

ಗುವಾಹಟಿ: ಗುವಾಹಟಿಯಲ್ಲಿ ಮಂಗಳವಾರ ರಾತ್ರಿ ನಡೆದ ರಾಜಸ್ಥಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ IPL ಪಂದ್ಯ ವೈಭವ್ ಸೂರ್ಯವಂಶಿ vs ಜಸ್ಪ್ರೀತ್ ಬುಮ್ರಾ ಕಾರಣದಿಂದ ಹೆಚ್ಚು ಕುತೂಹಲ ಕೆರಳಿಸಿತ್ತು.
ಬಾರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದ ಅಡಚಣೆಗೊಳಗಾದ ಕಾರಣ 11 ಓವರ್ ಗಳಿಗೆ ಇಳಿಸಲ್ಪಟ್ಟಿತ್ತು. ಪಂದ್ಯ ತಡವಾಗಿ ರಾತ್ರಿ 10:10 ಆರಂಭವಾದರೂ ಪ್ರೇಕ್ಷಕರ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಕಾರಣ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್. ಅದರಲ್ಲೂ ಅವರು ವಿಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ ನಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ಪ್ರಮುಖ ಹೈಲೆಟ್ ಆದರು.
ಹೌದು. ಎರಡನೇ ಓವರ್ ನಲ್ಲಿ ಬುಮ್ರಾ ಅವರು ಮಿಡಲ್ ಮತ್ತು ಲೆಗ್ ಸ್ಲಾಟ್ ನಲ್ಲಿ ಹಾಕಿದ ಚೆಂಡನ್ನು ವೈಭವ್ ಲಾಂಗ್ ಆನ್ ಕಡೆಗೆ ಸಿಕ್ಸರ್ ಗೆತ್ತಿದರು. ಈ ವೇಳೆ ಬುಮ್ರಾ ಮುಖದಲ್ಲಿ ಕಿರು ನಗೆ ಚೆಲ್ಲಿದ್ದರು. ಬಳಿಕ 4ನೇ ಎಸೆತವನ್ನು ಬುಮ್ರಾ ಅವರು ಆಫ್ ಸ್ಟಂಪಿನ ಹೊರಗೆಸೆದಾಗ ವಿಚಲಿತರಾಗದ ವೈಭವ್ ಅದನ್ನು ಡೀಪ್ ಸ್ಕೇರ್ ಲೆಗ್ ಕಡೆಗೆ ಭರ್ಜರಿ ಸಿಕ್ಸರ್ ಎತ್ತಿದರು.
ಪ್ರಸ್ತುತ ವಿಶ್ವದಲ್ಲಿಯೇ ಅತ್ಯುತ್ತಮ ವೇಗಿ ಎಂದೇ ಹೆಸರುವಾಸಿಯಾಗಿರುವ ಜಸ್ಪ್ರೀತ್ ಬುಮ್ರಾಗೆ! ತಾನೆದುರಿಸಿದ ಬುಮ್ರಾ ಅವರ ಮೊದಲ ಎಸತವನ್ನೇ ಸಿಕ್ಸರ್ ಗಟ್ಟಿದ ವೈಭವ್ ಕೇವಲ 14 ಎಸೆತಗಳಲ್ಲಿ ಹೊಡೆದದ್ದು 5 ಸಿಕ್ಸರ್ 1 ಬೌಂಡರಿಯೊಂದಿಗೆ 39 ರನ್ ಗಳಿಸಿದರು.
ಇದರೊಂದಿಗೆ ಉತ್ತಮ ರನ್ ಕಲೆಹಾಕಿದ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 27 ರನ್ ಗಳಿಂದ ಸೋಲಿಸಿತು. ಈ ಮೂಲಕ ಈ ಸೀಸನ್ ನಲ್ಲಿ ಹ್ಯಾಟ್ರಿಕ್ ಜಯ ಸಂಪಾದಿಸಿತು. ಜೊತೆಗ ಆಡಿರುವ 3 ಪಂದ್ಯಗಳಿಂದ 6 ಅಂಕ ಕಲೆಹಾಕಿ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.
Advertisement