
ಅಬುದಾಬಿ: ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿಯಲ್ಲಿ ಗೆಲ್ಲುವ ಫೇವರಿಟ್ ತಂಡದ ಕುರಿತು ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ (Suryakumar Yadav) ಖಡಕ್ ಉತ್ತರ ನೀಡಿದ್ದು ಮಾತ್ರವಲ್ಲದೇ ಪಾಕಿಸ್ತಾನ ತಂಡಕ್ಕೂ ಓಪನ್ ಚಾಲೆಂಜ್ ಹಾಕಿದ್ದಾರೆ.
ಹೌದು.. ಇಂದಿನಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದ್ದು, ಈ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಭಾರತ ಫೇವರಿಟ್ ತಂಡವೇ ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, "ಯಾರು ಹೇಳಿದ್ರು ಹಾಗಂತ? ನಾನಂತೂ ಕೇಳಿಲ್ಲ" ಎಂದು ಹೇಳಿ ಅಚ್ಚರಿ ಮೂಡಿಸಿದರು.
ಅಂತೆಯೇ 'ನಿಮ್ಮ ಸಿದ್ಧತೆಗಳು ಚೆನ್ನಾಗಿದ್ದರೆ, ನೀವು ಖಂಡಿತವಾಗಿಯೂ ಆತ್ಮವಿಶ್ವಾಸದಿಂದ ಆಡುತ್ತೀರಿ. ನಾವು ಬಹಳ ದಿನಗಳ ನಂತರ ಆಡುತ್ತಿದ್ದೇವೆ. 3-4 ದಿನಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ತಂಡವಾಗಿ ನಮಗೆ ಇಲ್ಲಿ ಬಹಳ ಸಮಯ ಸಿಕ್ಕಿದೆ. ಈ ಪಂದ್ಯಾವಳಿಯಲ್ಲಿ ಆಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ' ಎಂದು ಹೇಳಿದರು.
ಸುದ್ದಿಗಾರನ ಪ್ರಶ್ನೆಗೆ ಖಡಕ್ ಉತ್ತರ, ಪಾಕ್ ಗೆ ಓಪನ್ ಚಾಲೆಂಜ್!
ಇದೇ ವೇಳೆ ಸುದ್ದಿಗಾರರೊಬ್ಬರು ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ 'ಭಾರತ-ಪಾಕಿಸ್ತಾನ ನಡುವೆ ಟೆನ್ಷನ್ ಇರುವುದರ ನಡುವೆ ಆಟಗಾರರು ತಮ್ಮ ಸಿಟ್ಟನ್ನು ನಿಯಂತ್ರಿಸಲು ನೀವೇನಾದರೂ ನಿರ್ದೇಶನ ನೀಡಿದ್ದೀರಾ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಸೂರ್ಯಕುಮಾರ್, "ಮೈದಾನಕ್ಕಿಳಿದಾಗ ನಮ್ಮಲ್ಲಿ ಆಕ್ರಮಣಕಾರಿ ಮನೋಭಾವ ಯಾವಾಗಲೂ ಇದ್ದೇ ಇರುತ್ತದೆ. ಆಕ್ರಮಣಕಾರಿ ಮನೋಭಾವ ಇಲ್ಲದೇ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ. ನಾವು ಮುಂದಿನ ಪಂದ್ಯ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಈ ಮೂಲಕ ಪಾಕಿಸ್ತಾನ ಎದುರು ನಮ್ಮ ತಂಡ ಆಕ್ರಮಣಕಾರಿ ಆಟವನ್ನು ಆಡಲಿದೆ ಎಂದು ಸೂರ್ಯಕುಮಾರ್ ಯಾದವ್ ಓಪನ್ ಚಾಲೆಂಜ್ ನೀಡಿದ್ದಾರೆ.
ಪಾಕ್ ನಾಯಕ ಉತ್ತರ!
ಇನ್ನು ಇದೇ ಪ್ರಶ್ನೆಗೆ ಉತ್ತರಿಸಿದ ಪಾಕ್ ನಾಯಕ ಸಲ್ಮಾನ್ ಅಲಿ ಆಘಾ, 'ಯಾರಾದರೂ ಅಗ್ರೇಷನ್ ಬಯಸಿದರೆ ಅದು ಅವರ ನಿರ್ಧಾರ. ನಾನು ಯಾರಿಗೂ ಏನು ಮಾರ್ಗದರ್ಶನ ನೀಡಿಲ್ಲ ಎಂದರು.
