IPL 2025: 'ಮಿಂಚಿನ ವೇಗ'; 0.12 ಸೆಕೆಂಡ್‌ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!

ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಣ್ಣು ಮಿಟುಕಿಸುವುದರೊಳಗೆ ಧೋನಿ ಸ್ಟಂಪ್ ಮಾಡಿದರು.
IPL 2025: 'ಮಿಂಚಿನ ವೇಗ'; 0.12 ಸೆಕೆಂಡ್‌ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!
Updated on

ಎಂಎಸ್ ಧೋನಿಗೆ 43 ವರ್ಷ ವಯಸ್ಸಾಗಿದ್ದರೂ ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಪ್ರಜ್ವಲಿಸುತ್ತಲೇ ಇದೆ. ಮಾರ್ಚ್ 23ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಣ್ಣು ಮಿಟುಕಿಸುವುದರೊಳಗೆ ಧೋನಿ ಸ್ಟಂಪ್ ಮಾಡಿದರು. ಧೋನಿ ಕೇವಲ 0.12 ಸೆಕೆಂಡುಗಳಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿದರು. ಈ ಪಂದ್ಯದಲ್ಲಿ ಸೂರ್ಯ ಕೇವಲ 29 ರನ್ ಗಳಿಸಲಷ್ಟೇ ಶಕ್ತರಾದರು.

ಮುಂಬೈ ಇಂಡಿಯನ್ಸ್ ತಂಡದ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ನೂರ್ ಅಹ್ಮದ್ ಬೌಲಿಂಗ್ ಮಾಡುತ್ತಿದ್ದು ಓವರ್‌ನ ಮೂರನೇ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ಬ್ಯಾಟ್ ಬೀಸಿದರು. ಆದರೆ ಚೆಂಡು ಬ್ಯಾಟ್ ಗೆ ತಾಗದೆ ಕೈಸೇರಿತು. ಒಂದು ಅವಕಾಶಕ್ಕಾಗಿ ಧೋನಿ ಕಾಯುತ್ತಿದ್ದು ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಸೂರ್ಯಕುಮಾರ್ ಯಾದವ್ ಅವರನ್ನು ಸ್ಟಂಪ್ ಮಾಡಿದರು. ಧೋನಿಯ ಕೈಗಳು ಎಷ್ಟು ವೇಗವಾಗಿದ್ದವೆಂದರೆ, ಧೋನಿ ಸ್ಟಂಪ್‌ಗಳನ್ನು ಚದುರಿಸಿದಾಗ ಅದನ್ನು ನೇರ ಪ್ರದರ್ಶನದಲ್ಲಿ ನೋಡಲು ಅಸಾಧ್ಯವಾಗಿತ್ತು. ನಿಧಾನಗತಿಯಲ್ಲೂ ಧೋನಿಯ ಕೈಗಳು ಮಿಂಚಿನ ವೇಗದಲ್ಲಿ ಚಲಿಸಿದವು.

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಧೋನಿ ಈಗಾಗಲೇ ಮಾಡಿದ್ದಾರೆ. ಇಲ್ಲಿಯವರೆಗೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 44 ಬ್ಯಾಟ್ಸ್‌ಮನ್‌ಗಳನ್ನು ಸ್ಟಂಪ್ ಔಟ್ ಮಾಡಿದ್ದಾರೆ. ದಿನೇಶ್ ಕಾರ್ತಿಕ್ 37 ಸ್ಟಂಪಿಂಗ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ರಾಬಿನ್ ಉತ್ತಪ್ಪ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 32 ಬ್ಯಾಟ್ಸ್‌ಮನ್‌ಗಳನ್ನು ಸ್ಟಂಪ್ ಔಟ್ ಮಾಡಿದ್ದಾರೆ.

IPL 2025: 'ಮಿಂಚಿನ ವೇಗ'; 0.12 ಸೆಕೆಂಡ್‌ಗಳಲ್ಲಿ Stump out ಮಾಡಿದ MS Dhoni; ವಯಸ್ಸಾಯ್ತು ಅಂದವರಿಗೆ ತಿರುಗೇಟು, Video!
IPL 2025: ರಚಿನ್ ರವೀಂದ್ರ ಬಗ್ಗೆ ತೀರಾ ಕೆಳಮಟ್ಟಕ್ಕಿಳಿದ ಧೋನಿ ಅಭಿಮಾನಿಗಳು; ಗೆಲುವಿನ ರೂವಾರಿಯನ್ನು ಹೀಯಾಳಿಸಿದ MSD Fans!

ಎಂಎಸ್ ಧೋನಿ ತಮ್ಮ 264 ಪಂದ್ಯಗಳ ಐಪಿಎಲ್ ವೃತ್ತಿಜೀವನದಲ್ಲಿ 5,243 ರನ್ ಗಳಿಸಿದ್ದಾರೆ. ಧೋನಿಗೆ ಐಪಿಎಲ್‌ನಲ್ಲಿ ಶತಕ ಗಳಿಸಲು ಸಾಧ್ಯವಾಗಿಲ್ಲ, ಆದರೆ 24 ಅರ್ಧಶತಕಗಳನ್ನು ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಧೋನಿ 220ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com