ಸಿಕ್ಸರ್, ಬೌಂಡರಿ, ಗರಿಷ್ಟ ರನ್: IND vs BNG 3ನೇ ಟಿ20 ಪಂದ್ಯದಲ್ಲಿ ಹಲವು ದಾಖಲೆ!

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು.
Team indias first Highest team Total In T20I
ಭಾರತ-ಬಾಂಗ್ಲಾದೇಶ ಪಂದ್ಯ
Updated on

ಹೈದರಾಬಾದ್: ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಯ 297 ರನ್ ಗಳಿಸಿದ ಭಾರತ ತಂಡದ ಕ್ರಿಕೆಟ್ ಲೋಕದ ಹಲವು ದಾಖಲೆಗಳನ್ನು ಹಿಂದಿಕ್ಕಿದೆ.

ಹೌದು.. ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು.

ಭಾರತ ತಂಡದ ಪರ ಸಂಜು ಸ್ಯಾಮ್ಸನ್ (111 ರನ್) ಅಮೋಘ ಶತಕ ಸಿಡಿಸಿದರೆ, ಸೂರ್ಯ ಕುಮಾರ್ (75 ರನ್) ಅರ್ಧಶತಕ, ಹಾರ್ದಿಕ್ ಪಾಂಡ್ಯ (47 ರನ್) ಮತ್ತು ರಿಯಾನ್ ಪರಾಗ್ (34) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಭಾರತ ತಂಡ ಹಲವು ದಾಖಲೆಗಳಿಗೆ ಪಾತ್ರವಾಗಿದೆ.

Team indias first Highest team Total In T20I
3rd T20I: ಬಾಂಗ್ಲಾದೇಶ ವಿರುದ್ಧ ಭಾರತ ಸ್ಫೋಟಕ ಬ್ಯಾಟಿಂಗ್; ಸೂರ್ಯ-ಸಂಜು ಸ್ಯಾಮ್ಸನ್ ದಾಖಲೆಗಳ ಸುರಿಮಳೆ!

ಟಿ20ಐನಲ್ಲಿ ತಂಡವೊಂದರ 2ನೇ ಗರಿಷ್ಟ ಮೊತ್ತ

ಈ ಪಂದ್ಯದಲ್ಲಿ ಭಾರತ ಕಲೆಹಾಕಿದ 296 ರನ್ ಗಳು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಂಡವೊಂದು ಕಲೆಹಾಕಿದ 2ನೇ ಗರಿಷ್ಟ ಮೊತ್ತವಾಗಿದೆ. ಈ ಹಿಂದೆ 2023 ಚೀನಾದ ಹ್ಯಾಂಗ್ಝೌನಲ್ಲಿ ನೇಪಾಳ ತಂಡ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿತ್ತು. ಇದು ತಂಡವೊಂದು ಗಳಿಸಿದ ಗರಿಷ್ಠ ಟಿ20ಐ ಮೊತ್ತವಾಗಿದೆ.

Highest T20I team totals

  • 314/3 - Nepal vs Mongolia, Hangzhou, 2023

  • 297/6 - India vs Bangladesh, Hyderabad, 2024

  • 278/3 - Afghanistan vs Ireland, Dehradun, 2019

  • 278/4 - Czech Republic vs Turkey, Ilfov County, 2019

  • 268/4 - Malaysia vs Thailand, Hangzhou, 2023

  • 267/3 - England vs West Indies, Tarouba, 2023

ಟಿ20 ಪಂದ್ಯದ ಇನ್ನಿಂಗ್ಸ್ ನಲ್ಲಿ ಗರಿಷ್ಠ ಸಿಕ್ಸರ್; 5ನೇ ಸ್ಥಾನ

ಈ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಒಟ್ಟು 22 ಸಿಕ್ಸರ್ ಗಳನ್ನು ಸಿಡಿಸಿದ್ದು, ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ತಂಡವೊಂದು ಕಲೆಹಾಕಿದ 5ನೇ ಗರಿಷ್ಠ ಸಿಕ್ಸರ್ ಗಳಾಗಿವೆ. ಇದಕ್ಕೂ ಮೊದಲು 2023 ಚೀನಾದ ಹ್ಯಾಂಗ್ಝೌನಲ್ಲಿ ನೇಪಾಳ ತಂಡ ಮಂಗೋಲಿಯಾ ವಿರುದ್ಧ 26 ಸಿಕ್ಸರ್ ಗಳನ್ನು ಕಲೆಹಾಕಿತ್ತು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ದಾಖಲಾದ ಗರಿಷ್ಛ ಸಿಕ್ಸರ್ ಗಳ ಸಂಖ್ಯೆಯಾಗಿದೆ.

