

ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ (IPL) 2026ರ ಟೂರ್ನಿಯಲ್ಲಿ ಚೆನ್ನೈ ಸೋಲಿನ ಸರಣಿ ಮುಂದುವರೆಸಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಗಳಿಸಿದ್ದು ಪಂಜಾಬ್ ಗೆ 210 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ 210 ರನ್ ಬಾರಿಸಿ ಗೆಲುವಿನ ನಗೆ ಬೀರಿತು. ಪಂಜಾಬ್ ಪರ ಪ್ರಿಯಾಂಶು ಆರ್ಯ 39, ಪ್ರಭ್ಸಿಮ್ರಾನ್ ಸಿಂಗ್ 43, ಶ್ರೇಯಸ್ ಅಯ್ಯರ್ 50 ರನ್ ಬಾರಿಸಿದರು. ಅಂತಿಮವಾಗಿ ಸ್ಟೋಯ್ನಿಸ್ ಇನ್ನು 8 ಎಸೆತ ಬಾಕಿ ಇರುವಂತೆ ಬೌಂಡರಿ ಬಾರಿ ಗೆಲುವಿನ ದಡ ಸೇರಿದರು.
ಸಂಜು ಸ್ಯಾಮ್ಸನ್ ಕೇವಲ 7 ರನ್‌ಗಳಿಗೆ ಔಟಾದರು. ನಾಯಕ ರುತುರಾಜ್ ಗಾಯಕ್ವಾಡ್ 28 ರನ್‌ಗಳಿಗೆ ಔಟಾದರೇ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಖಾತೆ ತೆರೆಯದ 20 ವರ್ಷದ ಆಯುಷ್ ಮ್ಹಾತ್ರೆ ಪಂಜಾಬ್ ವಿರುದ್ಧ 43 ಎಸೆತಗಳಲ್ಲಿ 73 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಸರ್ಫರಾಜ್ ಖಾನ್ ಪಂಜಾಬ್ ವಿರುದ್ಧ ಕೇವಲ 12 ಎಸೆತಗಳಲ್ಲಿ 32 ರನ್ ಗಳಿಸಿದರು. ಶಿವಂ ದುಬೆ ತ 28 ಎಸೆತಗಳಲ್ಲಿ 45 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.
RCB ದಾಖಲೆ ಸರಿಗಟ್ಟಿದ CSK
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 209 ರನ್ ಬಾರಿಸುವ ಮೂಲಕ RCB ಅನ್ನು ಹಿಂದಿಕ್ಕಿ ಲೀಗ್‌ನಲ್ಲಿ ಅತಿ ಹೆಚ್ಚು 200+ ಸ್ಕೋರ್‌ಗಳನ್ನು ಗಳಿಸಿದ ತಂಡವಾಯಿತು. IPL ನಲ್ಲಿ ಆರ್ ಸಿಬಿ ಇದುವರೆಗೂ 35 ಬಾರಿ 200+ ಸ್ಕೋರ್ ಬಾರಿಸಿತ್ತು. ಇದೀಗ ಚೆನ್ನೈ 36ನೇ ಬಾರಿಗೆ 200 ಪ್ಲಸ್ ರನ್ ಬಾರಿಸಿದೆ. ಇನ್ನು ಪಂಜಾಬ್ ಕಿಂಗ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಂಜಾಬ್ 32 ಬಾರಿ 200+ ಸ್ಕೋರ್ ಬಾರಿಸಿದ್ದಾರೆ.
Advertisement