

ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರ ಹೊಸ ಆರ್ಥಿಕ ಯುಗಕ್ಕೆ ಕಾಲಿಟ್ಟಿದ್ದು, ಭಾರತ ಮೂಲದ ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಮೌಲ್ಯ ಇದೀಗ ಬರೊಬ್ಬರಿ 1.63 ಲಕ್ಷ ಕೋಟಿಗೇರಿದೆ.
ಹೌದು.. Indian Premier League ಒಟ್ಟು ಮೌಲ್ಯ ₹1.63 ಲಕ್ಷ ಕೋಟಿ, ಅಂದರೆ ಸುಮಾರು 18 ಬಿಲಿಯನ್ ಡಾಲರ್ ತಲುಪಿದೆ ಎಂದು “Fanatic Sports Hurun India Most Valuable Sports Teams 2026” ವರದಿ ತಿಳಿಸಿದೆ.
ಈ ವರದಿ ಭಾರತೀಯ ಕ್ರೀಡಾ ಲೀಗ್‌ಗಳ ಫ್ರಾಂಚೈಸಿ ಮೌಲ್ಯ, ಆಟಗಾರರ ಆದಾಯ ಮತ್ತು ಅಥ್ಲೀಟ್ ಪ್ರತಿನಿಧಿತ್ವವನ್ನು ವಿಶ್ಲೇಷಿಸಿದೆ.
ವರದಿ ಪ್ರಕಾರ, IPL ಫ್ರಾಂಚೈಸಿಗಳ ಸರಾಸರಿ ಮೌಲ್ಯ 2032ರೊಳಗೆ ಸುಮಾರು 15 ಬಿಲಿಯನ್ ಡಾಲರ್‌ಗೆ ಏರಬಹುದು. ಇದು ಲೀಗ್‌ನ ವ್ಯಾಪಾರಿಕ ವಿಸ್ತರಣೆ ಮತ್ತು ಜಾಗತಿಕ ಜನಪ್ರಿಯತೆಯ ವೇಗವನ್ನು ತೋರಿಸುತ್ತದೆ.
ನಟ ಶಾರುಖ್ ಖಾನ್ ಒಡೆತನದ Kolkata Knight Riders ಅತ್ಯಂತ ಮೌಲ್ಯಯುತ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದರೆ, RCB ಸೂಪರ್ ಸ್ಟಾರ್ ಆಟಗಾರ Virat Kohli ಹುರೂನ್ ಸ್ಪೋರ್ಟ್ಸ್ ವರದಿಯಲ್ಲಿ ಅಗ್ರ IPL ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.
ತಂಡಗಳ ಮೌಲ್ಯ
ಇನ್ನು ವರದಿಯಲ್ಲಿರುವಂತೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಅತ್ಯಂತ ಹೆಚ್ಚು ಮೌಲ್ಯಯುತ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದ್ದು, ಇದರ ಮೌಲ್ಯ ₹19,200 ಕೋಟಿ ರಿಂದ ₹22,500 ಕೋಟಿ ನಡುವೆ ಎಂದು ಅಂದಾಜಿಸಲಾಗಿದೆ. ಎರಡನೇ ಸ್ಥಾನದಲ್ಲಿ Mumbai Indians ಇದ್ದು, ಅದರ ಮೌಲ್ಯ ₹18,400 ಕೋಟಿ ರಿಂದ ₹21,700 ಕೋಟಿ ಎಂದು ಅಂದಾಜಿಸಲಾಗಿದೆ.
ಮೂರನೇ ಸ್ಥಾನದಲ್ಲಿ Chennai Super Kings ಇದ್ದು, ಅದರ ಮೌಲ್ಯ ₹18,400 ಕೋಟಿ ರಿಂದ ₹20,700 ಕೋಟಿ ನಡುವೆ ಇದೆ. ಕಾವ್ಯಾ ಮಾರನ್ ಒಡೆತನದ Sunrisers Hyderabad ನಾಲ್ಕನೇ ಸ್ಥಾನ ಪಡೆದರೆ, Royal Challengers Bengaluru ₹16,700 ಕೋಟಿ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದೆ.
