ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 46 ರನ್ ಗಳಿಗೆ ಆಲೌಟ್ ಆಗಿದೆ.
ನ್ಯೂಜಿಲೆಂಡ್ ವೇಗಿಗಳ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ಕೇವಲ 31.2 ಓವರ್ ನಲ್ಲಿ 46 ರನ್ ಗಳಿಸಿ ಆಲೌಟ್ ಆಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ತನ್ನ ಕಳಪೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೇವಲ 46 ರನ್ ಗೆ ಆಲೌಟ್ ಆಗಿದ್ದು, ಆ ಮೂಲಕ ಹೀನಾಯ ದಾಖಲೆಗಳ ಸರಮಾಲೆಯನ್ನೇ ಬರೆದಿದೆ.
ಭಾರತ ತಂಡದ 3ನೇ ಕನಿಷ್ಠ ಮೊತ್ತ
ಇನ್ನು ಈ ಪಂದ್ಯದಲ್ಲಿ ಭಾರತ ಗಳಿಸಿದ 46 ರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಇನ್ನಿಂಗ್ಸ್ ವೊಂದರಲ್ಲಿ ಗಳಿಸಿದ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 2020ರಲ್ಲಿ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 36ರನ್ ಗೆ ಸರ್ವಪತನ ಕಂಡಿತ್ತು. ಇದು ಭಾರತ ತಂಡದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 1974ರಲ್ಲಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 42 ರನ್ ಗೆ ಆಲೌಟ್ ಆಗಿತ್ತು. ಇದೀಗ ನ್ಯೂಜಿಲೆಂಡ್ ವಿರುದ್ದ 46 ರನ್ ಗೆ ಆಲೌಟ್ ಆಗಿದೆ.
Lowest totals for India in Tests
36 vs AUS, Adelaide, 2020
42 vs ENG, Lord's, 1974
46 vs NZ, Bengaluru, 2024*
58 vs AUS, Brisbane, 1947
58 vs ENG, Manchester, 1952
ಭಾರತದಲ್ಲಿ ತಂಡವೊಂದರ ಕನಿಷ್ಠ ಮೊತ್ತ
ಅಂತೆಯೇ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಗಳಿಸಿದ 46 ರನ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ತಂಡವೊಂದು ಭಾರತದಲ್ಲಿ ಗಳಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 2021ರಲ್ಲಿ ಇದೇ ನ್ಯೂಜಿಲೆಂಡ್ ತಂಡ ಮುಂಬೈ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ 62 ರನ್ ಗಳಿಗೇ ಆಲೌಟ್ ಆಗಿತ್ತು. 1987ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದೆಹಲಿ ಮೈದಾನದಲ್ಲಿ 75 ರನ್ ಗಳಿಗೇ ಆಲೌಟ್ ಆಗಿತ್ತು.
Lowest totals in India in Tests
46 - IND vs NZ, Bengaluru, 2024*
62 - NZ v IND, Mumbai, 2021
75 - IND v WI, Delhi, 1987
76 - IND v SA, Ahmedabad, 2008
79 - SA v IND, Nagpur, 2015
ಏಷ್ಯಾದಲ್ಲಿ ಕಳಪೆ ಮೊತ್ತ; ಪಾಕಿಸ್ತಾನದ ದಾಖಲೆಯೂ ಪತನ
ಇನ್ನು ಭಾರತ ತಂಡ ಇಂದು ಗಳಿಸಿದ 46 ರನ್ ಮೊತ್ತ ಪಾಕಿಸ್ತಾನದ ಕಳಪೆ ದಾಖಲೆಯನ್ನೂ ಹಿಂದಿಕ್ಕಿದ್ದು. ಈ ಹಿಂದೆ ಪಾಕಿಸ್ತಾನ 1986ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು 2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ 53 ರನ್ ಗಳಿಗೇ ಆಲೌಟ್ ಆಗಿತ್ತು. ಈ ಎರಡು ಪಂದ್ಯಗಳು ಫೈಸಲಾಬಾದ್ ಮತ್ತು ಶಾರ್ಜಾದಲ್ಲಿ ನಡೆದಿತ್ತು. ಹೀಗಾಗಿ ಭಾರತ ಇಂದು ಗಳಿಸಿದ 46 ರನ್ ಮೊತ್ತ ಏಷ್ಯಾದಲ್ಲಿ ದಾಖಲಾದ ತಂಡವೊಂದರ ಅತ್ಯಂತ ಕಳಪೆ ಮೊತ್ತವಾಗಿದೆ.
- 46 runs is also the lowest total in Asia surpassing 53 runs by West Indies against Pakistan at Faisalabad in 1986 and 53 runs by Pakistan against Australia at Sharjah in 2002.
Advertisement