IPL 2024: ಒಂದೇ ಟೂರ್ನಿಯಲ್ಲಿ 2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್, RCBಯದ್ದೂ ವಿಶಿಷ್ಟ Record

ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿರುವಂತೆಯೇ ಒಂದೇ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2 ದಾಖಲೆಗಳನ್ನು ನಿರ್ಮಿಸಿದೆ.
2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್
2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್

ಬೆಂಗಳೂರು: ಹಾಲಿ ಐಪಿಎಲ್ ಕ್ರಿಕೆಟ್ ಟೂರ್ನಿಯ ನಿನ್ನೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿರುವಂತೆಯೇ ಒಂದೇ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2 ದಾಖಲೆಗಳನ್ನು ನಿರ್ಮಿಸಿದೆ.

ಸೋಮವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಕೇವಲ ಸಿಕ್ಸ್​-ಫೋರ್​ಗಳ ಸುರಿಮಳೆಗಳೇ ಕಾಣುತ್ತಿದ್ದವು. ಬ್ಯಾಕ್​ ಟು ಬ್ಯಾಕ್​ ಸಿಕ್ಸರ್ ಗಳು ಹರಿದು ಬರುತ್ತಿದ್ದರೆ, ಇದರ ಹಿಂದೆಯೇ ಸಾಲು ಸಾಲು ದಾಖಲೆಗಳು ದೂಳಿಪಟ ಆಗಿದ್ದು, ಒಂದೇ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2 ದಾಖಲೆಗಳನ್ನು ನಿರ್ಮಿಸಿದೆ.

2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್
IPL 2024: RCB vs SRH ಪಂದ್ಯದಲ್ಲಿ ಸಿಕ್ಸರ್ ಮೇಲೆ ಸಿಕ್ಸರ್... ದಾಖಲೆಗಳ ಸರಣಿಯೇ ಉಡೀಸ್!

ಈ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2 ಬಾರಿ ಗರಿಷ್ಠ ಮೊತ್ತದ ದಾಖಲೆಯನ್ನು ಮುರಿದಿದ್ದು, ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಇಂತಹ ದಾಖಲೆ ಬರೆದಿದ್ದು ಇದೇ ಮೊದಲು ಎಂದು ಹೇಳಲಾಗಿದೆ. ನಿನೆಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 287 ರನ್ ಗಳಿಸಿ ಐಪಿಎಲ್ ನಲ್ಲಿ ಗರಿಷ್ಠ ಮೊತ್ತ ಗಳಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕೂ ಮೊದಲು ಇದೇ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 277ರನ್ ಕಲೆಹಾಕಿ ಗರಿಷ್ಠ ರನ್ ದಾಖಲೆ ನಿರ್ಮಿಸಿತ್ತು. ಇದೀಗ ಮತ್ತೆ 287ರನ್ ಕಲೆಹಾಕಿ ತನ್ನದೇ ದಾಖಲೆಯನ್ನು ಮುರಿದಿದೆ.

ಅಂತೆಯೇ ಐಪಿಲ್ ಇತಿಹಾಸದಲ್ಲಿ ಒಟ್ಟು 5 ಬಾರಿ ಇನ್ನಿಂಗ್ಸ್ ವೊಂದರಲ್ಲಿ 250ಕ್ಕೂ ಅಧಿಕ ರನ್ ಗಳು ಹರಿದು ಬಂದಿದ್ದು, ಈ ಪೈಕಿ ಹಾಲಿ ಸರಣಿಯಲ್ಲೇ 3 ಬಾರಿ 250ಕ್ಕೂ ಅಧಿಕ ರನ್ ಗಳು ಹರಿದುಬಂದಿದೆ.

Highest totals in IPL

  • 287/3 SRH vs RCB Bengaluru 2024

  • 277/3 SRH vs MI Hyderabad 2024

  • 272/7 KKR vs DC Vizag 2024

  • 263/5 RCB vs PWI Bengaluru 2013

  • 257/7 LSG vs PK Mohali 2023

Three of the five 250+ totals have come in 2024 edition alone.

