
ಬೆಂಗಳೂರು: ಐಪಿಎಲ್ ಟೂರ್ನಿಯ ಇಂದಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ತಂಡದ ಹಿಟ್ ಮ್ಯಾನ್ ರೋಹಿತ್ ಶರ್ಮಾರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಹೌದು.. ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 29 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ನೆರವಿನಿಂದ 47 ರನ್ ಗಳಿಸಿದರು.
ಆ ಮೂಲಕ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ರನ್ ಗಳಿಕೆಯನ್ನು 3000 ರನ್ ದಾಟಿಸಿದ್ದು, ಈ ಮೂಲಕ ಒಂದೇ ತಾಣದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂದ ದಾಖಲೆ ಬರೆದಿದ್ದಾರೆ. ಅಂತೆಯೇ ರೋಹಿತ್ ಶರ್ಮ ದಾಖಲೆಯನ್ನು ಮುರಿದಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದಲ್ಲಿ 3 ರನ್ ಗಳಿಸುತ್ತಿದ್ದಂತೆ ಕೊಹ್ಲಿ ಅವರು ರೋಹಿತ್ ದಾಖಲೆಯನ್ನು ಹಿಂದಿಕ್ಕಿದರು. ರೋಹಿತ್ ವಾಂಖೆಡೆ ಸ್ಟೇಡಿಯಂನಲ್ಲಿ 2295 ರನ್ ಬಾರಿಸಿದ್ದರು. ಇದೀಗ ಕೊಹ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 3005* ರನ್ ಬಾರಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಎಬಿಡಿ ವಿಲಿಯರ್ಸ್ ಚಿನ್ನಸ್ವಾಮಿಯಲ್ಲಿ 1960 ರನ್ ಬಾರಿಸಿದ್ದಾರೆ.
38 in 2016
37 in 2024 *
23 in 2015
22 in 2013
ಗರಿಷ್ಠ ಸಿಕ್ಸರ್ ದಾಖಲೆ
ಅಂತೆಯೇ ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಹಾಲಿ ಸೀಸನ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಟೂರ್ನಿಯಲ್ಲಿ ನಿಕೋಲಸ್ ಪೂರನ್ 36 ಸಿಕ್ಸರ್ ಗಳನ್ನು ಸಿಡಿಸಿ ಟೂರ್ನಿಯಲ್ಲಿ ಗರಿಷ್ಟ ಸಿಕ್ಸರ್ ಸಿಡಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇಂದು ಕೊಹ್ಲಿ ಕೂಡ ತಮ್ಮ ಖಾತೆಗೆ 4 ಸಿಕ್ಸರ್ ಗಳನ್ನು ಸೇರಿಸಿದ್ದು ಈ ಮೂಲಕ ಹಾಲಿ ಟೂರ್ನಿಯಲ್ಲಿ ತಮ್ಮ ಸಿಕ್ಸರ್ ಗಳ ಸಂಖ್ಯೆಯನ್ನು 37ಕ್ಕೆ ಏರಿಕೆ ಮಾಡಿಕೊಂಡರು.
ಅಲ್ಲದೆ ಹಾಲಿ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2016ರಲ್ಲಿ ಕೊಹ್ಲಿ 3 ಸಿಕ್ಸರ್ ಗಳನ್ನು ಸಿಡಿಸಿದ್ದರೆ, ಹಾಲಿ ಟೂರ್ನಿಯಲ್ಲಿ 37 ಸಿಕ್ಸರ್ ಸಿಡಿಸಿದ್ದಾರೆ.
Most sixes in IPL 2024
36* V Kohli
36 N Pooran
35 Abhishek Sharma
32 S Narine
Advertisement