LSG vs RR ಪಂದ್ಯದ ವೇಳೆ 'ಆಕ್ರಮಣಕಾರಿ ಸಂಭ್ರಮಾಚರಣೆ': ರಾಜಸ್ಥಾನ್ ರಾಯಲ್ಸ್ ವೇಗಿ ನಾಂಡ್ರೆ ಬರ್ಗರ್‌ಗೆ ಶಿಕ್ಷೆ!

ಎಲ್‌ಎಸ್‌ಜಿ vs ಆರ್‌ಆರ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ಅಮೂಲ್ಯ ವಿಕೆಟ್ ಪಡೆದ ಬರ್ಗರ್ ಅತಿಯಾಗಿ ಆಚರಿಸಿದಂತೆ ತೋರುತ್ತಿತ್ತು.
Nandre Burger
ನಾಂಡ್ರೆ ಬರ್ಗರ್‌
Updated on

ಬುಧವಾರ ರಾತ್ರಿ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡವು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ ಅದ್ಭುತ ಜಯ ಸಾಧಿಸಿತು. ರವೀಂದ್ರ ಜಡೇಜಾ ತಮ್ಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ವಿದೇಶಿ ವೇಗಿಗಳಾದ ನಾಂಡ್ರೆ ಬರ್ಗರ್ ಮತ್ತು ಜೋಫ್ರಾ ಆರ್ಚರ್ ಎಲ್‌ಎಸ್‌ಜಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಆದಾಗ್ಯೂ, ಪವರ್‌ಪ್ಲೇನಲ್ಲಿ 1/15 ಪಡೆದ ಎಡಗೈ ಸೀಮರ್‌ ಅನಗತ್ಯವಾಗಿ ಸುದ್ದಿಯಾಗಿದ್ದು, ಶಿಕ್ಷೆಗೆ ಗುರಿಯಾಗಿದ್ದಾರೆ.

ಎಲ್‌ಎಸ್‌ಜಿ vs ಆರ್‌ಆರ್ ಪಂದ್ಯದಲ್ಲಿ ರಿಷಭ್ ಪಂತ್ ಅವರ ಅಮೂಲ್ಯ ವಿಕೆಟ್ ಪಡೆದ ಬರ್ಗರ್ ಅತಿಯಾಗಿ ಆಚರಿಸಿದಂತೆ ತೋರುತ್ತಿತ್ತು. ಹೀಗೆ ಮಾಡಿದ್ದದರಿಂದ, ಅವರ ಪಂದ್ಯ ಶುಲ್ಕದ ಶೇ 10 ರಷ್ಟು ದಂಡ ವಿಧಿಸಲಾಗಿದೆ. ಈಮಧ್ಯೆ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

ಎದುರಾಳಿ ಆಟಗಾರನಿಂದ ಕೋಪ ಅಥವಾ ಆಕ್ರಮಣಕಾರಿ ಪ್ರತಿಕ್ರಿಯೆಯನ್ನು ಉಂಟುಮಾಡುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದ ಲೆವೆಲ್ 1 ಅಪರಾಧವನ್ನು ಬರ್ಗರ್ ಒಪ್ಪಿಕೊಂಡಿದ್ದಾರೆ. ಪಂದ್ಯದ ನಂತರ ದಕ್ಷಿಣ ಆಫ್ರಿಕಾದ ವೇಗಿಗೆ ಶಿಕ್ಷೆ ನೀಡಲಾಗಿದೆ.

Nandre Burger
IPL 2026: RRಗೆ ಸುಲಭದ ತುತ್ತಾದ LSG, ರಿಷಬ್ ಪಂತ್ ಪಡೆಗೆ ಸತತ 4ನೇ ಸೋಲು

'ಪಂದ್ಯದ ವೇಳೆ ಇನ್ನೊಬ್ಬ ಆಟಗಾರನನ್ನು ಪ್ರಚೋದಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ - ಆರ್ಟಿಕಲ್ 2.5ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ನಾಂಡ್ರೆ ಬರ್ಗರ್ ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯದ ರೆಫರಿಯ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘನೆಗಾಗಿ, ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ' ಎಂದು ಐಪಿಎಲ್‌ನ ಮಾಧ್ಯಮ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com