ಟಿ20 ವಿಶ್ವಕಪ್‌ನಲ್ಲಿ ಆಡಬೇಕು: ದಿನೇಶ್ ಕಾರ್ತಿಕ್ ಬ್ಯಾಟಿಂಗ್‌ಗೆ ಮೈದಾನದಲ್ಲಿಯೇ ರೋಹಿತ್ ಶರ್ಮಾ ಮೆಚ್ಚುಗೆ

ಮುಂಬೈ ಇಂಡಿಯನ್ಸ್ ಬ್ಯಾಟರ್ ರೋಹಿತ್ ಶರ್ಮಾ ಅವರು ಮೈದಾನದಲ್ಲಿನ ಕಾಮೆಂಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಗುರುವಾರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2024ರ ಪಂದ್ಯದ ವೇಳೆ ರೋಹಿತ್ ಶರ್ಮಾರ ಮತ್ತೊಂದು ಹೇಳಿಕೆಯು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ.
ದಿನೇಶ್ ಕಾರ್ತಿಕ್ - ರೋಹಿತ್ ಶರ್ಮಾ
ದಿನೇಶ್ ಕಾರ್ತಿಕ್ - ರೋಹಿತ್ ಶರ್ಮಾ

ಮುಂಬೈ ಇಂಡಿಯನ್ಸ್ ಬ್ಯಾಟರ್ ರೋಹಿತ್ ಶರ್ಮಾ ಅವರು ಮೈದಾನದಲ್ಲಿನ ಕಾಮೆಂಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಗುರುವಾರ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ 2024ರ ಪಂದ್ಯದ ವೇಳೆ ರೋಹಿತ್ ಶರ್ಮಾರ ಮತ್ತೊಂದು ಹೇಳಿಕೆಯು ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಆರ್‌ಸಿಬಿ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ದಿನೇಶ್ ಕಾರ್ತಿಕ್ ಅವರನ್ನು ರೋಹಿತ್ ಶರ್ಮಾ ಕಿಚಾಯಿಸಿದ್ದಾರೆ.

ಡಿಕೆ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಸ್ಟಂಪ್ ಬಳಿ ಬಂದ ರೋಹಿತ್ ಶರ್ಮಾ, ವರ್ಲ್ಡ್ ಕಪ್ ಕೆ ಸೆಲೆಕ್ಷನ್ ಕೇಲಿಯೆ ಪುಶ್ ಕರ್ನಾ ಹೈ ಇಸ್ಕೊ, ಶಭಾಶ್. ದಿಮಾಂಗ್ ಮೇನ್ ಚಲ್ ರಹಾ ಹೈ ಇಸ್ಕೆ ವರ್ಲ್ಡ್ ಕಪ್. ಶಭಾಶ್ ಡಿಕೆ, ವರ್ಲ್ಡ್ ಕಪ್ ಖೇಲ್ನಾ ಹೈ (ವಿಶ್ವಕಪ್‌ಗೆ ನೀನು ಆಯ್ಕೆಯಾಗುವಂತೆ ನಾವು ಒತ್ತಾಯಿಸಬೇಕಾಗುತ್ತದೆ. ನೀವು ವಿಶ್ವಕಪ್ ಆಡಬೇಕು. ಚೆನ್ನಾಗಿ ಆಡುತ್ತಿದ್ದೀರಿ) ಎಂದು ಕಾರ್ತಿಕ್ ಆಟವನ್ನು ಮೈದಾನದಲ್ಲಿಯೇ ಹೊಗಳಿದರು.

ಮುಂದಿನ ತಿಂಗಳು T20 ವಿಶ್ವಕಪ್ 2024 ನಡೆಯಲಿದ್ದು, ದಿನೇಶ್ ಕಾರ್ತಿಕ್‌ಗೆ ವಿಶ್ವಕಪ್‌‌ನಲ್ಲಿ ಭಾರತದ ಪರವಾಗಿ ಆಡಿ ಕಪ್ ಗೆಲ್ಲುವ ಆಸೆಯಿದೆ. ಐಪಿಎಲ್ 2024ನೇ ಆವೃತ್ತಿಯಲ್ಲಿ ಆರಂಭದಿಂದಲೂ ದಿನೇಶ್ ಕಾರ್ತಿಕ್ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, ರಾಷ್ಟ್ರೀಯ ಆಯ್ಕೆಗಾರರನ್ನು ಮೆಚ್ಚಿಸಲು ಸಾಧ್ಯವಾದರೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಎಲ್ಲ ಸಾಧ್ಯತೆಯಿದೆ.

