ಭದ್ರತೆಯನ್ನು ಲೆಕ್ಕಿಸದೆ ವಿಮಾನ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯನ್ನು ತಬ್ಬಿಕೊಂಡ ವಿರಾಟ್ ಕೊಹ್ಲಿ; ಯಾರು ಆಕೆ?

ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಮಹಿಳೆಯನ್ನು ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮೈದಾನದಲ್ಲಿರುವುದಕ್ಕೂ, ಕುಟುಂಬದೊಂದಿಗೆ ಇರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊಹ್ಲಿ ಒಮ್ಮೆ ಸ್ನೇಹ ಅಥವಾ ಯಾವುದೇ ಬಂಧನಕ್ಕೆ ಒಳಪಟ್ಟರೆ ಅದರಿಂದ ದೂರಾಗುವುದು ಅಷ್ಟು ಸುಲಭವಲ್ಲ. ಕಳೆದ ತಿಂಗಳು ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅವರ ಹಳೆಯ ಸ್ನೇಹಿತ ಶಾವೆಜ್ ಸಿಕ್ಕಾಗ ಕೊಹ್ಲಿ ನಡೆದುಕೊಂಡಿದ್ದ ರೀತಿಯೇ ಹಾಗಿತ್ತು.

ಕೊಹ್ಲಿ ಬರೋಬ್ಬರಿ 12 ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ್ದರು ಮತ್ತು ಅವರ ಬ್ಯಾಟಿಂಗ್ ವೀಕ್ಷಿಸಲು ಅಸಂಖ್ಯಾತ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜಮಾಯಿಸಿದ್ದರು. ಈ ಮಧ್ಯೆ, ವಿರಾಟ್ ಕೊಹ್ಲಿ ತಮ್ಮ ಹಳೆಯ ಸ್ನೇಹಿತ ಮತ್ತು ಅವರ ಮಗ ಕಬೀರ್‌ ಜೊತೆಗೆ ಮಾತನಾಡಿದರು. ಕಬೀರ್‌ಗೆ ಸಲಹೆ ನೀಡಿದ ಅವರು, ಸ್ನೇಹಿತನೊಂದಿಗೆ ಹಾಸ್ಯ ಚಟಾಕಿ ಹಾರಿಸಿದ್ದರು.

ಇತ್ತೀಚೆಗಷ್ಟೇ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲದ ಕಾರಣ ಚರ್ಜೆಗೆ ಗ್ರಾಸವಾಗಿರುವ ಕೊಹ್ಲಿ, ತಮ್ಮ ಸ್ನೇಹಿತ, ಯುವ ದೆಹಲಿ ಕ್ರಿಕೆಟಿಗರು ಮತ್ತು ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುವುದನ್ನು ತಪ್ಪಿಸಲಿಲ್ಲ.

ಇಂಗ್ಲೆಂಡ್ ವಿರುದ್ಧದ ಎರಡನೇ ODI ನಂತರದ ದಿನ, ಭಾರತ ತಂಡವು ಅಹಮದಾಬಾದ್‌ಗೆ ತೆರಳಲು ಭುವನೇಶ್ವರ ವಿಮಾನ ನಿಲ್ದಾಣವನ್ನು ತಲುಪಿತು. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಅಲ್ಲಿ ಮೂರನೇ ಮತ್ತು ಅಂತಿಮ ODI ನಡೆಯಲಿದೆ. ಬಿಗಿ ಭದ್ರತೆಯ ನಡುವೆಯೂ ಕೊಹ್ಲಿ, ಯಾವುದೋ ಮಹಿಳೆಯನ್ನು ಕಂಡು ನಗು ಬೀರಿದರು. ಮಹಿಳೆಯೊಂದಿಗೆ ಶೀಘ್ರ ಮಾತುಕತೆ ನಡೆಸಿದರು ಮತ್ತು ಅವರನ್ನು ಅಪ್ಪಿಕೊಂಡರು.

ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಮಹಿಳೆಯನ್ನು ತಬ್ಬಿಕೊಂಡಿರುವ ವಿಡಿಯೋ ವೈರಲ್ ಆದಂದಿನಿಂದ ಇಂಟರ್‌ನೆಟ್‌ನಲ್ಲಿ ವಿರಾಟ್ ಕೊಹ್ಲಿ ಅಪ್ಪಿಕೊಂಡ ಆ ಮಹಿಳೆ ಯಾರು? ಕೊಹ್ಲಿ ಆಕೆಯನ್ನು ತಬ್ಬಿಕೊಂಡಿದ್ದು ಏಕೆ? ಆ ಅದೃಷ್ಟವನ್ನು ಪಡೆದ ಆಕೆ ಸಾಮಾನ್ಯ ಅಭಿಮಾನಿಯಾಗಿಯೇ? ಇಂತಹ ಪ್ರಶ್ನೆಗಳ ಮಹಾಪೂರವೇ ಹರಿದಾಡುತ್ತಿದೆ.

ಕೊಹ್ಲಿಯ ದೇಹ ಭಾಷೆ ಮತ್ತು ಅಭಿವ್ಯಕ್ತಿಗಳನ್ನು ನೋಡಿದರೆ, ಅವರಿಗೆ ಮಹಿಳೆ ಯಾರೆಂದು ತಿಳಿದಿದೆ. ಮಹಿಳೆ ಕೇವಲ ಅಭಿಮಾನಿಯಾಗಿರಲಿಲ್ಲ ಎಂದು ತೋರುತ್ತದೆ. ಕೊಹ್ಲಿ ಅಭಿಮಾನಿಯ ಸಾಮಾಜಿಕ ಮಾಧ್ಯಮ ಪೇಜ್ ಒಂದು ಆಕೆ ವಿರಾಟ್ ಕೊಹ್ಲಿ ಅವರ ನಿಕಟ ಸಂಬಂಧಿ ಎಂದು ಹೇಳಿದೆ.

ಸೋಮವಾರ ತಡರಾತ್ರಿ ಟೀಂ ಇಂಡಿಯಾ ಅಹಮದಾಬಾದ್‌ಗೆ ಬಂದಿಳಿದಿದೆ. ಭಾರತ ಈಗಾಗಲೇ ಮೂರು ಪಂದ್ಯಗಳ ಸರಣಿಯನ್ನು 2-1 ರಿಂದ ಗೆದ್ದಿದ್ದಾರೆ. ಆದರೆ, ಚಾಂಪಿಯನ್ಸ್ ಟ್ರೋಫಿಗಾಗಿ ದುಬೈಗೆ ಹಾರುವ ಮುನ್ನ ಕೊಹ್ಲಿ ತಮ್ಮ ಫಾರ್ಮ್‌ಗೆ ಮರಳಲು ಬುಧವಾರದ ಕೊನೆಯ ಪಂದ್ಯವು ನಿರ್ಣಾಯಕವಾಗಿದೆ.

ವಿರಾಟ್ ಕೊಹ್ಲಿ
Ind vs Eng, 1st ODI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರೆ ಎಂದ ಮಾಜಿ ಕ್ರಿಕೆಟಿಗ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com