ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ನಂತರ ರಾಷ್ಟ್ರಪ್ರೇಮ ಮೆರೆದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವಾಗ ಸಿಡ್ನಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ.
Virat Kohli returned the flag to a fan after the Sydney ODI
ಕೆಳಗೆ ಬೀಳುತ್ತಿದ್ದ ಭಾರತದ ಧ್ವಜ ಎತ್ತಿಕೊಟ್ಟ ವಿರಾಟ್ ಕೊಹ್ಲಿ
Updated on

ಶನಿವಾರ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದ ನಂತರ ಅಭಿಮಾನಿಯೊಬ್ಬರು ಬೀಳಿಸಿದ ಭಾರತೀಯ ಧ್ವಜವನ್ನು ಎತ್ತಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿ ದೇಶಭಕ್ತಿ ಮೆರೆದಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದ ಕೊಹ್ಲಿ, ಮೂರನೇ ಪಂದ್ಯದಲ್ಲಿ ಅಜೇಯ 74 ರನ್ ಗಳಿಸುವ ಮೂಲಕ ಭಾರತ 9 ವಿಕೆಟ್‌ಗಳ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರೋಹಿತ್ ಶರ್ಮಾ ಕೂಡ ಅಜೇಯ 121 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವಾಗ ಸಿಡ್ನಿ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿದೆ. ಈ ವೇಳೆ ಭಾರತೀಯ ಅಭಿಮಾನಿಯೊಬ್ಬರು ರಾಷ್ಟ್ರೀಯ ಧ್ವಜವನ್ನು ಬೀಳಿಸುವುದನ್ನು ಕಂಡ ಕೊಹ್ಲಿ, ಕೂಡಲೇ ಅದನ್ನು ಅವರಿಗೆ ಎತ್ತಿಕೊಟ್ಟಿದ್ದಾರೆ. ಕೊಹ್ಲಿ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಒಂಬತ್ತು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ದೀರ್ಘಕಾಲದ ಪಾಲುದಾರಿಕೆಯ ಬಗ್ಗೆ ಮಾತನಾಡಿದರು. ಒಟ್ಟಿಗೆ ಕ್ರಿಕೆಟ್ ಆಡುವ ಆನಂದವು ಸ್ಮರಣೀಯ ಜೊತೆಯಾಟಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಶನಿವಾರ, ರೋಹಿತ್ ಶರ್ಮಾ 13 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 125 ಎಸೆತಗಳಲ್ಲಿ ಔಟಾಗದೆ 121 ರನ್ ಗಳಿಸಿದರು. ಇದು ಈ ಸ್ವರೂಪದಲ್ಲಿ ಅವರ 33ನೇ ಶತಕ. ಕೊಹ್ಲಿ 81 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ ಅಜೇಯ 74 ರನ್ ಗಳಿಸಿ ಉತ್ತಮ ಜೊತೆಯಾಟವಾಡಿದರು ಮತ್ತು ಏಕದಿನ ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು.

ಆಸ್ಟ್ರೇಲಿಯಾ ನೀಡಿದ್ದ ರನ್ ಗುರಿ ಬೆನ್ನತ್ತಿದ್ದ ಈ ಜೋಡಿಯ ಅಜೇಯ 168 ರನ್‌ಗಳ ಪಾಲುದಾರಿಕೆಯು ಭಾರತವು 237 ರನ್‌ಗಳ ಗುರಿಯನ್ನು 11.3 ಓವರ್‌ಗಳು ಬಾಕಿ ಇರುವಾಗಲೇ ಪೂರ್ಣಗೊಳಿಸಲು ನೆರವಾಯಿತು ಮತ್ತು ಸರಣಿಯನ್ನು ಭರ್ಜರಿ ಗೆಲುವಿನೊಂದಿಗೆ ಕೊನೆಗೊಳಿಸಿತು. ಆಸ್ಟ್ರೇಲಿಯಾ ವಿರುದ್ಧ ಕ್ಲೀನ್ ಸ್ವೀಪ್ ಸೋಲನ್ನು ತಪ್ಪಿಸಿಕೊಂಡಿತು.

Virat Kohli returned the flag to a fan after the Sydney ODI
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಶುಭಮನ್ ಗಿಲ್ ಸ್ಪಷ್ಟ ಉತ್ತರ

'ಸತತ ಎರಡು ಬಾರಿ ಸೊನ್ನೆಗೆ ಔಟಾದ ನಂತರ ಅಂತಿಮವಾಗಿ ರನ್ ಗಳಿಸಿದ ನಂತರ ನಿರಾಳತೆ ಉಂಟಾಗುತ್ತದೆ. ಸುದೀರ್ಘ ಮತ್ತು ಯಶಸ್ವಿ ವೃತ್ತಿಜೀವನದ ನಂತರವೂ, ಈ ಹಂತದಲ್ಲಿಯೂ ನಿಮಗೆ ಕ್ರಿಕೆಟ್ ಎಲ್ಲವನ್ನು ತೋರಿಸುತ್ತದೆ. ರನ್ ಗಳಿಸುವುದು ಹೇಗೆಂದು ತಿಳಿದಿಲ್ಲ ಎಂದು ನನಗೆ ಅನಿಸುತ್ತಿಲ್ಲ. ನನ್ನ ಪ್ರಕಾರ, ಈ ಆಟ ಅದ್ಭುತವಾಗಿದೆ. ಅದಕ್ಕಾಗಿಯೇ ನಾವು ಬ್ಯಾಟಿಂಗ್ ಅನ್ನು ಇಷ್ಟಪಡುತ್ತೇವೆ; ನಾವು ಬ್ಯಾಟ್ಸ್‌ಮನ್‌ಶಿಪ್ ಅನ್ನು ಪ್ರೀತಿಸುತ್ತೇವೆ. ಅದು ನಿಮ್ಮ ರೀತಿಯಲ್ಲಿ ಹೋಗದಿದ್ದಾಗ ಅದು ತುಂಬಾ ಸವಾಲಿನದ್ದಾಗಿರುತ್ತದೆ' ಎಂದು ವಿರಾಟ್ ಕೊಹ್ಲಿ ಹೇಳಿದರು.

'ಮತ್ತೆ ನಿಮ್ಮ ಲಯ ಕಂಡುಕೊಳ್ಳಲು, ಸಹಜವಾಗಿಯೇ, ಅಲ್ಲಿಗೆ ಹೋಗುವುದು, ಯಾವಾಗಲೂ ಆಡಲು ಒಂದು ಸನ್ನಿವೇಶವನ್ನು ಹೊಂದಿರುವುದು ನನ್ನಲ್ಲಿರುವ ಅತ್ಯುತ್ತಮತೆಯನ್ನು ಯಾವಾಗಲೂ ಹೊರತರುತ್ತದೆ. ರೋಹಿತ್ ಈಗಾಗಲೇ ಅಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ, ಸ್ಟ್ರೈಕ್ ರೊಟೇಟ್ ಮಾಡುವುದು ತುಂಬಾ ಸುಲಭ. ನಾವು ಪರಸ್ಪರರ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ಮತ್ತೊಮ್ಮೆ, ನಮಗೆ ದೊಡ್ಡ ಜೊತೆಯಾಟ ಮತ್ತು ಪಂದ್ಯವನ್ನು ಗೆಲುವಿನಲ್ಲಿ ಮುಗಿಸುವುದು ನಿಜವಾಗಿಯೂ ಒಳ್ಳೆಯದು" ಎಂದು ಕೊಹ್ಲಿ ಆಟದ ಕೊನೆಯಲ್ಲಿ ಪ್ರಸಾರಕರಿಗೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com