ಇಶಾನ್ ಕಿಶನ್, ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಧ್ರುವ್ ಜುರೇಲ್‌ರಂತ ವಿಕೆಟ್ ಕೀಪರ್ ಬ್ಯಾಟರ್‌ಗಳು ಟಿ20 ವಿಶ್ವಕಪ್‌ ಆಡುವ ರೇಸ್‌ನಲ್ಲಿದ್ದು, ದಿನೇಶ್ ಕಾರ್ತಿಕ್ ಇದೇ ರೀತಿ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದರೆ ಅವರನ್ನು ಕೂಡ ಆಯ್ಕೆಗೆ ಪರಿಗಣಿಸುವ ಸಾಧ್ಯತೆಯಿದೆ. ಟಿ20 ವಿಶ್ವಕಪ್‌ಗೆ ಭಾರತ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಅವರೇ ದಿನೇಶ್ ಕಾರ್ತಿಕ್ ಆಟವನ್ನು ಮೆಚ್ಚಿಕೊಂಡಿದ್ದು, ಕಾರ್ತಿಕ್ ಅವರನ್ನು ತಂಡಕ್ಕೆ ಪರಿಗಣಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ದಿನೇಶ್ ಕಾರ್ತಿಕ್ - ರೋಹಿತ್ ಶರ್ಮಾ
IPL 2024, RCB vs KKR: ವಿರಾಟ್ ಕೊಹ್ಲಿ vs ಗೌತಮ್ ಗಂಭೀರ್; ಆರ್‌ಸಿಬಿ ಬ್ಯಾಟರ್ ದಿನೇಶ್ ಕಾರ್ತಿಕ್ ಹೇಳಿದ್ದೇನು?

ನಿನ್ನೆ (ಏ.12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಕೇವಲ 23 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 196 ರನ್ ಕಲೆಹಾಕುವಲ್ಲಿ ನೆರವಾದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ ಕಾರ್ತಿಕ್, ನಾಲ್ಕು ಸಿಕ್ಸರ್‌ ಮತ್ತು ಐದು ಬೌಂಡರಿ ಬಾರಿಸುವ ಮೂಲಕ T20 ವಿಶ್ವಕಪ್ ತಂಡದ ಆಯ್ಕೆಯಲ್ಲಿ ತಾವು ಇರುವುದಾಗಿ ಸೂಚಿಸಿದರು.

ಆರ್‌ಸಿಬಿ ಇನಿಂಗ್ಸ್‌ನ ಅಂತಿಮ ಓವರ್‌ನಲ್ಲಿ 19 ರನ್ ಗಳಿಸಿದ ಕಾರ್ತಿಕ್, ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್‌ ಅನ್ನು ತರಾಟೆಗೆ ತೆಗೆದುಕೊಂಡರು. ಐದು ವಿಕೆಟ್ ಕೀಳುವ ಮೂಲಕ ಫಾರ್ಮ್‌ನಲ್ಲಿದ್ದ ಬುಮ್ರಾ ಎಸೆತದಲ್ಲಿಯೂ ಸಿಕ್ಸರ್ ಸಿಡಿಸಿದರು.

ದಿನೇಶ್ ಕಾರ್ತಿಕ್ - ರೋಹಿತ್ ಶರ್ಮಾ
IPL 2024: ಮುಂಬೈ ವಿರುದ್ಧ ಆರ್ ಸಿಬಿಗೆ 7 ವಿಕೆಟ್‌ಗಳ ಹೀನಾಯ ಸೋಲು

ಆದಾಗ್ಯೂ, ಕಾರ್ತಿಕ್ ಅವರ ಪ್ರಯತ್ನ ವ್ಯರ್ಥವಾಯಿತು. ಆರ್‌‌ಸಿಬಿ ನೀಡಿದ್ದ 197 ರನ್ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಪಡೆಯು ಅತ್ಯುತ್ತಮ ಪ್ರದರ್ಶನ ನೀಡಿತು. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ರನ್ ಚೇಸ್‌ಗೆ ಪರಿಪೂರ್ಣ ಆರಂಭ ಒದಗಿಸಿದರೆ, ಸೂರ್ಯಕುಮಾರ್ ಯಾದವ್ 19 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com