'T20 ಕ್ರಿಕೆಟ್‌ನಲ್ಲಿ ಯಾವುದೇ ತಂಡವೂ ಫೇವರಿಟ್ ಅಲ್ಲ. ಆ ದಿನ ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲುತ್ತಾರೆ. ಇದು ವೇಗದ ಆಟ. ಕೆಲವೇ ಓವರ್‌ಗಳಲ್ಲಿ ಆಟ ಬದಲಾಗಿಬಿಡಬಹುದು. ಹೀಗೆಯೇ ಎಂದು ಹೇಳಲು ಸಾಧ್ಯವಾಗದು. ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧದ ತ್ರಿಕೋನ ಸರಣಿ ಏಷ್ಯಾ ಕಪ್‌ಗೆ ಪೂರ್ವಸಿದ್ಧತೆಯಾಗಿತ್ತು. ಹೀಗಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನಾವು ಆ ಪಂದ್ಯಾವಳಿಯನ್ನು ಗೆಲ್ಲಬೇಕಿತ್ತು.
ಒಂದು ವೇಳೆ ನಾವು ಗೆಲ್ಲದಿದ್ದರೂ, ಏಷ್ಯಾ ಕಪ್ ಗೆಲ್ಲಲು ಇಲ್ಲಿಗೆ ಬರಬೇಕಿತ್ತು. ವೇಗದ ಬೌಲರ್‌ಗಳು ಸಹಜವಾಗಿಯೇ ಆಕ್ರಮಣಕಾರಿ ಮನೋಭಾವ ಹೊಂದಿರುತ್ತಾರೆ. ಆ ಮನೋಭಾವವೇ ಅವರನ್ನು ಆಟದಲ್ಲಿ ಹುರಿದುಂಬಿಸುತ್ತದೆ. ಆಟದ ನಿಯಮಗಳನ್ನು ಮೀರಿ ವರ್ತಿಸದಿದ್ದರೆ, ಯಾರಿಗೆ ಹೇಗೆ ಆಡಬೇಕೆನಿಸುತ್ತದೆಯೋ ಹಾಗೆ ಆಡಬಹುದು. ಈ ವಿಚಾರವಾಗಿ ನನ್ನ ಕಡೆಯಿಂದ ಯಾವುದೇ ನಿರ್ಬಂಧಗಳಿಲ್ಲ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಈ ಟೂರ್ನಿಯಲ್ಲಿ ಆಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ ಎಂದು ಪಾಕ್ ನಾಯಕ ಅಘಾ ಹೇಳಿದ್ದಾರೆ.
ಅಂತೆಯೇ 'ವೇಗದ ಬೌಲರ್‌ಗಳು ಸಹಜವಾಗಿಯೇ ಆಕ್ರಮಣಕಾರಿ ಮನೋಭಾವ ಹೊಂದಿರುತ್ತಾರೆ. ಆ ಮನೋಭಾವವೇ ಅವರನ್ನು ಆಟದಲ್ಲಿ ಹುರಿದುಂಬಿಸುತ್ತದೆ. ಆಟದ ನಿಯಮಗಳನ್ನು ಮೀರಿ ವರ್ತಿಸದಿದ್ದರೆ, ಯಾರಿಗೆ ಹೇಗೆ ಆಡಬೇಕೆನಿಸುತ್ತದೆಯೋ ಹಾಗೆ ಆಡಬಹುದು. ಈ ವಿಚಾರವಾಗಿ ನನ್ನ ಕಡೆಯಿಂದ ಯಾವುದೇ ನಿರ್ಬಂಧಗಳಿಲ್ಲ. ನಾವು ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಈ ಟೂರ್ನಿಯಲ್ಲಿ ಆಡಲು ನಾವೆಲ್ಲರೂ ಉತ್ಸುಕರಾಗಿದ್ದೇವೆ' ಎಂದು ಹೇಳಿದರು.
ಆಪರೇಷನ್ ಸಿಂದೂರ್
ಪಹಲ್ಗಾಂ ಉಗ್ರ ದಾಳಿ ಹಾಗೂ ಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುತ್ತಿದ್ದು, ಇದು ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈ ಪಂದ್ಯದ ಮೇಲೆ ನೆಡುವಂತೆ ಮಾಡಿದೆ.
ಅಂದಹಾಗೆ ಸೆಪ್ಟೆಂಬರ್ 9 ಅಂದರೆ ಇಂದಿನಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದ್ದು ಟೂರ್ನಿಯಲ್ಲಿ ನಾಳೆ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿರುವ ಭಾರತ, ಸೆಪ್ಟೆಂಬರ್ 14 ರಂದು ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.
ಸೆಪ್ಟೆಂಬರ್ 19ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವು ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.
ಭಾರತ ತಂಡ
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
Advertisement