"I Feel Bad For Him" ವಿರಾಟ್ ಕೊಹ್ಲಿ ಬಗ್ಗೆ ಮೌನ ಮುರಿದ ಜರ್ಮನ್ ಮಾಡೆಲ್!

ವಿರಾಟ್ ಕೊಹ್ಲಿ ಲೈಕ್ ಮಾಡಿದ ಬಗ್ಗೆ ಸುದ್ದಿಯಾದ ನಂತರ, ತಮಗೆ ಆಶ್ಚರ್ಯವಾಯಿತು ಮತ್ತು ತದನಂತರ ಪರಿಸ್ಥಿತಿ ಮೇರೆ ಮೀರಿದ್ದು ಕಂಡು ಹುಚ್ಚು ಹಿಡಿದಂತಾಗಿತ್ತು ಎಂದು ತಿಳಿಸಿದ್ದಾರೆ
German Model Breaks Silence On Virat Kohli
ಜರ್ಮನ್ ಮಾಡೆಲ್ , ವಿರಾಟ್ ಕೊಹ್ಲಿ
Updated on

ಜರ್ಮನ್ ಮೂಲದ ಇನ್‌ಫ್ಲುಯೆನ್ಸರ್ ಮತ್ತು ಮಾಡೆಲ್ ಲಿಜ್ಲಾಜ್ (LizLaz),ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಲೈಕ್ ಮಾಡಿದ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ. ಜರ್ಮನ್ ಮಾಡೆಲ್‌ನ ಫೋಟೋ ಲೈಕ್ ಮಾಡಿ, ನಂತರ ಅನ್‌ಲೈಕ್ ಮಾಡಿದ ವಿಷಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆ ನಡೆಯುತ್ತಿದೆ.

ಲಿಜ್ಲಾಜ್ ಹೇಳಿದ್ದೇನು?

ವಿರಾಟ್ ಕೊಹ್ಲಿ ಲೈಕ್ ಮಾಡಿದ ಬಗ್ಗೆ ಸುದ್ದಿಯಾದ ನಂತರ, ತಮಗೆ ಆಶ್ಚರ್ಯವಾಯಿತು ಮತ್ತು ತದನಂತರ ಪರಿಸ್ಥಿತಿ ಮೇರೆ ಮೀರಿದ್ದು ಕಂಡು ಹುಚ್ಚು ಹಿಡಿದಂತಾಗಿತ್ತು ಎಂದು ತಿಳಿಸಿದ್ದಾರೆ. ಕೊಹ್ಲಿ ಬಗ್ಗೆ ಸ್ವಲ್ಪ ಅಮಾಧಾನವಿದೆ ಎಂದು ಅವರು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.

ನನ್ನ ಫೋಟೋಗೆ ಇಷ್ಟಪಟ್ಟಿದ್ದಕ್ಕೆ ಸಂತೋಷವಾಗಿದೆ. ನಂತರ ಅನ್‌ಲೈಕ್ ಮಾಡಿದ್ದಕ್ಕೆ, ತಮಗೆ ನಿರಾಶೆಗಿಂತ ಹೆಚ್ಚಾಗಿ ಅವರ ಬಗ್ಗೆ ಸ್ವಲ್ಪ ಬೇಸರ ಆಯಿತು ಎಂದು ಲಿಜ್ಲಾಜ್ ಹೇಳಿದ್ದಾರೆ. ಇದು ಹೇಗೆ ದೊಡ್ಡ ಸುದ್ದಿಯಾಯಿತು ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ.

ಜನರು ಹೇಗೆ ಅದನ್ನು ಗಮಿಸಿದರು. ಬಹುಶಃ ಅವರ ಉದ್ದೇಶ ಬೇರೆ ಆಗಿದ್ದರೂ ಅದನ್ನು ಯಾಕೆ ದೊಡ್ಡ ಸುದ್ದಿ ಮಾಡಿದ್ರು. ಆದರೂ ಈಗಲೂ ಅದಕ್ಕೆ ಕೃತಜ್ಞಳಾಗಿದ್ದೇನೆ. ಕೊಹ್ಲಿಯಿಂದ ಸಿಕ್ಕ ಬೆಂಬಲದಿಂದ ಪ್ರಭಾವಿತವಾಗಿರುವುದಾಗಿ ಅವರು ತಿಳಿಸಿದ್ದಾರೆ. ತಮಗೆ ಈ ವಿಷಯದ ಬಗ್ಗೆ ತಿಳಿದಿರಲಿಲ್ಲ, ಸುದ್ದಿಯ ಮೂಲಕವೇ ವಿಷಯ ತಿಳಿದುಬಂತು ಮತ್ತು ಅನೇಕರು ತಮಗೆ ಡಿಎಂ (DM) ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ.

German Model Breaks Silence On Virat Kohli
ಇನ್‌ಸ್ಟಾಗ್ರಾಂನಲ್ಲಿ ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೊ 'ಲೈಕ್' ಮಾಡಿದ ವಿರಾಟ್ ಕೊಹ್ಲಿ?; 'ಅಲ್ಗಾರಿದಮ್' ಮೀಮ್ಸ್ ಹಾವಳಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಲಿಜ್ಲಾಜ್ ಬೆಂಬಲ ವ್ಯಕ್ತಪಡಿಸಿರುವ ಹಳೆಯ ವೀಡಿಯೊ ಕೂಡ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷದ ಐಪಿಎಲ್ ಸಮಯದಲ್ಲಿ ಬೆಂಗಳೂರಿನ ಸ್ನೇಹಿತರೊಂದಿಗೆ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾಗ ಫ್ರಾಂಚೈಸಿಯೊಂದಿಗಿನ ತನ್ನ ಸಂಬಂಧ ಪ್ರಾರಂಭವಾಯಿತು ಎಂದು ಅವರು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com