ವರದಿ Knight Riders Sports ಸಂಸ್ಥೆಯ ಜಾಗತಿಕ ವಿಸ್ತರಣೆಯನ್ನೂ ಉಲ್ಲೇಖಿಸಿದ್ದು, ಈ ಗುಂಪು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ Trinbago Knight Riders, ILT20 ಲೀಗ್‌ನ Abu Dhabi Knight Riders ಹಾಗೂ ಮೇಜರ್ ಲೀಗ್ ಕ್ರಿಕೆಟ್‌ನ Los Angeles Knight Riders ಸೇರಿದಂತೆ ಅನೇಕ ಜಾಗತಿಕ T20 ಫ್ರಾಂಚೈಸಿಗಳನ್ನು ಹೊಂದಿದೆ.
ರಾಜಸ್ತಾನ ರಾಯಲ್ಸ್ ಗೆ ಶೇ.92 ಪಟ್ಟು ಲಾಭ
ಅಂತೆಯೇ ಹೂಡಿಕೆ ಕ್ಷೇತ್ರದಲ್ಲಿ, ಹೂಡಿಕೆದಾರ Lachlan Murdoch ಅವರು Rajasthan Royals ತಂಡದ ಹೂಡಿಕೆಯಿಂದ ಸುಮಾರು 92 ಪಟ್ಟು ಲಾಭ ಗಳಿಸಿದ್ದಾರೆ ಎಂದು ವರದಿ ಹೇಳಿದೆ. IPL ಫ್ರಾಂಚೈಸಿಗಳು ಒಟ್ಟಾಗಿ 100 ಮಿಲಿಯನ್‌ಗಿಂತ ಹೆಚ್ಚು Instagram ಅನುಯಾಯಿಗಳನ್ನು ಹೊಂದಿದ್ದು, ಲೀಗ್‌ನ ಡಿಜಿಟಲ್ ಪ್ರಭಾವ ಮತ್ತು ಅಭಿಮಾನಿಗಳ ತೊಡಗಿಸಿಕೊಳ್ಳುವಿಕೆಯ ಬಲವನ್ನು ತೋರಿಸುತ್ತದೆ.
ಆಟಗಾರರ ವಿಭಾಗದಲ್ಲಿ ಕೊಹ್ಲಿಯೇ ಕಿಂಗ್
ಇನ್ನು ಆಟಗಾರರ ಆದಾಯ ವಿಭಾಗದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) 18 ಸೀಸನ್‌ಗಳಲ್ಲಿ RCB ಪರ ಆಡುತ್ತಾ ಒಟ್ಟು ₹230.2 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. 617 ಅಂಕಗಳೊಂದಿಗೆ ಕೊಹ್ಲಿ Hurun India IPL Athlete Performance Rankings ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, IPL ಇತಿಹಾಸದಲ್ಲೇ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರಾಗಿಯೂ ಹೊರಹೊಮ್ಮಿದ್ದಾರೆ.
ಉಳಿದಂತೆ ಮುಂಬೈ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) 18 ಸೀಸನ್‌ಗಳಲ್ಲಿ Mumbai Indians ಪರ ₹227.2 ಕೋಟಿ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ MS ಧೋನಿ ₹200.3 ಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ರವೀಂದ್ರ ಜಡೇಜಾ ₹196.7 ಕೋಟಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಜಸ್ ಪ್ರೀತ್ ಬುಮ್ರಾ ₹165.7 ಕೋಟಿ ಗಳಿಸಿದ್ದಾರೆ. ಭಾರತ ಟಿ20 ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ₹162.8 ಕೋಟಿ ಹಾಗೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಾ ₹162.6 ಕೋಟಿ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಟಾರ್ ಕೆಎಲ್ ರಾಹುಲ್ ₹148.2 ಕೋಟಿ ಗಳಿಸಿದ್ದು, ಆಫ್ಘಾನಿಸ್ತಾನದ ಸ್ಟಾರ್ ಆಟಗಾರ ರಷೀದ್ ಖಾನ್ ₹143.6 ಕೋಟಿ ಮತ್ತು ಮಾಜಿ ಕ್ರಿಕೆಟಿಗ ಆರ್ ಅಶ್ವಿನ್ ₹137.8 ಕೋಟಿ ಗಳಿಸಿದ್ದಾರೆ ಎಂದು ವರಿದಯಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ ವಿದೇಶಿ ಆಟಗಾರರಲ್ಲಿ RCB ಮಾಜಿ ಬ್ಯಾಟರ್ AB ಡಿವಿಲಿಯರ್ಸ್ 11 ಸೀಸನ್‌ಗಳಲ್ಲಿ ಒಟ್ಟು ₹102.5 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿದ್ದು, ಕೋಲ್ಕತಾ ತಂಡದ ಸುನಿಲ್ ನರೈನ್ ₹101.2 ಕೋಟಿ ಗಳಿಸಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಂಡ್ರೆ ರಸೆಲ್ ₹99.7 ಕೋಟಿ ಗಳಿಸಿದ್ದಾರೆ.
