Cricket: ಆಸಿಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್; ಕೊಹ್ಲಿ ಸಾಧನೆ ಸೇರಿ ಹಲವು ದಾಖಲೆ ಮುರಿದ ರೋಹಿತ್ ಶರ್ಮಾ!

ಪಂದ್ಯದ ಯಾವುದೇ ಹಂತದಲ್ಲೂ ಆಸಿಸ್ ಬೌಲರ್ ಗಳಿಗೆ ಅವಕಾಶವನ್ನೇ ನೀಡದ ರೋಹಿತ್ ಶರ್ಮಾ ಕೊನೆಯ ಹಂತದವರೆಗೂ ಕ್ರೀಸ್ ನಲ್ಲಿ ನಿಂತು ತಂಡಕ್ಕೆ ಗೆಲುವು ತಂದು ಕೊಟ್ಟರು.
Rohit Sharma
ರೋಹಿತ್ ಶರ್ಮಾ ದಾಖಲೆ
Updated on

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿಯ ಸಾಧನೆ ಸೇರಿದಂತೆ ಹಲವು ದಾಖಲೆಗಳನ್ನು ಛಿದ್ರಗೊಳಿಸಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ 125 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 13 ಬೌಂಡರಿ ಸಹಿತ 121 ರನ್ ಗಳಿಸಿದರು.

ಪಂದ್ಯದ ಯಾವುದೇ ಹಂತದಲ್ಲೂ ಆಸಿಸ್ ಬೌಲರ್ ಗಳಿಗೆ ಅವಕಾಶವನ್ನೇ ನೀಡದ ರೋಹಿತ್ ಶರ್ಮಾ ಕೊನೆಯ ಹಂತದವರೆಗೂ ಕ್ರೀಸ್ ನಲ್ಲಿ ನಿಂತು ತಂಡಕ್ಕೆ ಗೆಲುವು ತಂದು ಕೊಟ್ಟರು.

ಅಂತೆಯೇ ಈ ಅಮೋಘ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

Rohit Sharma
3rd ODI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್; ಕ್ರಿಕೆಟ್ ಇತಿಹಾಸದ ಹಲವು ದಾಖಲೆ ಪತನ

ಒಂದೇ ಎದುರಾಳಿ ವಿರುದ್ಧ ಅತೀ ಹೆಚ್ಚು ಶತಕ

ಇನ್ನು ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಶತಕ ಸಿಡಿಸಿದರು. ಇದು ಅವರ ಏಕದಿನ ವೃತ್ತಿ ಜೀವನದ 33ನೇ ಶತಕವಾಗಿದ್ದು, ಆಸ್ಟ್ರೇಲಿಯಾ ವಿರುದ್ಧ 9ನೇ ಶತಕವಾಗಿದೆ. ಆ ಮೂಲಕ ಒಂದು ತಂಡದ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಜಂಟಿ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ 10 ಮತ್ತು ವೆಸ್ಟ್ ಇಂಡೀಸ್ ವಿರುದ್ಧ 9 ಶತಕಗಳನ್ನು ಸಿಡಿಸಿ ಅಗ್ರಸ್ಥಾನದಲ್ಲಿದ್ದು, ಇದೇ ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ 9 ಶತಕ ಸಿಡಿಸಿದ್ದು, ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿದ್ದಾರೆ.

Most ODI 100s against an opposition

  • 10 Virat Kohli vs Sri Lanka

  • 9 Virat Kohli vs West Indies

  • 9 Sachin Tendulkar vs Australia

  • 9 Rohit Sharma vs Australia

Rohit Sharma
3rd ODI: 'ರೋ-ಕೊ' ಭರ್ಜರಿ ಕಮ್ ಬ್ಯಾಕ್; ಸಿಡ್ನಿಯಲ್ಲಿ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ

ಆಸಿಸ್ ನೆಲದಲ್ಲಿ ಗರಿಷ್ಠ ಶತಕ, ಕೊಹ್ಲಿ ದಾಖಲೆ ಮುರಿದ ರೋಹಿತ್

ಇನ್ನು ಆಸ್ಚ್ರೇಲಿಯಾ ನೆಲದಲ್ಲಿ ಗರಿಷ್ಛ ಶತಕ ಸಿಡಿಸಿದ ದಾಖಲೆಯೂ ಇದೀಗ ರೋಹಿತ್ ಶರ್ಮಾ ಹೆಸರಿಗೆ ಬಂದಿದೆ. ಇಂದಿನ ಪಂದ್ಯದ ಶತಕವೂ ಸೇರಿದಂತೆ ರೋಹಿತ್ ಶರ್ಮಾ ಆಸ್ಟ್ರೇಲಿಯಾದಲ್ಲಿ ಒಟ್ಟು 6 ಶತಕಗಳನ್ನು ಸಿಡಿಸಿದ್ದಾರೆ. ಈ ದಾಖಲೆ ಇಷ್ಟು ದಿನ ವಿರಾಟ್ ಕೊಹ್ಲಿ ಹೆಸರಲ್ಲಿತ್ತು, ಕೊಹ್ಲಿ ಈವರೆಗೂ ಆಸಿಸ್ ನೆಲದಲ್ಲಿ 5 ಏಕದಿನ ಶತಕ ಸಿಡಿಸಿದ್ದಾರೆ. ಇದೀಗ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕುಮಾರ ಸಂಗಕ್ಕಾರ ಕೂಡ 5 ಶತಕ ಸಿಡಿಸಿದ್ದಾರೆ.

