T20 World Cup 2026: ಪ್ಯಾಟ್ ಕಮ್ಮಿನ್ಸ್ ಔಟ್; ಬದಲಿ ಆಟಗಾರನನ್ನು ಹೆಸರಿಸಿದ ಆಸ್ಟ್ರೇಲಿಯಾ!

2026ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಐರ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ ಮತ್ತು ಓಮನ್ ತಂಡಗಳೊಂದಿಗೆ ಆಡಲಿದೆ.
Pat Cummins ruled out of T20 WC 2026, Australia finalise 15-member squad
ಪ್ಯಾಟ್ ಕಮ್ಮಿನ್ಸ್
Updated on

ಫೆಬ್ರುವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಟಿ20 ವಿಶ್ವಕಪ್ 2026 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಗಾಯದ ಕಾರಣದಿಂದಾಗಿ ಪ್ಯಾಟ್ ಕಮ್ಮಿನ್ಸ್ ಹೊರಗುಳಿದಿದ್ದು, ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಸ್ಟಾರ್ ಆಲ್ ರೌಂಡರ್ ತಮ್ಮ ದೀರ್ಘಕಾಲದ ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆಸ್ಟ್ರೇಲಿಯಾ ಟೂರ್ನಮೆಂಟ್‌ಗಾಗಿ 15 ಸದಸ್ಯರ ತಂಡವನ್ನು ಅಂತಿಮಗೊಳಿಸಿದ್ದು, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಮ್ಯಾಥ್ಯೂ ಶಾರ್ಟ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಎಡಗೈ ವೇಗಿ ಬೆನ್ ದ್ವಾರಶುಯಿಸ್ ಮತ್ತು ಬ್ಯಾಟ್ಸ್‌ಮನ್ ಮ್ಯಾಥ್ಯೂ ರೆನ್‌ಶಾ ಅವರನ್ನು ಬದಲಿಯಾಗಿ ಹೆಸರಿಸಿದೆ.

ಪ್ಯಾಟ್ ಕಮ್ಮಿನ್ಸ್ ಬೆನ್ನುನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಅವರ ಬದಲಿಯಾಗಿ ಬೆನ್ ದ್ವಾರಶುಯಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ಬೆನ್ ಎಡಗೈ ಬೌಲರ್, ಬಲಿಷ್ಠ ಫೀಲ್ಡರ್ ಮತ್ತು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕೊಡುಗೆ ನೀಡಬಲ್ಲರು ಎಂದು ಆಯ್ಕೆದಾರ ಟೋನಿ ಡೋಡೆಮೈಡ್ ಹೇಳಿದ್ದಾರೆ.

'ಚೆಂಡನ್ನು ವೇಗವಾಗಿ ಸ್ವಿಂಗ್ ಮಾಡುವ ಆಟಗಾರನ ಕೌಶಲ್ಯ, ಬೌಲಿಂಗ್‌ನಲ್ಲಿನ ಬುದ್ಧಿವಂತ ವೇರಿಯೇಷನ್ಸ್‌ಗಳು ನಾವು ನಿರೀಕ್ಷಿಸುವ ಪಿಚ್ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೆಯಾಗುತ್ತದೆ ಮತ್ತು ತಂಡದ ಒಟ್ಟಾರೆ ತಂತ್ರ ಮತ್ತು ಸಮತೋಲನಕ್ಕೆ ಸೂಕ್ತವಾಗಿರುತ್ತದೆ ಎಂದು ನಾವು ನಂಬುತ್ತೇವೆ' ಎಂದರು.

'ಮ್ಯಾಥ್ಯೂ ರೆನ್‌ಶಾ ಇತ್ತೀಚೆಗೆ ಎಲ್ಲ ಸ್ವರೂಪಗಳಲ್ಲಿ ಪ್ರಭಾವ ಬೀರಿದ್ದಾರೆ. ಆಸ್ಟ್ರೇಲಿಯಾ, ಕ್ವೀನ್ಸ್‌ಲ್ಯಾಂಡ್ ಬುಲ್ಸ್ ಮತ್ತು ಬ್ರಿಸ್ಬೇನ್ ಹೀಟ್‌ಗಾಗಿ ವೈಟ್ ಬಾಲ್ ಸ್ವರೂಪಗಳಲ್ಲಿ ಬಹು ಪಾತ್ರಗಳನ್ನು ನಿಭಾಯಿಸಿದ್ದಾರೆ.

Pat Cummins ruled out of T20 WC 2026, Australia finalise 15-member squad
ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಹೊಸ ನಾಯಕಿ ಘೋಷಣೆ; RCB ಮಾಜಿ ಆಟಗಾರ್ತಿ ಆಯ್ಕೆ!

'ಟಾಪ್-ಆರ್ಡರ್ ಬ್ಯಾಟ್ಸ್‌ಮನ್‌ಗಳು ಈಗಾಗಲೇ ಸ್ಥಿರವಾಗಿರುವುದರಿಂದ ಮತ್ತು ಶ್ರೀಲಂಕಾದಲ್ಲಿ ಆರಂಭಿಕ ಪಂದ್ಯಗಳು ಸ್ಪಿನ್ ಬೌಲರ್‌ಗಳಿಗೆ ಅನುಕೂಲಕರವಾಗುವ ನಿರೀಕ್ಷೆಯಿರುವುದರಿಂದ, ಮ್ಯಾಟ್ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ನೆರವಾಗುತ್ತಾರೆ. ಟಿಮ್ ಡೇವಿಡ್ ತಮ್ಮ ಫಿಟ್ನೆಸ್/ಪ್ಲೇ-ಟು-ರಿಟರ್ನ್ ಪ್ರೋಗ್ರಾಂ ಅನ್ನು ಪೂರ್ಣಗೊಳಿಸಿದ ನಂತರವೇ ಲಭ್ಯವಿರುತ್ತಾರೆ. ಹೀಗಾಗಿ, ಟಿಮ್ ಡೇವಿಡ್ ಲಭ್ಯವಿಲ್ಲದಿರುವಾಗ ಮ್ಯಾಟ್ ಮಧ್ಯಮ ಕ್ರಮಾಂಕಕ್ಕೆ ಉತ್ತಮ ಬಲ ನೀಡುತ್ತಾರೆ' ಎಂದರು.

2026ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಐರ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ ಮತ್ತು ಓಮನ್ ತಂಡಗಳೊಂದಿಗೆ ಆಡಲಿದೆ. ಫೆಬ್ರುವರಿ 11 ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.

2026ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ಬೆನ್ ದ್ವಾರ್ಶುಯಿಸ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್, ಜಾಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ರೆನ್‌ಶಾ, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com