WPL 2024: ಆರ್ ಸಿಬಿಗೆ ಸತತ 2ನೇ ಸೋಲು, ಮುಂಬೈ ಇಂಡಿಯನ್ಸ್ ಗೆ 7 ವಿಕೆಟ್ ಭರ್ಜರಿ ಜಯ

ಮಹಿಳಾ ಪ್ರೀಮೀಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲಿಗೆ ಶರಣಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡಿದೆ.
ಆರ್ ಸಿಬಿಗೆ ಸತತ 2ನೇ ಸೋಲು
ಆರ್ ಸಿಬಿಗೆ ಸತತ 2ನೇ ಸೋಲು

ಬೆಂಗಳೂರು: ಮಹಿಳಾ ಪ್ರೀಮೀಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲಿಗೆ ಶರಣಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯ ಸೋಲು ಕಂಡಿದೆ.

ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ ನೀಡಿದ್ದ 132ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡ 15.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗುರಿ ಮುಟ್ಟಿತು. ಆ ಮೂಲಕ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 131ರನ್ ಗಳಿಸಿತು. ಆರ್ ಸಿಬಿ ಪರ ಎಲ್ಲಿಸ್ ಪೆರ್ರಿ 44 ರನ್ ಮತ್ತು ವೇರ್ಹ್ಯಾಮ್ 27 ರನ್ ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ನಿಂದಲೂ ಉತ್ತಮ ರನ್ ಗಳಿಕೆ ಮೂಡಿಬರಲಿಲ್ಲ. ನಾಯಕಿ ಸ್ಮೃತಿ ಮಂದಾನ 9 ರನ್ ಗಳಿಗೆ ಔಟಾದರೆ, ರಿಚಾ ಘೋಷ್ 11 ರನ್ ಗಳಿಗೆ ಔಟಾಗಿ ನಿರಾಶೆ ಮೂಡಿಸಿದರು.

ಆರ್ ಸಿಬಿಗೆ ಸತತ 2ನೇ ಸೋಲು
WPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿಗೆ ಸೋಲು!

ಆರ್ ಸಿಬಿ ನೀಡಿದ 132 ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿದ ಮುಂಬೈ ಇಂಡಿಯನ್ಸ್ ತಂಡ 15.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗುರಿ ಮುಟ್ಟಿತು. ಮುಂಬೈ ಪರ ಅಮೆಲಿಯಾ ಕೆರ್ ಅಜೇಯ 40 ರನ್ ಮತ್ತು ಯಾಸ್ತಿಕಾ ಭಾಟಿಯಾ 31 ರನ್ ಗಳ ನೆರವಿನಿಂದ 15.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆಲುವು ಸಾಧಿಸಿತು.

ಆರ್ ಸಿಬಿಗೆ ಸತತ 2ನೇ ಸೋಲು

ಈ ಪಂದ್ಯದ ಸೋಲಿನೊಂದಿಗೆ ಆರ್ ಸಿಬಿಗೆ ಸತತ 2ನೇ ಸೋಲು ಎದುರಾಗಿದ್ದು, ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ 25 ರನ್ ಗಳ ಅಂತರದಲ್ಲಿ ತಂಡ ಸೋಲು ಕಂಡಿತ್ತು. ಆರ್ ಸಿಬಿಯ ಮುಂದಿನ ಪಂದ್ಯ ಮಾರ್ಚ್ 4 ಸೋಮವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com