Champions Trophy 2025: 'ಸಿಕ್ಸ್ ಹೊಡಿ ಗುರು...' ಎಂದ Rohit Sharma; ಶತಕ ಸಿಡಿಸಿ 'ನಾನಿದ್ದೀನಿ ಬಿಡು'.. ಎಂದ Virat Kohli, Video Viral

ಪಾಕಿಸ್ತಾನ ತಂಡ ಫೀಲ್ಡಿಂಗ್ ಅನ್ನು ಟೈಟ್ ಮಾಡಿತ್ತು. ಕೊಹ್ಲಿ ಒಂದೊಂದು ರನ್ ಗೂ ಪಾಕಿಸ್ತಾನ ತಡೆ ಒಡುತ್ತಿತ್ತು. ಕೊಹ್ಲಿ ಸ್ಕೋರ್ ಗಳಿಕೆ 95 ರನ್ ಆದಾಗ ಭಾರತ ತಂಡ ಗೆಲ್ಲಲು ಕೇವಲ 4 ರನ್ ಗಳ ಅಗತ್ಯವಿತ್ತು.
Virat Kohli-Rohit Sharma
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
Updated on: 

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಾಕಿಸ್ತಾನ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಜೊತೆಯಲ್ಲೇ ವಿರಾಟ್ ಕೊಹ್ಲಿಯ ಶತಕ ಕೂಡ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಕಳೆದ ಕೆಲ ತಿಂಗಳುಗಳಿಂದ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಅಷ್ಟೇನೂ ಉತ್ತಮ ರೀತಿಯಲ್ಲಿ ರನ್ ಗಳು ಬಂದಿರಲಿಲ್ಲ. ಆದರೆ ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಹಳೆಯ ಲಯ ಕಂಡುಕೊಂಡಿದ್ದು ಮಾತ್ರವಲ್ಲದೇ ತಮ್ಮ ಖ್ಯಾತಿಗೆ ತಕ್ಕಂತೆ ಚೇಸಿಂಗ್ ಮಾಸ್ಟರ್ ರಂತೆ ಬ್ಯಾಟ್ ಬೀಸಿ ಶತಕ ಸಿಡಿಸಿದರು.

ಪಾಕಿಸ್ತಾನ ನೀಡಿದ 242 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಅಕ್ಷರಶಃ ಮ್ಯಾಚ್ ವಿನ್ನರ್ ಆಗಿ ಪರಿಣಮಿಸಿದ್ದರು. ಪಾಕಿಸ್ತಾನದ ಎಲ್ಲ ಬೌಲಿಂಗ್ ತಂತ್ರಗಾರಿಕೆಗಳನ್ನೂ ಛಿದ್ರ ಮಾಡಿದ ಕೊಹ್ಲಿ ಪಂದ್ಯದ ಕೊನೆಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.

Virat Kohli-Rohit Sharma
ICC Champions Trophy 2025: ''ಪ್ರಿನ್ಸ್ ನ ಕೆಣಕಿ, ಕಿಂಗ್ ಇರೋದನ್ನೇ ಮರೆತ''..; ಪಾಕ್ ಸ್ಪಿನ್ನರ್ Abrar Ahmedಗೆ ಅಭಿಮಾನಿಗಳ ಟ್ರೋಲ್!

''ಅವ್ರು ಬಿಡಲ್ಲ.. ಸಿಕ್ಸ್ ಹೊಡಿ ಗುರು...' '

ಈ ಪಂದ್ಯದಲ್ಲಿ ಕೊಹ್ಲಿ ಸ್ಕೋರ್ ಗಳಿಕೆ 90 ದಾಟುತ್ತಿದ್ದಂತೆಯೇ ಅಭಿಮಾನಿಗಳ ಎದೆಯಲ್ಲಿ ಢವಢವ ಶುರುವಾಯಿತು. ಇದೇ ಹೊತ್ತಿನಲ್ಲಿ ಶ್ರೇಯಸ್ ಅಯ್ಯರ್ ಕೂಡ ಔಟಾಗಿದ್ದರು. ಪಾಕಿಸ್ತಾನ ತಂಡ ಫೀಲ್ಡಿಂಗ್ ಅನ್ನು ಟೈಟ್ ಮಾಡಿತ್ತು. ಕೊಹ್ಲಿ ಒಂದೊಂದು ರನ್ ಗೂ ಪಾಕಿಸ್ತಾನ ತಡೆ ಒಡುತ್ತಿತ್ತು. ಕೊಹ್ಲಿ ಸ್ಕೋರ್ ಗಳಿಕೆ 95 ರನ್ ಆದಾಗ ಭಾರತ ತಂಡ ಗೆಲ್ಲಲು ಕೇವಲ 4 ರನ್ ಗಳ ಅಗತ್ಯವಿತ್ತು. ಆಗ ಪೆವಿಲಿಯನ್ ನಲ್ಲಿದ್ದ ರೋಹಿತ್ ಶರ್ಮಾ ಸಿಕ್ಸರ್ ಹೊಡೆಯುವಂತೆ ಕೊಹ್ಲಿಗೆ ತಮಾಷೆಯಾಗಿ ಹೇಳಿದರು. ಇದನ್ನು ನೋಡಿ ನಕ್ಕಿದ್ದ ಕೊಹ್ಲಿ ಬಳಿಕ ತಂಡದೆ ಗೆಲುವಿಗೆ 2ರನ್ ಅಗತ್ಯವಿದ್ದಾಗ ಬೌಂಡರಿ ಭಾರಿಸಿ ಶತಕ ಪೂರ್ಣಗೊಳಿಸಿದರು.

