IPL 2026: ತವರು ನೆಲದಲ್ಲಿ ಕೆಕೆಆರ್ ವಿರುದ್ಧ ಗೆದ್ದು ಬೀಗಿದ CSK!

ಆರಂಭಿಕನಾಗಿ ಆಡಿದ ನರೈನ್ ಉತ್ತಮ ಆರಂಭ ಪಡೆದರಾದರೂ, ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.
CSK team
ಚೆನ್ನೈ ಸೂಪರ್ ಕಿಂಗ್ಸ್ ತಂಡonline desk
Updated on

ಐಪಿಎಲ್ 2026 ರ 22ನೇ ಪಂದ್ಯದಲ್ಲಿ ತವರು ನೆಲದಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 32 ರನ್ ಗಳಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ 193 ರನ್ ಗಳ ಟಾರ್ಗೆಟ್ ನೀಡಿತು. ತಂಡಕ್ಕೆ ಗಾಯಕ್ವಾಡ್ ಅವರ ನಿರ್ಗಮನ ಅಘಾತಕಾರಿಯಾದರೂ, ಸಂಜು ಸ್ಯಾಮ್ಸನ್ ಉತ್ತಮ ಮೊತ್ತ ದಾಖಲಿಸಿದರು.

CSK team
IPL 2026: ಅಂಪೈರ್‌ ಜೊತೆಗೆ ವಾಗ್ವಾ; ನಿತೀಶ್ ರಾಣಾಗೆ ದಂಡ; CSK ನಾಯಕ ರುತುರಾಜ್ ಗಾಯಕ್ವಾಡ್‌ಗೂ ಸಂಕಷ್ಟ!

ಆಯುಷ್ ಮ್ಹಾತ್ರೆ (32) ಹಾಗೂ ಡೆವಾಲ್ಡ್ ಬ್ರೆವಿಸ್ (41) ಉತ್ತಮ ಬ್ಯಾಟಿಂಗ್ ಮಾಡಿ ಮಿಂಚಿದರು. 193 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್​ಗಳಿಸಿ ಸೋಲೊಪ್ಪಿಕೊಂಡಿತು. 193 ರನ್​ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡ ಪವರ್​ ಪ್ಲೇ ಮುಗಿಯುವುದರೊಳಗೆ 2 ವಿಕೆಟ್ ಕಳೆದುಕೊಂಡಿತು.

ಆರಂಭಿಕನಾಗಿ ಆಡಿದ ನರೈನ್ ಉತ್ತಮ ಆರಂಭ ಪಡೆದರಾದರೂ, ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. 3ನೇ ವಿಕೆಟ್ ಜೊತೆಯಾಟದಲ್ಲಿ ರಹಾನೆ ಹಾಗೂ ರಘುವಂಶಿ 3ನೇ ವಿಕೆಟ್​ ಜೊತೆಯಾಟದಲ್ಲಿ 50 ರನ್​​ಗಳ ಜೊತೆಯಾಟ ನೀಡಿದರು. ಅಪಾಯಕಾರಿಯಾಗುತ್ತಿದ್ದ ಈ ಜೊತೆಯಾಟವನ್ನು ಅಕೀಲ್ ಹೊಸೇನ್ ಮುರಿದರು.

ಸಿಎಸ್ಕೆ ಪರ ನೂರ್ ಅಹ್ಮದ್ 21ಕ್ಕೆ3 ವಿಕೆಟ್ ಪಡೆದು ಗೇಮ್ ಚೇಂಜರ್ ಆದರೆ, ಅನ್ಶುಲ್ ಕಾಂಬೋಜ್ 32ಕ್ಕೆ 2 ವಿಕೆಟ್ ಪಡೆದರೆ, ಅಕೀಲ್ ಹೊಸೇನ್ 26ಕ್ಕೆ1, ಖಲೀಲ್ ಅಹ್ಮದ್ 24ಕ್ಕೆ1 ವಿಕೆಟ್ ಪಡೆದು ಮಿಂಚಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com