'ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಪತ್ರಕರ್ತರು ಹಣದ ಆಫರ್ ನೀಡಿದ್ದರು': ಸ್ಫೋಟಕ ಹೇಳಿಕೆ ನೀಡಿದ ಜರ್ಮನ್ ಮಾಡೆಲ್!

ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದು, 'ಹಣ ಅಥವಾ ಪ್ರಚಾರಕ್ಕಾಗಿ' ಅವರ ಖ್ಯಾತಿಗೆ ಹಾನಿಯುಂಟು ಮಾಡುವ ಯಾವುದೇ ಆಸಕ್ತಿ ಅಥವಾ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.
LizLaz - Virat Kohli
ಲಿಜ್‌ಲಾಜ್ - ವಿರಾಟ್ ಕೊಹ್ಲಿ
Updated on

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಲೈಕ್ ವಿವಾದದ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿರುದ್ಧ ನಕಾರಾತ್ಮಕವಾಗಿ ಮಾತನಾಡಲು ಪತ್ರಕರ್ತರು ತನಗೆ ಹಣದ ಆಫರ್ ನೀಡಿದ್ದರು ಎಂದು ಜರ್ಮನ್ ಮಾಡೆಲ್ ಲಿಜ್‌ಲಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ಅವರ ಇನ್‌ಸ್ಟಾಗ್ರಾಂ ಖಾತೆಯು ಮಾಡೆಲ್ ಪೋಸ್ಟ್‌‌ವೊಂದನ್ನು ಲೈಕ್ ಮಾಡಿದ ನಂತರ ಈ ವಿಚಾರ ಸಾಕಷ್ಟು ಗಮನ ಸೆಳೆಯಿತು. ಈ ಘಟನೆ ಆನ್‌ಲೈನ್‌ನಲ್ಲಿ ಭಾರಿ ಚರ್ಚೆಯ ವಿಷಯವಾಯಿತು. ಫಿಲ್ಮಿಮಂತ್ರ ಮೀಡಿಯಾಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಲಿಜ್‌ಲಾಜ್, ಕೊಹ್ಲಿ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಮನವೊಲಿಸಲು ಕೆಲವು ಮಾಧ್ಯಮಗಳು ತಮ್ಮನ್ನು ಸಂಪರ್ಕಿಸಿವೆ ಮತ್ತು ಹಾಗೆ ಮಾಡಲು ಹಣವನ್ನು ಸಹ ನೀಡಲು ಮುಂದಾಗಿದ್ದವು ಎಂದು ಬಹಿರಂಗಪಡಿಸಿದ್ದಾರೆ.

'ಕೆಲವು ಪತ್ರಕರ್ತರು ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಮತ್ತು ಅವರು ಎಂದಿಗೂ ಮಾಡದ ವಿಷಯಗಳ ಬಗ್ಗೆ ಆರೋಪ ಮಾಡಲು ನನಗೆ ಹಣದ ಆಫರ್ ಕೂಡ ನೀಡಿದರು. ಆದರೆ, ನಾನು ಯಾಕೆ ಹಾಗೆ ಮಾಡಲಿ?' ಎಂದು ಲಿಜ್‌ಲಾಜ್ ಸಂದರ್ಶನದಲ್ಲಿ ಹೇಳಿದರು.

ಜರ್ಮನ್ ಇನ್‌ಫ್ಲುಯನ್ಸರ್ ಮತ್ತು ಗಾಯಕಿಯಾಗಿರುವ ಲಿಜ್‌ಲಾಜ್, ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದು, 'ಹಣ ಅಥವಾ ಪ್ರಚಾರಕ್ಕಾಗಿ' ಅವರ ಖ್ಯಾತಿಗೆ ಹಾನಿಯುಂಟು ಮಾಡುವ ಯಾವುದೇ ಆಸಕ್ತಿ ಅಥವಾ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.

LizLaz - Virat Kohli
ಜರ್ಮನ್ ಮಾಡೆಲ್ ಫೋಟೋಗೆ ಲೈಕ್; ವಿವಾದದ ನಂತರ ಪ್ರತಿಕ್ರಿಯೆ ನೀಡಿದ ವಿರಾಟ್ ಕೊಹ್ಲಿ ಮಾಜಿ ಪ್ರೇಯಸಿ!

