IPL 2026: 'ಚಿನ್ನಸ್ವಾಮಿ ಶತಕ' ಐಪಿಎಲ್ ಇತಿಹಾಸದಲ್ಲೇ ಈ ಐತಿಹಾಸಿಕ ದಾಖಲೆ ಬರೆದ ಏಕೈಕ ತಂಡ RCB

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಿದ್ದ ಆರ್ ಸಿಬಿ 6 ವಿಕೆಟ್ ಅಂತರದಲ್ಲಿ ಸೋಲು ಕಂಡಿತಾದರೂ ಈ ಪಂದ್ಯ ಮಾತ್ರ ಆರ್ ಸಿಬಿಗೆ ಐತಿಹಾಸಿಕ ಸ್ಮರಣೀಯ ಪಂದ್ಯವಾಗಿತ್ತು.
Royal Challengers Bengaluru Attains Historic IPL 'Century'
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ
Updated on

ಬೆಂಗಳೂರು: ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐತಿಹಾಸಿಕ ಅಪರೂಪದ ಸಾಧನೆಗೆ ಪಾತ್ರವಾಗಿದ್ದು, ಈ ಸಾಧನೆ ಮಾಡಿದ ಐಪಿಎಲ್ ನ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ಹೌದು... ಐಪಿಎಲ್ 2026ರ ಟೂರ್ನಿಯ 26ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಿದ್ದ ಆರ್ ಸಿಬಿ 6 ವಿಕೆಟ್ ಅಂತರದಲ್ಲಿ ಸೋಲು ಕಂಡಿತಾದರೂ ಈ ಪಂದ್ಯ ಮಾತ್ರ ಆರ್ ಸಿಬಿಗೆ ಐತಿಹಾಸಿಕ ಸ್ಮರಣೀಯ ಪಂದ್ಯವಾಗಿತ್ತು.

ಇದು ಆರ್ ಸಿಬಿಗೆ ಬೆಂಗಳೂರಿನಲ್ಲಿ ನಡೆದ 100 ಪಂದ್ಯವಾಗಿದ್ದು, ಆ ಮೂಲಕ ಒಂದು ಮೈದಾನದಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಮತ್ತು ಒಂದು ಮೈದಾನದಲ್ಲಿ 100 ಪಂದ್ಯಗಳನ್ನಾಡಿದ ಐಪಿಎಲ್ ನ ಮೊದಲ ತಂಡ ಎಂಬ ಕೀರ್ತಿಗೆ ಆರ್ ಸಿಬಿ ಪಾತ್ರವಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ 100 ಪಂದ್ಯಗಳನ್ನಾಡುವ ಮೂಲಕ ಈ ಸಾಧನೆಗೆ ಪಾತ್ರವಾಗಿದೆ.

ಅಂತೆಯೇ ಕೋಲ್ಕತಾ ನೈಟ್ ರೈಡರ್ಸ್ ತಂಡ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಈಡೆನ್ ಗಾರ್ಡನ್ ಮೈದಾನದಲ್ಲಿ ಕೆಕೆಆರ್ ಈವರೆಗೂ 98 ಪಂದ್ಯಗಳನ್ನಾಡಿದೆ.

Royal Challengers Bengaluru Attains Historic IPL 'Century'
IPL 2026, RCB vs DC: ಭುವಿ, ಪಾಂಡ್ಯ ಶ್ರಮ ವ್ಯರ್ಥ; ಡೆಲ್ಲಿ ಕ್ಯಾಪಿಟಲ್ಸ್ ಗೆ 6 ವಿಕೆಟ್ ಭರ್ಜರಿ ಜಯ

ಸ್ಮರಣೀಯ ಪಂದ್ಯದಲ್ಲೇ ಸೋಲು

ಇನ್ನು ಆರ್ ಸಿಬಿ ಈ ಸ್ಮರಣೀಯ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗಧಿತ 20 ಓವರ್ ಗಳಲ್ಲಿ 175 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.5 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸುವ ಮೂಲಕ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com