ಕ್ರಿಕೆಟ್ ಮಾತ್ರವಲ್ಲದೇ ಪ್ರೊಕಬ್ಬಡ್ಡಿ, ಹಾಕಿ ಲೀಗ್ ಗಳೂ ಕೂಡ ಈ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿದ್ದು, Indian Super League 455 ಅಥ್ಲೀಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ನಂತರ Indian Premier League 249 ಅಥ್ಲೀಟ್‌ಗಳು ಹಾಗೂ Pro Kabaddi League 235 ಅಥ್ಲೀಟ್‌ಗಳೊಂದಿಗೆ ಮುಂದಿವೆ. Hockey India League 183 ಅಥ್ಲೀಟ್‌ಗಳನ್ನು ಹೊಂದಿದ್ದರೆ, Prime Volleyball League 116 ಅಥ್ಲೀಟ್‌ಗಳನ್ನು ಒಳಗೊಂಡಿದೆ. ನಗರಗಳ ಪೈಕಿ Mumbai 35 ಅಥ್ಲೀಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, Delhi 31 ಅಥ್ಲೀಟ್‌ಗಳೊಂದಿಗೆ ನಂತರದಲ್ಲಿದೆ. Bengaluru 26 ಅಥ್ಲೀಟ್‌ಗಳನ್ನು ಹೊಂದಿದೆ.
ಅಂತೆಯೇ ಫುಟ್ಬಾಲ್ ವಿಭಾಗದಲ್ಲಿ Kolkata 11 ISL ಆಟಗಾರರನ್ನು ನೀಡಿದ್ದರೆ, Bengaluru ಮತ್ತು Kozhikode ತಲಾ 9 ಆಟಗಾರರನ್ನು ಹೊಂದಿವೆ. ಕಬಡ್ಡಿಯಲ್ಲಿ Sonipat 11 Pro Kabaddi League ಆಟಗಾರರನ್ನು ನೀಡಿದ್ದರೆ, Rohtak 10 ಆಟಗಾರರನ್ನು ಹೊಂದಿದೆ.
ಮಹಿಳಾ ಕ್ರೀಡೆಗಳ ಪ್ರಭಾವವೂ ವೇಗವಾಗಿ ಹೆಚ್ಚಳ: ವರದಿ
ಕೇವಲ ಪುರುಷರ ಕ್ರೀಡೆಗಳು ಮಾತ್ರವಲ್ಲದೇ ಭಾರತದಲ್ಲಿ ಮಹಿಳಾ ಕ್ರೀಡೆಗಳ ಪ್ರಭಾವವೂ ವೇಗವಾಗಿ ಹೆಚ್ಚಳವಾಗುತ್ತಿದೆ ಎಂದು ಈ ವರದಿ ಉಲ್ಲಖಿಸಿದೆ. ಪ್ರಮುವಾಗಿ ಮಹಿಳಾ ಪ್ರೀಮಿಯರ್ ಲೀಗ್ ದಿನೇ ದಿನೇ ತನ್ನ ಖ್ಯಾತಿ ಮತ್ತು ಮೌಲ್ಯ ಹೆಚ್ಚಿಸಿಕೊಳ್ಳುತ್ತಿದೆ ಎಂದು ವರದಿ ಹೇಳಿದೆ.
ಆರ್ ಸಿಬಿ ನಾಯಕಿ ಸ್ಮೃತಿ ಮಂದನಾ (Smriti Mandhana) ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ INR 13.7 ಕೋಟಿಯೊಂದಿಗೆ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಕೇವಲ ನಾಲ್ಕು ಸೀಸನ್‌ಗಳಲ್ಲಿ WPLನ ಟಾಪ್ 10 ಆಟಗಾರ್ತಿಯರು ಒಟ್ಟಾರೆ INR 90 ಕೋಟಿಗೂ ಹೆಚ್ಚು ಗಳಿಸಿದ್ದಾರೆ.
