ವಿರಾಟ್ ಕೊಹ್ಲಿ IPL ನಲ್ಲಿ ಇನ್ನೂ ಎಷ್ಟು ವರ್ಷ ಆಡಲಿದ್ದಾರೆ? ನಿವೃತ್ತಿ ಯಾವಾಗ? ಬಿಗ್ ಅಪ್ ಡೇಟ್ ಕೊಟ್ಟ RCB ಸಿಇಒ!

ಇನ್ನೂ ಹೆಚ್ಚಿನ ಆವೃತ್ತಿಗಳಲ್ಲಿ ಆಡಲು ಅನುಭವಿ ಬ್ಯಾಟ್ಸ್‌ಮನ್ ದೈಹಿಕವಾಗಿ ಸಿದ್ಧರಾಗಿದ್ದಾರೆ ಎಂದು ಆರ್ ಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀಶ್ ಮೆನನ್ CNBC TV18 ಹೇಳಿದ್ದಾರೆ.
Virat Kohli
ವಿರಾಟ್ ಕೊಹ್ಲಿ
Updated on

ಐಪಿಎಲ್ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಮುಂದಿನ ಭವಿಷ್ಯ ಮತ್ತು ನಿವೃತ್ತಿ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್‌ಮೆಂಟ್ ಬಿಗ್ ಅಪ್ ಡೇಟ್ ನೀಡಿದೆ. ಸತತವಾಗಿ ಎರಡು ಟ್ರೋಫಿಗಳನ್ನು ಮುಡಿಗೇರಿಸಿಕೊಂಡ ಬಳಿಕ ಐಕಾನಿಕ್ ಟಾಪ್ ಆರ್ಡರ್ ಬ್ಯಾಟ್ಸ್ ಮನ್ ವೃತ್ತಿ ಜೀವನವನ್ನು ಮೊಟಕುಗೊಳಿಸುವ ಯಾವುದೇ ಸುಳಿವನ್ನು ಅಧಿಕಾರಿಗಳು ನೀಡಿಲ್ಲ.

ಇನ್ನೂ ಹೆಚ್ಚಿನ ಆವೃತ್ತಿಗಳಲ್ಲಿ ಆಡಲು ಅನುಭವಿ ಬ್ಯಾಟ್ಸ್‌ಮನ್ ದೈಹಿಕವಾಗಿ ಸಿದ್ಧರಾಗಿದ್ದಾರೆ ಎಂದು ಆರ್ ಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀಶ್ ಮೆನನ್ CNBC TV18 ಹೇಳಿದ್ದಾರೆ. ಆ ಮೂಲಕ ತಂಡದ ಪ್ರಮುಖ ಆಟಗಾರನಾಗಿರುವ ವಿರಾಟ್ ಕೊಹ್ಲಿಯ ನಿವೃತ್ತಿ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು ತಂಡದೊಂದಿಗೆ ಅವರ ಸಂಬಂಧ ಆಟವನ್ನೂ ಮೀರಿ ಬೆಳೆದಿದೆ. ತಂಡ ಕಟ್ಟುವಲ್ಲಿ ಅವರನ್ನು ಉಳಿಸಿಕೊಳ್ಳುವಲ್ಲಿ ಮ್ಯಾನೇಜ್ ಮೆಂಟ್ ಸಂಪೂರ್ಣವಾಗಿ ಬದ್ಧವಾಗಿದೆ ಎಂದರು.

Virat Kohli
Cricket: ಇಂಗ್ಲೆಂಡ್ ಪ್ರವಾಸಕ್ಕೆ ಏಕದಿನ ತಂಡ ಪ್ರಕಟ; ಕೊಹ್ಲಿ, ಬುಮ್ರಾ ವಾಪಸ್; ಬ್ರಾರ್ ಗೂ ಅವಕಾಶ

ಆರ್‌ಸಿಬಿ ಮತ್ತು ವಿರಾಟ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮೆನನ್ ಹೇಳಿದರು. ಕೊಹ್ಲಿ ಆರ್‌ಸಿಬಿಗೆ ನಿರಂತರ ಅಂಶವಾಗಿದ್ದಾರೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದಿಂದ ಹೊರಬಂದರೂ ಸಹ, ಆರ್ ಸಿಬಿಯ ಭಾಗವಾಗಿಯೇ ಅವರನ್ನು ನೋಡುತ್ತೇವೆ ಎಂದು ಅವರು ತಿಳಿಸಿದರು.

ಕೊಹ್ಲಿ ದೈಹಿಕವಾಗಿ ಸಮರ್ಥವಾಗಿದ್ದು, ಇನ್ನೂ ಮುಂದಿನ ಮೂರು ನಾಲ್ಕು ವರ್ಷ ಆಡಲಿದ್ದಾರೆ. ನಾಲ್ಕು ವರ್ಷ ಆಡಲಿದ್ದಾರೆ ಎಂದು ಖಚಿತವಾಗಿ ಹೇಳುತ್ತೇನೆ. ಈ ಬಾರಿಯ ಐಪಿಎಲ್ ನಲ್ಲಿ ಅವರ ಎನರ್ಜಿ, ರನ್, ವರ್ತನೆ ನೋಡಿದ್ರೆ ಎಲ್ಲವೂ ಗೊತ್ತಾಗುತ್ತದೆ. ಮೂರು ನಾಲ್ಕು ವರ್ಷ ಯಾವುದೇ ತೊಂದರೆ ಇಲ್ಲ. ಆರ್ ಸಿಬಿ ತಂಡದಲ್ಲಿಯೇ ಅವರು ಆಡಲಿದ್ದಾರೆ ಎಂದು ಮೆನನ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com