ನಾಯಕತ್ವ ತ್ಯಜಿಸಿದ ಬಳಿಕ ಸಂಕಷ್ಟದಲ್ಲಿದ್ದೆ.. ನೆರವಿಗೆ ಬಂದಿದ್ದು 'ಜಾಮಿ' ಮಾತ್ರ: Virat Kohli

2022ರಲ್ಲಿ ನಾಯಕತ್ವದಿಂದ ಹಿಂದೆ ಸರಿದ ನಂತರ, ಕೊಹ್ಲಿ ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ 265 ರನ್ ಮಾತ್ರ ಗಳಿಸಿದ್ದರು. ಅವರ ಸರಾಸರಿ 26.5 ಆಗಿದ್ದು, ಕೇವಲ ಒಂದು ಅರ್ಧಶತಕ ಮಾತ್ರ ಬಂದಿತ್ತು.
Virat Kohli-Rahul Dravid
ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್
Updated on

ನವದೆಹಲಿ: ಭಾರತೀಯ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎಂದೇ ಹೇಳಲಾಗುವ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡ ತಮ್ಮ ವೃತ್ತಿ ಜೀವನದಲ್ಲಿ ತಾನೂ ಕೂಡ ಸಂಕಷ್ಟದಲ್ಲಿದ್ದೆ ಎಂದು ಹೇಳಿಕೊಂಡಿದ್ದಾರೆ.

RCB ಇನ್ನೋವೇಷನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ ಸಮಿಟ್ ನ ಮೂರನೇ ಆವೃತ್ತಿಯಲ್ಲಿ ಪಾಲ್ಗೊಂಡು ಮಾತನಾಡಿದ ವಿರಾಟ್ ಕೊಹ್ಲಿ, 'ಭಾರತ ತಂಡದ ನಾಯಕತ್ವ ತೊರೆದ ನಂತರ ತುಂಬಾ ಕಠಿಣ ಮತ್ತು ಮಾನಸಿಕ ಒತ್ತಡದ ಹಂತವನ್ನು ಎದುರಿಸಿದ್ದಾಗಿ ಬಹಿರಂಗಪಡಿಸಿದ್ದು, ಆ ಸಮಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿಕ್ರಮ್ ರಾಥೋಡ್ ತಮ್ಮನ್ನು ಅತ್ಯಂತ ಕಾಳಜಿಯಿಂದ ನೋಡಿಕೊಂಡರು' ಎಂದು ಹೇಳಿದ್ದಾರೆ.

2022ರಲ್ಲಿ ನಾಯಕತ್ವದಿಂದ ಹಿಂದೆ ಸರಿದ ನಂತರ, ಕೊಹ್ಲಿ ಕೇವಲ ಆರು ಟೆಸ್ಟ್ ಪಂದ್ಯಗಳಲ್ಲಿ 265 ರನ್ ಮಾತ್ರ ಗಳಿಸಿದ್ದರು. ಅವರ ಸರಾಸರಿ 26.5 ಆಗಿದ್ದು, ಕೇವಲ ಒಂದು ಅರ್ಧಶತಕ ಮಾತ್ರ ಬಂದಿತ್ತು.

2021ರ ನವೆಂಬರ್‌ನಲ್ಲಿ ಭಾರತೀಯ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ರಾಹುಲ್ ದ್ರಾವಿಡ್ (Rahul Dravid) ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ (Vikram Rathour) ಸಂಕಷ್ಟದಲ್ಲಿದ್ದ ಕೊಹ್ಲಿಯ ಆತ್ಮವಿಶ್ವಾಸ ಮತ್ತು ಆಟದ ಹಸಿವನ್ನು ಮತ್ತೆ ಜಾಗೃತಗೊಳಿಸಿದರು ಎಂದು ಹೇಳಿಕೊಂಡಿದ್ದಾರೆ.