ಪವರ್ ಪ್ಲೇನಲ್ಲಿ ಗರಿಷ್ಠ ರನ್: ಆರ್ ಸಿಬಿ ದಾಖಲೆ

ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಪವರ್ ಪ್ಲೇ ನಲ್ಲಿ ವಿಕೆಟ್ ನಷ್ಟವಿಲ್ಲದೇ 79 ರನ್ ಕಲೆಹಾಕಿದ್ದು, ಇದು ಆರ್ ಸಿಬಿ ಪರ ಪವರ್ ಪ್ಲೇನಲ್ಲಿ ದಾಖಲಾದ ಗರಿಷ್ಠ ರನ್ ಗಳಾಗಿವೆ. 2011ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ವಿರುದ್ಧ ಆರ್ ಸಿಬಿ 1 ವಿಕೆಟ್ ನಷ್ಟಕ್ಕೆ 79 ರನ್ ಕಲೆಹಾಕಿತ್ತು. ಇದು ಈ ವರೆಗಿನ ಆರ್ ಸಿಬಿ ಪರ ಪವರ್ ಪ್ಲೇ ನಲ್ಲಿ ದಾಖಲಾದ ಗರಿಷ್ಟ ಮೊತ್ತವಾಗಿತ್ತು.

Highest Powerplay totals for RCB (IPL)

  • 79/0 vs SRH Bengaluru 2024 *

  • 79/1 vs KTK Bengaluru 2011

  • 75/2 vs CSK Bengaluru 2023

  • 70/1 vs PK Bengaluru 2019

2 ವಿಶ್ವದಾಖಲೆ ನಿರ್ಮಿಸಿದ ಸನ್ ರೈಸರ್ಸ್ ಹೈದರಾಬಾದ್
IPL 2024: ಆರ್‌ಸಿಬಿಗೆ ಸತತ ಸೋಲು; ತಂಡದ ಮಾಲೀಕತ್ವ ಬದಲಿಸಲು ಮಹೇಶ್ ಭೂಪತಿ ಒತ್ತಾಯ

ಬೆಂಗಳೂರು ತಂಡದ ವಿರುದ್ಧ ವೇಗದ 200 ರನ್

ಇನ್ನು ಈ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 15 ಓವರ್ ನಲ್ಲೇ 200 ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲಾದ 3ನೇ ವೇಗದ 200 ಗಳಿಕೆಯಾಗಿದೆ. ಈ ಹಿಂದೆ 2016ರಲ್ಲಿ ಆರ್ ಸಿಬಿ ತಂಡ 14.1 ಓವರ್ ನಲ್ಲಿ 200 ರನ್ ಕಲೆಹಾಕಿತ್ತು. ಅಂದು ಮಳೆಯಿಂದಾಗಿ ಪಂದ್ಯವನ್ನು 15 ಓವರ್ ಗಳಿಗೆ ಕಡಿತಗೊಳಿಸಲಾಗಿತ್ತು. ಬಳಿಕ ಹಾಲಿ ಸರಣಿಯಲ್ಲೇ ಮುಂಬೈ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ ತಂಡ ಕೇವಲ 14.4 ಓವರ್ ನಲ್ಲಿ 200 ರನ್ ಪೂರೈಸಿತ್ತು.

Fastest to 200 by a team in IPL

  • 14.1 RCB vs PBKS Bengaluru 2016 (15 over match)

  • 14.4 SRH vs MI Hyderabad 2024

  • 14.6 SRH vs RCB Bengaluru 2024

  • 15.2 KKR vs DC Vizag 2024

ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕೊಟ್ಟ 3ನೇ ಆಟಗಾರ

ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿಯ ರೀಸ್ ಟಾಪ್ಲೆ 1 ವಿಕೆಟ್ ಗಳಿಸಿ 68ರನ್ ನೀಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕೊಟ್ಟ ಮೂರನೇ ಆಟಗಾರ ಎಂಬ ಕುಖ್ಯಾತಿಗೆ ಆರ್ ಸಿಬಿಯ ರೀಸ್ ಟಾಪ್ಲೆ ಪಾತ್ರರಾಗಿದ್ದಾರೆ. ಈ ಹಿಂದೆ 2018ರಲ್ಲಿ ಬಸಿಲ್ ಥಂಪಿ ಆರ್ ಸಿಬಿ ವಿರುದ್ಧ 70ರನ್ ನೀಡಿ ಅತೀ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿ ಪಡೆದಿದ್ದಾರೆ.

Most expensive figures in IPL

  • 0/70 Basil Thampi vs RCB Bengaluru 2018

  • 0/69 Yash Dayal vs KKR Ahmedabad 2023

  • 1/68 Reece Topley vs SRH Bengaluru 2024

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com