ಐರ್ಲೆಂಡ್, ಇಂಗ್ಲೆಂಡ್ T20 ಸರಣಿ: ವೈಭವ್ ಸೂರ್ಯವಂಶಿ ಬಗ್ಗೆ BCCI ವಿಶೇಷ ನಿರ್ಧಾರ! ಏನಿದು?

ಕುಟುಂಬದವರು ಜೊತೆಯಲ್ಲಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಹೊಂದಿಕೊಳ್ಳಲು ವೈಭವ್ ಸೂರ್ಯವಂಶಿಗೆ ನೆರವಾಗುತ್ತದೆ ಎಂದು ಬಿಸಿಸಿಐ ಭಾವಿಸಿದೆ ಎಂದು ವರದಿ ಹೇಳಿದೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ನವದೆಹಲಿ: ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ವೈಭವ್ ಸೂರ್ಯವಂಶಿ ಅವರ ಪೋಷಕರು 15 ವರ್ಷದ ಬಾಲಕನೊಂದಿಗೆ ಪ್ರಯಾಣಿಸಲು ಬಿಸಿಸಿಐ ಅನುಮತಿ ನೀಡಿದೆ ಎಂದು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ.

ಐಪಿಎಲ್ 2026 ರಲ್ಲಿ 776 ರನ್‌ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ ನಂತರ ಸೂರ್ಯವಂಶಿ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕುಟುಂಬದವರು ಜೊತೆಯಲ್ಲಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಹೊಂದಿಕೊಳ್ಳಲು ವೈಭವ್ ಸೂರ್ಯವಂಶಿಗೆ ನೆರವಾಗುತ್ತದೆ ಎಂದು ಬಿಸಿಸಿಐ ಭಾವಿಸಿದೆ ಎಂದು ವರದಿ ಹೇಳಿದೆ.

ಇನ್ನೂ 15 ವರ್ಷದ ಬಾಲಕನಾಗಿರುವುದರಿಂದ ಆತನ ಪೋಷಕರನ್ನು ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಕಳುಹಿಸಲು ನಿರ್ಧರಿಸಿದ್ದೇವೆ. ಇದರಿಂದ ಆತ ಹೊಸ ವಾತಾವರಣಕ್ಕೆ ಹೊಂದುಕೊಳ್ಳಲು ನೆರವಾಗಬಹುದು. ಅವರ ಎಲ್ಲಾ ವೆಚ್ಚಗಳನ್ನು ಮಂಡಳಿಯೇ ಭರಿಸುತ್ತದೆ" ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸ್ಪೋರ್ಟ್‌ಸ್ಟಾರ್‌ಗೆ ತಿಳಿಸಿದ್ದಾರೆ.

Vaibhav Sooryavanshi
T20 Cricket: ಸೂರ್ಯಗೆ ಗೇಟ್ ಪಾಸ್, Shreyas Iyer ನೂತನ ನಾಯಕ, ಕೊನೆಗೂ Vaibhav Sooryavanshi ಪದಾರ್ಪಣೆ, ಕೊಹ್ಲಿ ಬದಲಿಗೆ ಯಾರು?

ಮುಂಬರುವ ತ್ರಿಕೋನ ಸರಣಿಗಾಗಿ ವೈಭವ್ ಸೂರ್ಯ ವಂಶಿ ಪ್ರಸ್ತುತ ಭಾರತ ಎ ತಂಡದೊಂದಿಗೆ ಶ್ರೀಲಂಕಾದಲ್ಲಿದ್ದಾರೆ.

ಇದಕ್ಕೂ ಮುನ್ನಾ ಮಾತನಾಡಿದ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್, ವೈಭವ್ ಸೂರ್ಯವಂಶಿ ಮೇಲೆ ಹೆಚ್ಚಿನ ಭರವಸೆ ಇದೆ. ಐಪಿಎಲ್ 2026 ರ ಸ್ಫೋಟಕ ಪ್ರದರ್ಶನದೊಂದಿಗೆ ತಂಡಕ್ಕೆ 'ತನ್ನನ್ನು ತಾನು ಆಯ್ಕೆ ಮಾಡಿಕೊಂಡಿದ್ದೇನೆ' ಎಂದು ಹೇಳಿದರು.

Vaibhav Sooryavanshi
0,0,W,0,W,W: ಲಾರ್ಡ್ಸ್‌ನಲ್ಲಿ ಅಬ್ಬರಿಸಿದ ಓಲಿ ರಾಬಿನ್ಸನ್​; ವೈಭವ್ ಸೂರ್ಯವಂಶಿ ವಿಷಯ ಚರ್ಚೆ, ಯಾಕೆ ಗೊತ್ತಾ?

ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಶತಕ ಮತ್ತು ಐದು ಅರ್ಧಶತಕಗಳು ಸೇರಿದಂತೆ 776 ರನ್‌ಗಳೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com