Most sixes in a T20I innings

  • 26 - Nepal vs Mongolia, Hangzhou, 2023

  • 23 - Japan vs China, Mong Kok, 2024

  • 22 - Afghanistan vs Ireland, Dehradun, 2019

  • 22 - West Indies vs South Africa, Centurion, 2023

  • 22 - India vs Bangladesh, Hyderabad, 2024

Team indias first Highest team Total In T20I
Video: ಒಂದೇ ಓವರ್ ನಲ್ಲಿ 6,6,6,6,6 ಸಿಡಿಸಿದ Sanju Samson; ವೇಗದ ಶತಕ ಬಾರಿಸಿ ದಾಖಲೆ!

ಅಂತಾರಾಷ್ಟ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಠ ಬೌಂಡರಿ

ಈ ಪಂದ್ಯದಲ್ಲಿ ಬಾಂಗ್ಲಾದೇಶ ಬೌಲರ್ ಗಳ ಮೇಲೆ ಸವಾರಿ ಮಾಡಿದ ಭಾರತ ತಂಡದ ಬ್ಯಾಟರ್ ಗಳು ಒಟ್ಟು 47 ಬೌಂಡರಿಗಳನ್ನು ಸಿಡಿಸಿದ್ದು, ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಬಂದ ಗರಿಷ್ಠ ಬೌಂಡರಿಗಳಾಗಿವೆ. ಇದಕ್ಕೂ ಮೊದಲು 2019ರಲ್ಲಿ ಟರ್ಕಿ ವಿರುದ್ಧ ಜೆಕ್ ರಿಪಬ್ಲಿಕ್ ತಂಡ 43 ಬೌಂಡರಿಗಳನ್ನು ಸಿಡಿಸಿತ್ತು. ಇದು ಈ ವರೆಗು ತಂಡವೊಂದು ಸಿಡಿಸಿದ ಗರಿಷ್ಠ ಬೌಂಡರಿ ದಾಖಲೆಯಾಗಿತ್ತು. ಇದೀಗ ಭಾರತ ಈ ದಾಖಲೆಯನ್ನು ಮುರಿದಿದೆ.

Highest boundary count in a T20I innings

  • 47 - India vs Bangladesh, Hyderabad, 2024

  • 43 - Czech Republic vs Turkey, Ilfov County, 2019

  • 42 - South Africa vs West Indies, Centurion, 2023

  • 42 - India vs Sri Lanka, Indore, 2017

  • 41 - Sri Lanka vs Kenya, Johannesburg, 2007

  • 41 - Afghanistan vs Ireland, Dehradun, 2019

ಪುರುಷರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗರಿಷ್ಠ ಬೌಂಡರಿಗಳು

ಇನ್ನು ಭಾರತ ಮತ್ತು ಬಾಂಗ್ಲಾದೇಶ ನಡುವಿನ 3ನೇ ಟಿ20 ಪಂದ್ಯ ಮತ್ತೊಂದು ದಾಖಲೆ ಬರೆದಿದ್ದು, ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 70 ಬೌಂಡರಿಗಳು ಹರಿದುಬಂದಿದ್ದು, ಈ ಪೈಕಿ ಭಾರತ ತಂಡವೊಂದೇ 47 ಬೌಂಡರಿಗಳನ್ನು ಸಿಡಿಸಿದೆ. ಬಾಂಗ್ಲಾದೇಶ 23 ಬೌಂಡರಿಗಳನ್ನು ಗಳಿಸಿತ್ತು. ಒಟ್ಟಾರೆ ಈ ಪಂದ್ಯದಲ್ಲಿ ಒಟ್ಟು 70 ಬೌಂಡರಿಗಳು ಹರಿದು ಬಂದಿದ್ದು, ಆ ಮೂಲಕ ಗರಿಷ್ಠ ಬೌಂಡರಿಗಳು ದಾಖಲಾದ 3ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಇದಾಗಿದೆ.

Highest boundary count in a Men’s T20I

  • 81 - South Africa vs West Indies, Centurion, 2023

  • 71 - Bulgaria v Serbia, Sofia, 2022

  • 70 - India vs Bangladesh, Hyderabad, 2024

  • 69 - Bulgaria v Serbia at Sofia, 2022

  • 68 - South Africa vs West Indies, Johannesburg, 2015

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com