
ಕೋಲ್ಕತಾ: ನಿರೀಕ್ಷೆಯಂತೆಯೇ ಐಪಿಎಲ್ 2025 ಟೂರ್ನಿ ಅದ್ದೂರಿಯಾಗಿ ಆರಂಭವಾಗಿದ್ದು. ಅಂತೆಯೇ ಮೊದಲ ಪಂದ್ಯದಲ್ಲಿ ಗಂಭೀರ ಭದ್ರತಾ ವೈಫಲ್ಯ ಕಂಡುಬಂದಿದೆ.
ಹೌದು.. ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೋರ್ವ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಬೇಲಿ ಹಾರಿಕೊಂಡು ಮೈದಾನಕ್ಕೆ ನುಸುಳಿದ ಘಟನೆ ನಡೆದಿದೆ.
ಆರ್ ಸಿಬಿ ಪರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅಭಿಮಾನಿಯೋರ್ವ ಓಡಿ ಬಂದು ವಿರಾಟ್ ಕೊಹ್ಲಿಯ್ನು ತಪ್ಪಿಕೊಂಡಿದ್ದಾನೆ. ಅಲ್ಲದೆ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದಾನೆ. ಈ ವೇಳೆ ವಿರಾಟ್ ಕೊಹ್ಲಿ ಅಭಿಮಾನಿಯನ್ನು ತಪ್ಪಿಕೊಂಡು ತಿಳಿ ಹೇಳಿ ವಾಪಸ್ ಕಳುಹಿಸಿದ್ದಾರೆ.
ಭದ್ರತಾ ಸಿಬ್ಬಂದಿ ತಬ್ಬಿಬ್ಬು
ಇನ್ನು ಅಭಿಮಾನಿ ಸಿಬ್ಬಂದಿ ಕಣ್ತಪ್ಪಿಸಿ ಒಳನುಗ್ಗಿದ ವೇಳೆ ಭದ್ರತಾ ಸಿಬ್ಬಂದಿಗಳು ಕೆಲಕ್ಷಣಗಳ ಕಾಲ ತಬ್ಬಿಬ್ಬಾದರು. ಬಳಿಕ ಆತನನ್ನು ಹಿಡಿದು ಹೊರಕ್ಕೆ ಕರೆದೊಯ್ದರು. ಈ ವೇಳೆ ಕೊಹ್ಲಿ ಭದ್ರತಾ ಸಿಬ್ಬಂದಿಗೆ ಆತನಿಗೆ ಏನು ಮಾಡಬೇಡಿ ಎಂದು ಸೂಚಿಸಿ ಕಳುಹಿಸಿಕೊಟ್ಟರು. ಬಳಿಕ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.
ಇನ್ನು ಪಂದ್ಯದಲ್ಲಿ ಫಿಲ್ ಸಾಲ್ಟ್(56) ಮತ್ತು ವಿರಾಟ್ ಕೊಹ್ಲಿ(59*) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್ ಸಿಬಿ ಶುಭಾರಂಭ ಮಾಡಿತು. ಕೋಲ್ಕೊತಾ ನೈಟ್‌ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಕೆಕೆಆರ್ ನೀಡಿದ 175 ರನ್ ಗುರಿಯನ್ನು ಬೆನ್ನಟ್ಟಿದ ರಜತ್ ಪಾಟೀದಾರ್ ಪಡೆ 16.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಗೆಲುವು ಸಾಧಿಸಿತು.
ಆರ್‌ಸಿಬಿ ಪರ ಆರಂಭಿಕ ಬ್ಯಾಟರ್‌ಗಳಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ನೀಡಿ ಭದ್ರ ಬುನಾದಿ ಹಾಕಿಕೊಟ್ಟರು. ನವನಾಯಕ ರಜತ್ ಪಾಟೀದಾರ್ ಅವರೂ 34 ರನ್ ಗಳಿಸಿ ಮುಖ್ಯ ಪಾತ್ರ ನಿರ್ವಹಿಸಿದರು. ಮೊದಲ ಗೆಲುವಿನೊಂದಿಗೆ ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ.
Advertisement