ್ ಮತ್ತು ಕೋಲ್ಕತಾದ ಈಡನ್ ಗಾರ್ಡೆನ್ಸ್ ಮೈದಾನದಲ್ಲಿ 496ರನ್ ಕಲೆ ಹಾಕಿದ್ದಾರೆ.

Most ODI runs at an Indian venue
587 - Virat Kohli, Visakhapatnam
551 - Virat Kohli, Pune
534 - Sachin Tendulkar, Bengaluru
529 - Sachin Tendulkar, Gwalior
496 - Sachin Tendulkar, Kolkata

ಒಂದೇ ತಂಡದ ವಿರುದ್ಧ 2 ಶತಕ
ಇನ್ನು ವಿಶ್ವಕಪ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 2 ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಕೊಹ್ಲಿ ಸ್ಥಾನ ಗಳಿಸಿದ್ದು, ಬಾಂಗ್ಲಾದೇಶದ ವಿರುದ್ಧ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕೀನ್ಯಾ ವಿರುದ್ಧ, ರೊಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ತಲಾ 2 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

India batters with two (or more) WC hundreds against a team
2 - Sachin Tendulkar vs Kenya
2 - Sourav Ganguly vs Kenya
2 - Rohit Sharma vs Bangladesh
2 - Virat Kohli vs Bangladesh

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com