Virat Kohli-Rahul Dravid
IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

'ನಾನು ನಾಯಕತ್ವ ತೊರೆದ ನಂತರವೇ ಹೆಚ್ಚು ಮನಸ್ಸು ತೆರೆಯಲು ಆರಂಭಿಸಿದೆ. ರಾಹುಲ್ ದ್ರಾವಿಡ್ ಮತ್ತು ವಿಕ್ರಂ ರಾಥೋಡ್ ಅವರಂತಹವರೊಂದಿಗೆ ಹೆಚ್ಚು ಹಂಚಿಕೊಳ್ಳಲು ಆರಂಭಿಸಿದೆ. ಅವರು ನನ್ನನ್ನು ತುಂಬಾ ಕಾಳಜಿಯಿಂದ ನೋಡಿಕೊಂಡರು. ಅವರಿಗಾಗಿ ಆಡಬೇಕು, ಉತ್ತಮ ಪ್ರದರ್ಶನ ನೀಡಬೇಕು, ಮೈದಾನದಲ್ಲಿ ಹೋರಾಡಬೇಕು ಎನ್ನುವ ಭಾವನೆ ನನಗೆ ಮೂಡಿತು.

ಅವರು ತುಂಬಾ ಪೋಷಕ ಮನೋಭಾವದವರು. ನಾನು ಈಗಾಗಲೇ ಏನು ಸಾಧಿಸಿದ್ದೇನೆ ಎಂಬುದನ್ನು ನನಗೆ ಅವರು ಅರಿವಿಗೆ ತಂದರು. ತಮ್ಮ ಮನಸ್ಸಿನ ಒಳಗಿನ ಹೋರಾಟವನ್ನು ರಾಹುಲ್ ಮತ್ತು ವಿಕ್ರಂ ರಾಥೋಡ್ ಅರ್ಥ ಮಾಡಿಕೊಂಡಿದ್ದರು. 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ನನಗೆ ಅದ್ಭುತ ಕಾಲವಿತ್ತು. ಅವರನ್ನು ಯಾವಾಗ ಭೇಟಿಯಾದರೂ ನಾನು ಹೃದಯಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ.

'ರಾಹುಲ್ ಭಾಯ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದನ್ನು ಅನೇಕ ಮಂದಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ವಿಕ್ರಂ ಹಲವು ವರ್ಷಗಳಿಂದ ತಂಡದೊಂದಿಗೆ ಇದ್ದರು. ಆದ್ದರಿಂದ ನಾನು ಏನು ಅನುಭವಿಸುತ್ತಿದ್ದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡರು. ಅವರು ಮಾನಸಿಕವಾಗಿ ನನ್ನನ್ನು ನೋಡಿಕೊಂಡರು. ಅದರ ಪರಿಣಾಮವಾಗಿ ನಾನು ಮತ್ತೆ ಕ್ರಿಕೆಟ್ ಅನ್ನು ಆನಂದಿಸಲು ಆರಂಭಿಸಿದೆ. ಆದರೆ ಆ ಸಮಯದಲ್ಲಿ ನಾನು ಯಾರಾದರೂ ಬಂದು ನನ್ನನ್ನು ಕೇಳಬೇಕು ಎಂದು ಭಾವಿಸಲಿಲ್ಲ. ಎಲ್ಲವನ್ನೂ ನಾನು ನಾನೇ ನಿರ್ವಹಿಸಬಹುದು ಎಂದುಕೊಂಡಿದ್ದೆ' ಎಂದು ಹೇಳಿದರು.

ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ, ಕೊಹ್ಲಿ 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಎಂಟು ಟೆಸ್ಟ್ ಪಂದ್ಯಗಳಲ್ಲಿ 671 ರನ್ ಗಳಿಸಿ, 56 ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳನ್ನು ದಾಖಲಿಸಿದರು. ನಾಯಕತ್ವದ ಹೊಣೆಗಾರಿಕೆ ತಮಗೆ ಎಷ್ಟು ದೊಡ್ಡ ಮಾನಸಿಕ ಒತ್ತಡ ತಂದಿತ್ತೆಂಬುದು ತಡವಾಗಿ ಅರಿವಾಯಿತು ಎಂದು ಕೊಹ್ಲಿ ಒಪ್ಪಿಕೊಂಡರು.

