2ನೇ ಏಕದಿನ ಪಂದ್ಯ: ಆಸಿಸ್ ವಿರುದ್ದ ಶುಭ್ ಮನ್ ಗಿಲ್ ಭರ್ಜರಿ ಶತಕ, ಎಲೈಟ್ ಗ್ರೂಪ್ ಸೇರಿದ 'ಟೀಂ ಇಂಡಿಯಾ ಬ್ಯಾಟಿಂಗ್ ಸೆನ್ಸೇಷನ್'
ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ ಬ್ಯಾಟಿಂಗ್ ಸೆನ್ಸೇಷನ್ ಶುಭ್ ಮನ್ ಗಿಲ್ ಭರ್ಜರಿ ಶತಕದೊಂದಿಗೆ ಅಪರೂಪದ ದಾಖಲೆ ಮೂಲಕ ಎಲೈಟ್ ಗ್ರೂಪ್ ಸೇರಿದ್ದಾರೆ.
Published: 24th September 2023 07:48 PM | Last Updated: 25th September 2023 08:07 PM | A+A A-

ಶುಭ್ ಮನ್ ಗಿಲ್
ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿರುವ ಟೀಂ ಇಂಡಿಯಾ ಬ್ಯಾಟಿಂಗ್ ಸೆನ್ಸೇಷನ್ ಶುಭ್ ಮನ್ ಗಿಲ್ ಭರ್ಜರಿ ಶತಕದೊಂದಿಗೆ ಅಪರೂಪದ ದಾಖಲೆ ಮೂಲಕ ಎಲೈಟ್ ಗ್ರೂಪ್ ಸೇರಿದ್ದಾರೆ.
ಇಂದು ಇಂದೋರ್ ನ ಹೋಳ್ಕರ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399ರನ್ ಕಲೆ ಹಾಕಿ ಆಸ್ಟ್ರೇಲಿಯಾಗೆ ಗೆಲ್ಲಲು 400 ರನ್ ಗಳ ಬೃಹತ್ ಗುರಿ ನೀಡಿದೆ. ಭಾರತದ ಬೃಹತ್ ಮೊತ್ತದಲ್ಲಿ ಶುಭ್ ಮನ್ ಗಿಲ್ ರ ಅಮೋಘ ಬ್ಯಾಟಿಂಗ್ ನ ಪ್ರಮುಖ ಪಾತ್ರವಿದ್ದು ಗಿಲ್ 97 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 104 ರನ್ ಸಿಡಿಸಿದರು. ಇದು ಈ ವರ್ಷದಲ್ಲಿ ಗಿಲ್ ಸಿಡಿಸಿದ ಐದನೇ ಏಕದಿನ ಶತಕವಾಗಿದೆ. ಆ ಮೂಲಕ ಗಿಲ್ ಏಕದಿನ ಕ್ರಿಕೆಟ್ ನಲ್ಲಿ ಅಪರೂಪದ ದಾಖಲೆ ಬರೆದಿದ್ದು, ಸಚಿನ್, ದ್ರಾವಿಡ್, ಕೊಹ್ಲಿ, ರೋಹಿತ್ ಶರ್ಮಾ ಅವರಿರುವ ಎಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: 2ನೇ ಏಕದಿನ ಪಂದ್ಯ: ಗಿಲ್, ಅಯ್ಯರ್ ಅದ್ಭುತ ಶತಕ; ಆಸ್ಟ್ರೇಲಿಯಾಗೆ 400 ರನ್ ಗುರಿ ನೀಡಿದ ಭಾರತ
ಒಂದೇ ವರ್ಷದಲ್ಲಿ 5 ಏಕದಿನ ಶತಕ ಸಿಡಿಸಿದ ಭಾರತದ 7ನೇ ಆಟಗಾರ ಎಂಬ ಕೀರ್ತಿಗೆ ಗಿಲ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು.
ವಿರಾಟ್ ಕೊಹ್ಲಿ 2012ರಲ್ಲಿ (ಐದು), 2017 (ಆರು), 2018 (ಐದು) ಮತ್ತು 2019 (ಐದು) ರಲ್ಲಿ ಒಟ್ಟು ನಾಲ್ಕು ಬಾರಿ ಕ್ಯಾಲೆಂಡರ್ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚಿನ ODI ಶತಕಗಳ ಸಾಧನೆಯನ್ನು ಸಾಧಿಸಿದ್ದಾರೆ. ನಾಯಕ ರೋಹಿತ್ ಶರ್ಮಾ 2017 (ಆರು), 2018 (ಐದು) ಮತ್ತು 2019 (ಏಳು) ನಲ್ಲಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆ, ಇಂಗಾಲ ಹೊರಸೂಸುವಿಕೆ ತಗ್ಗಿಸಲು ಮಹತ್ವದ ಕ್ರಮ
ಅಂತೆಯೇ ಸಚಿನ್ ತೆಂಡೂಲ್ಕರ್ 1996 (ಆರು) ಮತ್ತು 1998 (ಒಂಬತ್ತು) ರಲ್ಲಿ ಈ ಸಾಧನೆ ಮಾಡಿದ್ದರು. 1999 ರಲ್ಲಿ, ದ್ರಾವಿಡ್ ಆರು ODI ಶತಕಗಳನ್ನು ಗಳಿಸಿದರೆ, 2000 ರಲ್ಲಿ, ಸೌರವ್ ಗಂಗೂಲಿ ಏಳು ODI ಶತಕಗಳನ್ನು ಗಳಿಸಿದ್ದರು.
2013 ರಲ್ಲಿ ಶಿಖರ್ ಧವನ್ ಐದು ODI ಶತಕಗಳನ್ನು ಗಳಿಸಿದ್ದರು, ಅದು ಭಾರತದೊಂದಿಗೆ ICC ಚಾಂಪಿಯನ್ಸ್ ಟ್ರೋಫಿ ವಿಜಯದ ಅಭಿಯಾನದಲ್ಲಿ ಚಿನ್ನದ ಬ್ಯಾಟ್ ಅನ್ನು ಗೆದ್ದ ವರ್ಷವಾಗಿತ್ತು.