IPL 2026: 1000 ರನ್ ಮೈಲಿಗಲ್ಲು, ವಿಶೇಷ ಸಾಧನೆ ಮಾಡಿದ RCB ಆಟಗಾರ ಟಿಮ್ ಡೇವಿಡ್!

ಈ ಬಾರಿಯ ಐಪಿಎಲ್ ನಲ್ಲಿ ಆರು ಪಂದ್ಯಗಳು ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 86.50 ಸರಾಸರಿಯಲ್ಲಿ ಮತ್ತು 203.52 ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧಶತಕವೂ ಸೇರಿದೆ, ಅವರ ಗರಿಷ್ಠ ಸ್ಕೋರ್ 70 ರನ್ ಆಗಿದೆ.
Tim David
ಟಿಮ್ ಡೇವಿಡ್
Updated on

ಬೆಂಗಳೂರು: ಆರ್ ಸಿಬಿ ಸ್ಪೋಟಕ ಬ್ಯಾಟ್ಸ್ ಮನ್ ಟಿಮ್ ಡೇವಿಡ್ ಐಪಿಎಲ್ ನಲ್ಲಿ 1000 ರನ್ ಮೈಲಿಗಲ್ಲು ಸಾಧಿಸಿದ್ದಾರೆ. ಅಲ್ಲದೇ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಐಪಿಎಲ್ ಪಂದ್ಯದ ವೇಳೆ ಡೇವಿಡ್ ಈ ಮೈಲಿಗಲ್ಲು ಸಾಧಿಸಿದರು. ಪಂದ್ಯದ ವೇಳೆ, ಡೇವಿಡ್ 17 ಎಸೆತಗಳಲ್ಲಿ 26 ರನ್ ಗಳಿಸಿದರು, ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು ಬಳಿಕ ಅಕ್ಷರ್ ಪಟೇಲ್ ಅವರಿಂದ ಔಟಾದರು.

ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 56 ಪಂದ್ಯಗಳು ಮತ್ತು 50 ಇನ್ನಿಂಗ್ಸ್‌ಗಳಲ್ಲಿ, ಡೇವಿಡ್ 36.39 ಸರಾಸರಿ ಮತ್ತು 177.83 ಸ್ಟ್ರೈಕ್ ರೇಟ್‌ನಲ್ಲಿ 1,019 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಅವರ ಅತ್ಯಧಿಕ ಸ್ಕೋರ್ 70 ಆಗಿದೆ.

Tim David
IPL 2026: 'ಚಿನ್ನಸ್ವಾಮಿ ಶತಕ' ಐಪಿಎಲ್ ಇತಿಹಾಸದಲ್ಲೇ ಈ ಐತಿಹಾಸಿಕ ದಾಖಲೆ ಬರೆದ ಏಕೈಕ ತಂಡ RCB

ಈ ಬಾರಿಯ ಐಪಿಎಲ್ ನಲ್ಲಿ ಆರು ಪಂದ್ಯಗಳು ಮತ್ತು ಆರು ಇನ್ನಿಂಗ್ಸ್‌ಗಳಲ್ಲಿ 86.50 ಸರಾಸರಿಯಲ್ಲಿ ಮತ್ತು 203.52 ಸ್ಟ್ರೈಕ್ ರೇಟ್‌ನಲ್ಲಿ 173 ರನ್ ಗಳಿಸಿದ್ದಾರೆ, ಇದರಲ್ಲಿ ಅರ್ಧಶತಕವೂ ಸೇರಿದೆ, ಅವರ ಗರಿಷ್ಠ ಸ್ಕೋರ್ 70 ರನ್ ಆಗಿದೆ.

560 ಎಸೆತಗಳಲ್ಲಿ 1,000 ರನ್ ಮೈಲಿಗಲ್ಲು ತಲುಪುವುದರೊಂದಿಗೆ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಖ್ಯಾತಿ ಪಡೆದಿದ್ದಾರೆ. ಆಂಡ್ರೆ ರಸೆಲ್ ಈ ದಾಖಲೆಯನ್ನು ಹೊಂದಿದ್ದಾರೆ. ಅವರು 545 ಬಾಲ್ ಗಳಲ್ಲಿ ಈ ಗುರಿ ಸಾಧಿಸಿದ್ದರು. ಡೇವಿಡ್ ಅವರ ವೃತ್ತಿಜೀವನದ ಸ್ಟ್ರೈಕ್-ರೇಟ್ 177.83 ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com