ಇತರೆ ಕ್ರೀಡೆಗಳ ಮೌಲ್ಯ ಹೆಚ್ಚಳ
ಕ್ರಿಕೆಟ್‌ನ್ನು ಮೀರಿದ ಭಾರತೀಯ ಕ್ರೀಡಾ ಆರ್ಥಿಕತೆಯ ವೇಗವಾದ ಬೆಳವಣಿಗೆಯನ್ನೂ ವರದಿ ವಿವರಿಸಿದೆ. ಭಾರತದಲ್ಲಿ ಈಗ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ಹಾಕಿ ಮತ್ತು ವಾಲಿಬಾಲ್ ಸೇರಿ ಆರು ಪ್ರಮುಖ ವೃತ್ತಿಪರ ಕ್ರೀಡಾ ಲೀಗ್‌ಗಳು ಕಾರ್ಯನಿರ್ವಹಿಸುತ್ತಿದ್ದು, 59 ಫ್ರಾಂಚೈಸಿಗಳು ಮತ್ತು 763 ಸಕ್ರಿಯ ಬ್ರ್ಯಾಂಡ್ ಪಾಲುದಾರಿಕೆಗಳಿವೆ.
IPL ಒಂದರಲ್ಲೇ 307 ಪ್ರಾಯೋಜಕತ್ವ ಒಪ್ಪಂದಗಳಿದ್ದರೂ, ಇತರೆ ಲೀಗ್‌ಗಳೂ ತಮ್ಮದೇ ಬಲವಾದ ವಾಣಿಜ್ಯ ಪರಿಸರವನ್ನು ನಿರ್ಮಿಸಿಕೊಳ್ಳುತ್ತಿವೆ. ಕ್ರೀಡಾ ಅಭಿಮಾನಿತ್ವ, ಪ್ರಾಯೋಜಕತ್ವ ಮತ್ತು ಲೀಗ್ ತೊಡಗಿಸಿಕೊಳ್ಳುವಿಕೆಯಲ್ಲಿ ಟಿಯರ್-2 ಮತ್ತು ಟಿಯರ್-3 ನಗರಗಳು ಪ್ರಮುಖ ಬೆಳವಣಿಗೆಯ ಕೇಂದ್ರಗಳಾಗಿ ಹೊರಹೊಮ್ಮುತ್ತಿರುವುದನ್ನೂ ಅಧ್ಯಯನ ಹೇಳಿದೆ.
ಬಹು-ತಂಡ ಮಾಲೀಕತ್ವ ಗುಂಪುಗಳ ವಿಸ್ತರಣೆಯೂ ವೇಗವಾಗಿ ನಡೆಯುತ್ತಿದೆ. GMR Group ಜಾಗತಿಕ ಮಟ್ಟದಲ್ಲಿ ಕ್ರಿಕೆಟ್, ಕಬಡ್ಡಿ ಮತ್ತು ಖೋ-ಖೋ ಸೇರಿ 10 ತಂಡಗಳನ್ನು ಹೊಂದಿದ್ದರೆ, JSW Group ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಮತ್ತು ಹಾಕಿ ಸೇರಿ ಏಳು ತಂಡಗಳನ್ನು ಹೊಂದಿದೆ.
86 ಪುಟಗಳ ಈ ವರದಿ ಪ್ರಕಾರ, ಭಾರತೀಯ ಕ್ರೀಡಾ ವಲಯವು ಕೇವಲ ಕ್ರಿಕೆಟ್ ಆಧಾರಿತ ಮನರಂಜನಾ ಉತ್ಪನ್ನದಿಂದ ಬಹು-ಕ್ರೀಡಾ ಆರ್ಥಿಕತೆಯಾಗಿ ರೂಪಾಂತರಗೊಳ್ಳುತ್ತಿದೆ. ಆದರೆ Indian Premier League ಇನ್ನೂ ದೇಶದ ಅತಿ ದೊಡ್ಡ ಆರ್ಥಿಕ ಚಾಲಕವಾಗಿಯೇ ಉಳಿದಿದೆ; ಇದಕ್ಕೆ Kolkata Knight Riders ಮುಂತಾದ ಬ್ರ್ಯಾಂಡ್‌ಗಳು ಮತ್ತು Virat Kohli ಅವರಂತಹ ತಾರಾ ಆಟಗಾರರು ಪ್ರಮುಖ ಶಕ್ತಿಯಾಗಿದ್ದಾರೆ ಎಂದು ವರದಿ ಹೇಳಿದೆ.
Advertisement