ಲಿಜ್‌ಲಾಜ್ ಯಾರು?

ಲಿಜ್‌ಲಾಜ್ ದಕ್ಷಿಣ ಆಫ್ರಿಕಾದಲ್ಲಿ ಜನಿಸಿದರು. ಅವರ ತಾಯಿ ಜರ್ಮನಿಯವರು ಮತ್ತು ತಂದೆ ದಕ್ಷಿಣ ಆಫ್ರಿಕಾದವರು. ಜರ್ಮನ್ ಮತ್ತು ಆಫ್ರಿಕನ್ಸ್ ಭಾಷೆಗಳನ್ನು ಹೊರತುಪಡಿಸಿ, ಲಿಜ್‌ಲಾಜ್ ಅವರು ಡಚ್, ಫ್ರೆಂಚ್, ರಷ್ಯನ್ ಮತ್ತು ಸ್ವಲ್ಪ ಸ್ಪ್ಯಾನಿಷ್ ಭಾಷೆಗಳಲ್ಲಿಯೂ ನಿರರ್ಗಳವಾಗಿ ಮಾತನಾಡುತ್ತಾರೆ. ಅವರು ಮನೋವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ ಮತ್ತು ಪ್ರಮಾಣೀಕೃತ ಜೀವರಕ್ಷಕ ಈಜುಗಾರರೂ ಆಗಿದ್ದಾರೆ. ಫುಡ್ ವ್ಲಾಗಿಂಗ್, ಪ್ರಯಾಣ ಮತ್ತು ಗೀತೆ ರಚನೆ ಅವರ ಇತರ ಹವ್ಯಾಸಗಳಾಗಿವೆ.

ಲಿಜ್‌ಲಾಜ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಭಿಮಾನಿ ಎಂದು ತಿಳಿದುಬಂದಿದೆ. ವಿರಾಟ್ ಕೊಹ್ಲಿ ಕೂಡ ಅದೇ ಫ್ರಾಂಚೈಸಿಯಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಆಗಿದ್ದಾರೆ.

'ನಾನು ತುಂಬಾ ಚಿಕ್ಕವಳಿದ್ದಾಗ, ನಾವು ಕೇಪ್ ಟೌನ್ ಬಳಿಯ ಬೀಚ್‌ನಲ್ಲಿ ವಾಸಿಸುತ್ತಿದ್ದೆವು. ಸ್ಥಳೀಯ ತಂಡವನ್ನು ಬೆಂಬಲಿಸುವುದು ನನಗೆ ತುಂಬಾ ಇಷ್ಟ. ಬೆಂಗಳೂರು ನನಗೆ ಭಾರತದಲ್ಲಿ ಅತ್ಯಂತ ಮನೆಯ ಫೀಲ್ ನೀಡುವ ಸ್ಥಳವೆಂದು ಅನಿಸುತ್ತದೆ' ಎಂದು ಲಿಜ್‌ಲಾಜ್ ಕಳೆದ ವರ್ಷ ಫಿಲ್ಮಿಮಂತ್ರಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಭಾರತಕ್ಕೆ ಬಂದ ನಂತರವೇ ಈ ಕ್ರೀಡೆಗೆ ಪರಿಚಯವಾದರೂ, ಕೊಹ್ಲಿ ನನ್ನ 'ನೆಚ್ಚಿನ ಕ್ರಿಕೆಟಿಗ' ಎಂದು ಕರೆದರು.

LizLaz - Virat Kohli
ಇನ್‌ಸ್ಟಾಗ್ರಾಂನಲ್ಲಿ ಜರ್ಮನ್ ಮಾಡೆಲ್ ಫೋಟೊ 'ಲೈಕ್' ಮಾಡಿದ ವಿರಾಟ್ ಕೊಹ್ಲಿ?; 'ಅಲ್ಗಾರಿದಮ್' ಮೀಮ್ಸ್ ಹಾವಳಿ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com