'ನಾನು ಬ್ಯಾಟಿಂಗ್ ವಿಭಾಗದ ಮತ್ತು ನಾಯಕತ್ವದ ಕೇಂದ್ರಬಿಂದುವಾಗಿ ಬದಲಾಗಿದ್ದೆ. ಭಾರತೀಯ ಕ್ರಿಕೆಟ್ ಅಗ್ರಸ್ಥಾನದಲ್ಲಿರಬೇಕು ಎಂಬ ದೃಢಸಂಕಲ್ಪ ನನ್ನಲ್ಲಿತ್ತು. ಆದರೆ ಆ ಎರಡೂ ಹೊಣೆಗಾರಿಕೆಗಳು ನನ್ನ ದಿನನಿತ್ಯದ ಜೀವನದ ಮೇಲೆ ಎಷ್ಟು ಭಾರ ಬೀರುತ್ತಿವೆ ಎಂಬುದನ್ನು ನಾನು ಅರಿತಿರಲಿಲ್ಲ. ನಾನು ನಾಯಕತ್ವ ತೊರೆದ ಹೊತ್ತಿಗೆ ಸಂಪೂರ್ಣವಾಗಿ ದಣಿದಿದ್ದೆ. ಅದು ನನ್ನನ್ನೇ ಸಂಪೂರ್ಣವಾಗಿ ಆವರಿಸಿತ್ತು. ಅದು ತುಂಬಾ ಕಠಿಣವಾಗಿತ್ತು. ನಿರೀಕ್ಷೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗಿತ್ತು' ಎಂದು ಕೊಹ್ಲಿ ಹೇಳಿದರು.

ತಮ್ಮ ಶ್ರೇಷ್ಠ ಅವಧಿಯಲ್ಲಿ ಈ ಹೊಣೆಗಾರಿಕೆ ಭಾರವಾಗಿರಲಿಲ್ಲ, ಆದರೆ ನಂತರ ಅದು ಒತ್ತಡವಾಗಿ ಪರಿಣಮಿಸಿತು. ನನ್ನ ಉನ್ನತ ಅವಧಿಯಲ್ಲಿ ತಂಡ ಸುರಕ್ಷಿತ ಮತ್ತು ಆತ್ಮವಿಶ್ವಾಸದಿಂದಿರಬೇಕು ಎಂಬುದೇ ಮುಖ್ಯವಾಗಿತ್ತು. ಡ್ರೆಸ್ಸಿಂಗ್ ರೂಮ್‌ಗೆ ಅಸುರಕ್ಷಿತ ಭಾವನೆ ಬರಬಾರದು ಎಂದು ನೋಡಿಕೊಂಡೆ. ಈ ಸಂದರ್ಭದಲ್ಲಿ ಮಾಜಿ ಕೋಚ್ ರವಿ ಶಾಸ್ತ್ರಿ ಮತ್ತು ತಂಡದ ವ್ಯವಸ್ಥಾಪನಕ್ಕೆ ಅವರು ಶ್ರೇಯಸ್ಸು ನೀಡಿದರು. ಆದರೆ ಫಾರ್ಮ್ ಸದಾ ಉಳಿಯುವುದಿಲ್ಲ. ನಂತರ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರ ಹೊಣೆಗಾರಿಕೆಗಳೂ ನಿಮ್ಮ ಮೇಲೆ ಭಾರವಾಗಲು ಆರಂಭಿಸುತ್ತವೆ. ಅದು ನಿಜವಾಗಿಯೂ ಕಷ್ಟಕರವಾಗಿತ್ತು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com