T20 World Cup 2024: India vs USA, ಅಮೆರಿಕ ಕಳಪೆ ದಾಖಲೆ, 5 ರನ್ ಪೆನಾಲ್ಟಿ ಪಡೆದ ಮೊಟ್ಟ ಮೊದಲ ತಂಡ!

ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಯುಎಸ್‌ಎ ಐದು ಪೆನಾಲ್ಟಿ ರನ್‌ಗಳ ಶಿಕ್ಷೆಗೆ ಗುರಿಯಾಗಿದ್ದು, ಈ ಶಿಕ್ಷೆಗೆ ಗುರಿಯಾಗ ಮೊಟ್ಟ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಿದೆ.
run penalty-USA
ಅಮೆರಿಕಗೆ 5 ರನ್ ಪೆನಾಲ್ಟಿ

ನ್ಯೂಯಾರ್ಕ್: ಬುಧವಾರ ನ್ಯೂಯಾರ್ಕ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಯುಎಸ್‌ಎ ಐದು ಪೆನಾಲ್ಟಿ ರನ್‌ಗಳ ಶಿಕ್ಷೆಗೆ ಗುರಿಯಾಗಿದ್ದು, ಈ ಶಿಕ್ಷೆಗೆ ಗುರಿಯಾಗ ಮೊಟ್ಟ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಿದೆ.

ಟೂರ್ನಿಯ ಸ್ಟಾಪ್-ಕ್ಲಾಕ್ ನಿಯಮದ ಅಡಿಯಲ್ಲಿ ಅಮೆರಿಕ ತಂಡಕ್ಕೆ 5ರನ್ ಗಳ ದಂಡ ವಿಧಿಸಲಾಗಿದ್ದು, ಆ ಮೂಲಕ ಈ ರೀತಿಯ ದಂಡನೆಗೆ ಒಳಗಾದ ಮೊದಲ ತಂಡ ಕುಖ್ಯಾತಿಗೆ ಒಳಗಾಗಿದೆ. ಓವರ್ ನಿಂದ ಓವರ್ ಗಳ ನಡುವೆ ಅನಾವಶ್ಯಕ ಸಮಯ ವ್ಯರ್ಥವಾಗುವುದನ್ನು ತಡೆಯಲು ಐಸಿಸಿ ಈ ನಿಯಮ ತಂದಿದ್ದು, ಓವರ್ ನಿಂದ ಓವರ್ ನಡುವೆ ಗರಿಷ್ಠ 60 ಸೆಕೆಂಡ್ ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಿನ ಸಮಯವಾದರೆ ಐಸಿಸಿಯ ಈ ನಿಯಮ ಅಳವಡಿಕೆಯಾಗಿ ಎದುರಾಳಿ ತಂಡಕ್ಕೆ 5 ರನ್ ಗಳ ಪೆನಾಲ್ಟಿ ರನ್ ನೀಡಲಾಗುತ್ತದೆ.

run penalty-USA
T20 World Cup 2024: ಕಿವೀಸ್ ಗೆ ವಿಂಡೀಸ್ ಆಘಾತ, 13ರನ್ ಜಯ, ಸೂಪರ್ 8 ಹಂತ ಪ್ರವೇಶ, ನ್ಯೂಜಿಲೆಂಡ್ ಟೂರ್ನಿಯಿಂದಲೇ ಔಟ್?

ಮೊದಲೆರಡು ಬಾರಿಯ ಉಲ್ಲಂಘನೆಗೆ ಎಚ್ಚರಿಕೆ ನೀಡಿ ಮೂರನೇ ಬಾರಿಯೂ ಇದೇ ರೀತಿ ಉಲ್ಲಂಘನೆ ಮಾಡಿದರೆ 5ರನ್ ಪೆನಾಲ್ಟಿ ನೀಡಲಾಗುತ್ತದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಮೂರನೇ ಬಾರಿ ಈ ನಿಯಮ ಉಲ್ಲಂಘನೆ ಮಾಡಿದಾಗ USA ರನ್ ಪೆನಾಲ್ಟಿ ಪಡೆದ ಮೊದಲ ತಂಡವಾಯಿತು.

ಇದೇ ರೀತಿ ಅಮೆರಿಕಕ್ಕೆ 5 ರನ್ ಗಳ ಪೆನಾಲ್ಟಿ ನೀಡಿದೆ. ಕಳೆದ ವರ್ಷ ಡಿಸೆಂಬರ್‌ನಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಟಾಪ್-ಕ್ಲಾಕ್ ನಿಯಮವನ್ನು ಪ್ರಯೋಗಿಸಲಾಯಿತು ಮತ್ತು ಏಪ್ರಿಲ್ 2024 ರಲ್ಲಿ ಅದರ ಪ್ರಾಯೋಗಿಕ ಅವಧಿಯ ಕೊನೆಯಲ್ಲಿ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್‌ನಲ್ಲಿ ಐಸಿಸಿ ಶಾಶ್ವತವಾಗಿ ಈ ನಿಯಮ ಜಾರಿಗೆ ತಂದಿದೆ. ಇದರಿಂದ ಪಂದ್ಯದಲ್ಲಿ ಆಟಗಾರರು ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುವುದು ನಿಯಂತ್ರಣವಾಗುತ್ತದೆ ಎಂದು ಹೇಳಲಾಗಿದೆ.

ಪೆನಾಲ್ಟಿ ನೀಡಿದಾಗ ಭಾರತ ತಂಡ 3 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಆಗ ಭಾರತಕ್ಕೆ ಗೆಲಲ್ಲು ಕೊನೆಯ ಐದು ಓವರ್‌ಗಳಲ್ಲಿ 35 ರನ್‌ಗಳ ಅಗತ್ಯವಿತ್ತು. ಇದು ಬ್ಯಾಟಿಂಗ್ ಗೆ ಅಷ್ಟೇನೂ ಸಹಕಾರಿಯಲ್ಲದ ಪಿಚ್ ನಲ್ಲಿ ಭಾರತ ತಂಡದ ಮೇಲಿದ್ದ ಒತ್ತಡ ಕಡಿಮೆಯಾಗುವಂತೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com