
ಸೆಂಟ್ ಲೂಸಿಯಾ: ಸೆಂಟ್ ಲೂಸಿಯಾದ ಗ್ರಾಸ್ ಐಲೆಟ್ ನಲ್ಲಿ ಸೋಮವಾರ ನಡೆಯಲಿರುವ ಟಿ-20 ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋತು ಒತ್ತಡಕ್ಕೊಳಗಾಗಿರುವ ಆಸ್ಟ್ರೇಲಿಯಾ ವಿರುದ್ದ ಐಸಿಸಿ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಭಾರತ.
ಭಾರತ ಸತತ ಮೂರು ಗೆಲುವಿನೊಂದಿಗೆ ಗುಂಪಿನಲ್ಲಿ ಟಾಪರ್ ಆಗಿರುವುದು ಮಾತ್ರವಲ್ಲದೇ ಸೆಮಿಫೈನಲ್ ನತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಆದರೆ, ಆಸ್ಟ್ರೇಲಿಯಾ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅನಿರೀಕ್ಷಿತ ಸೋಲಿನ ನಂತರ ಸೆಮಿಫೈನಲ್ ಅವಕಾಶ ಸಿಗುತ್ತದೆಯೋ ಇಲ್ಲವೂ ಎಂಬ ಒತ್ತಡದಲ್ಲಿದ್ದಾರೆ. ಭಾರತದ ಗೆಲುವು ಕಳೆದ ವರ್ಷನಡೆದ ಏಕದಿನ ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಸೋಲಿಗೆ ಪ್ರತೀಕಾರವಾಗಲಿದೆ.
ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶದ ಕನಸು ಕ್ಷೀಣಿಸಿದ್ದು, ಸೋಮವಾರ ಬಾಂಗ್ಲಾದೇಶದ ವಿರುದ್ಧಅಫ್ಘಾನಿಸ್ತಾನದ ಪಂದ್ಯವನ್ನು ಎದುರು ನೋಡುತ್ತಿದೆ. ಮತ್ತೊಂದೆಡೆ
ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾದ ಕೈಯಲ್ಲಿ ಸೋತಿರುವ ಭಾರತ, ತಮ್ಮ ಪ್ರಬಲ ಪ್ರತಿಸ್ಪರ್ಧಿ ಟೂರ್ನಿಯಿಂದ ನಿರ್ಗಮಿಸುವುದನ್ನು ಎದುರು ನೋಡುತ್ತಿದೆ.
ಭಾರತ ಈವರೆಗೂ ಎಲ್ಲಾ ಪಂದ್ಯಗಳನ್ನು ಉತ್ತಮ ರೀತಿಯಲ್ಲಿ ಆಡಿದೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಆಗಿರುವುದು ತಂಡದ ಸಕಾರಾತ್ಮಕ ಅಂಶವಾಗಿದೆ. ಕುಲದೀಪ್ ಯಾದವ್ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ.
ಇನ್ನೊಂಡೆದೆ ಅಫ್ಘಾನಿಸ್ತಾನ ವಿರುದ್ಧ ಸೋತ ಆಸ್ಟ್ರೇಲಿಯಾ ತೀವ್ರ ಒತ್ತಡದಲ್ಲಿದೆ. ರಶಿದ್ ಖಾನ್ ಬಳಗದ ವಿರುದ್ಧ ಆಸೀಸ್ ಬ್ಯಾಟಿಂಗ್ ಪ್ಲಾಪ್ ಆಗಿತ್ತು. ಮಿಚ್ಚೆಲ್ ಮಾರ್ಷ್ ಆರು ಪಂದ್ಯಗಳಲ್ಲಿ ಕೇವಲ 88 ರನ್ ಗಳಿಸಿದ್ದು, ಭಾರತ ವಿರುದ್ಧದ ಪಂದ್ಯದಲ್ಲಿ ನಿಂತು ಆಡಬೇಕಾಗಿದೆ. ಮುಂದಿನ ಪಂದ್ಯದಲ್ಲಿ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡುತ್ತೇವೆ. ಭಾರತ ವಿರುದ್ಧ ಗೆಲ್ಲುವಿನ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ಕ್ಯಾಪ್ಟನ್ ಮಿಚ್ಚೆಲ್ ಮಾರ್ಷ್ ತಿಳಿಸಿದ್ದಾರೆ.
ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ ಇಂತಿದೆ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೇಟ್ ಕೀಪರ್) ಪ್ಯಾಟ್ ಕಮ್ಮಿನ್ಸ್, ಆಷ್ಟನ್ ಅಗರ್, ಆಡಮ್ ಜಂಪಾ, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್, ಜೋಶ್ ಇಂಗ್ಲಿಸ್, ಕ್ಯಾಮೆರಾನ್ ಗ್ರೀನ್ ನಾಥನ್ ಎಲ್ಲಿಸ್.
ಪಂದ್ಯದ ಸಮಯ: ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ
Advertisement