Virat Kohli-Rohit Sharma
ICC Champions Trophy 2025: ಶತಕ ಸಿಡಿಸಿ ಪತ್ನಿಗೆ ಅರ್ಪಿಸಿದ Virat Kohli; ಪ್ರತಿಕ್ರಿಯೆ ಕೊಟ್ಟ Anushka Sharma

ಕೊಹ್ಲಿ ಶತಕಕ್ಕೆ ಅಡ್ಡಿಯಾಗುತ್ತಿದ್ದ ಹಾರ್ದಿಕ್ ಪಾಂಡ್ಯ

ಇನ್ನು ಕೊಹ್ಲಿ ಶತಕದಂಚಿಗೆ ಸಾಗುತ್ತಿರುವ ಸಂದರ್ಭದಲ್ಲೇ ಶ್ರೇಯಸ್ ಅಯ್ಯರ್ ಬಳಿಕ ಕ್ರೀಸ್ ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಈ ವೇಳೆ ಅಭಿಮಾನಿಗಳು ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ವೇಗ ನೋಡಿ ಕೊಹ್ಲಿ ಶತಕ ಸಿಡಿಸಲು ಸಾಧ್ಯವಾಗುವುದಿಲ್ಲ. ಪಾಂಡ್ಯಾ ಬೇಗನೇ ಇನ್ನಿಂಗ್ಸ್ ಮುಗಿಸುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದರು. ಆದರೆ ಪಾಂಡ್ಯಾ ದೊಡ್ಡ ಹೊಡೆತಕ್ಕೆ ಮುಂದಾಗಿ ಕೀಪರ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.

'ನಾನಿದ್ದೀನಿ ಬಿಡು'

ಪಾಂಡ್ಯಾ ಔಟ್ ಆಗುತ್ತದ್ದಂತೆಯೇ ಮತ್ತೆ ಅಭಿಮಾನಿಗಳಲ್ಲಿ ಕೊಹ್ಲಿ ಶತಕದ ಆಸೆ ಮತ್ತೆ ಚಿಗುರೊಡೆಯಿತು. ಇದಕ್ಕೆ ಅಕ್ಸರ್ ಪಟೇಲ್ ಕೂಡ ನೆರವಾದರು. ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟ ಅಕ್ಸರ್ ಪಟೇಲ್ ರಕ್ಷಣಾತ್ಮಕ ಆಟದ ಮೊರೆ ಹೋದರು. ಪರಿಣಾಮ ಒಂದು ಬದಿಯಲ್ಲಿ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಬೇಗನೆ ರನ್ ಹೆಕ್ಕಿ ಗೆಲ್ಲಲು 2 ರನ್ ಅಗತ್ಯವಿದ್ದಾಗ ಮತ್ತು ತಮಗೆ ಶತಕಕ್ಕೆ 4 ರನ್ ಅಗತ್ಯವಿದ್ದಾಗ ಬೌಂಡರಿ ಸಿಡಿಸಿ ತಾವೂ ಶತಕಸಿಡಿಸಿದರು. ತಂಡವನ್ನೂ ಗೆಲುವಿನ ದಡ ಸೇರಿಸಿದರು.

ಗೆಲುವಿನ ಬಳಿಕ ರೋಹಿತ್ ಶರ್ಮಾರನ್ನು ನೋಡುತ್ತಾ ನಗುತ್ತಲೇ ನಾನಿರುವೆ. ಸಂಭಾಳಿಸುತ್ತೇನೆ ಎನ್ನುವ ಅರ್ಥದಲ್ಲಿ ಹೇಳಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com