IPL 2025: Rajat Patidar ಅರ್ಧಶತಕ, ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲ್ಲಲು 198 ರನ್ ಬೃಹತ್ ಗುರಿ ನೀಡಿದ RCB

ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು.
Rajat Patidar
ಆರ್ ಸಿಬಿ ನಾಯಕ ರಜತ್ ಪಾಟಿದರ್
Updated on

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 198 ರನ್ ಗಳ ಬೃಹತ್ ಗುರಿ ನೀಡಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ (51 ರನ್) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿದೆ.

ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು. ಪ್ರಮುಖವಾಗಿ ಸ್ಫೋಟಕ ಆರಂಭ ನೀಡಿದ ಫಿಲಿಪ್ ಸಾಲ್ಟ್ ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು.

ಆದರೆ ಈ ಹಂತದಲ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ ಅದ್ಭುತ ಸ್ಟಪಿಂಗ್ ಗೆ ಸಾಲ್ಟ್ ಬಲಿಯಾದರು. ಧೋನಿ ಕೇವಲ 0.14 ಸೆಕೆಂಡ್ ನಲ್ಲೇ ಸ್ಟಂಪೌಟ್ ಮಾಡಿದ್ದು ಇದು ಈ ವರೆಗೂ ನಡೆದ ಪಂದ್ಯಗಳ ಪೈಕಿ 2ನೇ ವೇಗದ ಸ್ಟಂಪೌಟ್ ಆಗಿದೆ. ನೂರ್ ಅಹ್ಮದ್ ಎಸೆದ 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಲ್ಟ್‌ರ ವಿಕೆಟ್ ಪತನವಾಯಿತು.

Rajat Patidar
IPL 2025: CSK vs RCB; ಟಾಸ್ ಗೆದ್ದು Ruturaj Gaikwad ಬೌಲಿಂಗ್ ಆಯ್ಕೆ; ತವರಿನಲ್ಲೇ DKಗೆ ಅಗ್ನಿ ಪರೀಕ್ಷೆ!

ಬಳಿಕ ಕ್ರೀಸ್ ಗೆ ಬಂದ ದೇವದತ್ ಪಡಿಕ್ಕಲ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 14 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 27 ರನ್ ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ನಾಯಕ ರಜತ್ ಪಾಟಿದರ್ 32 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು.

ಈ ಹಂತದಲ್ಲಿ 31 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರು. ಕೊಹ್ಲಿ ಬೆನ್ನಲ್ಲೇ 10 ರನ್ ಗಳಿಸಿ ಲಿವಿಂಗ್ ಸ್ಟೋನ್ ಕೂಡ ಮತ್ತದೇ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಜಿತೇಶ್ ಶರ್ಮಾ 12 ರನ್ ಗಳಿಸಿ ಔಟಾದರೆ, ಕೃನಾಲ್ ಪಾಂಡ್ಯ ಶೂನ್ಯ ಸುತ್ತಿದರು.

Rajat Patidar
IPL 2025: 0.14 ಸೆಕೆಂಡ್ ನಲ್ಲೇ ಸ್ಟಂಪೌಟ್, MS Dhoni ವೇಗಕ್ಕೆ Phil Salt ಬೇಸ್ತು! Video

ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್

ಇನ್ನು ಆರ್ ಸಿಬಿ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಟಿಮ್ ಡೇವಿನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಆರ್ ಸಿಬಿ ಮೊತ್ತವನ್ನು 190ರ ಗಡಿ ದಾಟಿಸಿದರು. ಕೇವಲ 8 ಎಸೆತ ಎದುರಿಸಿದ ಟಿಮ್ ಡೇವಿಡ್ 3 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 22 ರನ್ ಸಿಡಿಸಿ ಆರ್ ಸಿಬಿ ಬೃಹತ್ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com