Most ODI 100s by a visiting batter in Australia

  • 6 Rohit Sharma (33 inngs)

  • 5 Virat Kohli (32)

  • 5 Kumar Sangakkara (49)

Rohit Sharma
3rd ODI: ಕುಮಾರ ಸಂಗಕ್ಕಾರ, ಸಚಿನ್ ತೆಂಡೂಲ್ಕರ್ ದಾಖಲೆ ಸೇರಿ ಹಲವು ರೆಕಾರ್ಡ್ಸ್ ಮುರಿದ Virat Kohli

ಬ್ಯಾಟಿಂಗ್ ಅಷ್ಟೇ ಅಲ್ಲ.. ಫೀಲ್ಡಿಂಗ್ ನಲ್ಲೂ ದಾಖಲೆ

ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಬ್ಯಾಟ್ ಹಿಡಿದು ಕ್ರೀಸ್​ಗಿಳಿಯುವ ಮುನ್ನವೇ ವಿಶೇಷ ಶತಕ ಪೂರೈಸಿದರು.

ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 100 ಕ್ಯಾಚ್​ಗಳನ್ನು ಪೂರೈಸಿದ್ದು, ಈ ಮೂಲಕ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್, ಸ್ಲಿಪ್‌ನಲ್ಲಿ ಮಿಚೆಲ್ ಓವನ್ ಮತ್ತು ನಾಥನ್ ಎಲಿಸ್ ಅವರ ಕ್ಯಾಚ್ ಅನ್ನು ಹಿಡಿಯುವ ಮೂಲಕ ಕ್ಯಾಚ್​ಗಳ ಶತಕ ಪೂರೈಸಿದರು.

ಹಾಗೆಯೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 100 ಕ್ಯಾಚ್‌ಗಳನ್ನು ಪಡೆದ ವಿಶ್ವದ 34 ನೇ ಆಟಗಾರರಾಗಿದ್ದಾರೆ. ರೋಹಿತ್ ತಮ್ಮ 276 ನೇ ಏಕದಿನ ಪಂದ್ಯದಲ್ಲಿ ಕ್ಯಾಚ್‌ಗಳ ಶತಕವನ್ನು ಪೂರೈಸಿದರು.

ರೋಹಿತ್ ಶರ್ಮಾಗಿಂತ ಮೊದಲು, ಭಾರತದ ಪರ 100 ಅಥವಾ ಅದಕ್ಕಿಂತ ಹೆಚ್ಚು ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನು ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸುರೇಶ್ ರೈನಾ ಮತ್ತು ಸೌರವ್ ಗಂಗೂಲಿ ಹೊಂದಿದ್ದಾರೆ.

ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ 163 ಕ್ಯಾಚ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಜರ್ 156, ತೆಂಡೂಲ್ಕರ್ 140, ದ್ರಾವಿಡ್ 124, ರೈನಾ 102, ಮತ್ತು ಗಂಗೂಲಿ 100 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ 2500 ರನ್

ಇನ್ನು ಇಂದಿನ ಶತಕ ಮಾತ್ರವಲ್ಲದೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2500 ರನ್ ಪೂರೈಸಿದ ದಾಖಲೆಯನ್ನು ನಿರ್ಮಿಸಿದರು. ಆ ಮೂಲಕ ಈ ಸಾಧನೆ ಮಾಡಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಗಂಗೂಲಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ ಮತ್ತು ಸೌರವ್ ಗಂಗೂಲಿ ಏಕದಿನ ಪಂದ್ಯಗಳಲ್ಲಿ ತಲಾ 100 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಆದಾಗ್ಯೂ, ರೋಹಿತ್ ಶರ್ಮಾ ಸೌರವ್ ಗಂಗೂಲಿಗಿಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ್ದಾರೆ.

ರೋಹಿತ್ 276 ಪಂದ್ಯಗಳಲ್ಲಿ 100 ಕ್ಯಾಚ್‌ಗಳನ್ನು ಪೂರೈಸಿದರೆ, ಗಂಗೂಲಿ 100 ಕ್ಯಾಚ್‌ಗಳನ್ನು ಪೂರೈಸಲು 311 ಏಕದಿನ ಪಂದ್ಯಗಳನ್ನು ತೆಗೆದುಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com