ವಿರಾಟ್ ಕೊಹ್ಲಿ ಜೊತೆಗೆ ಮಾತಿನ ಚಕಮಕಿ: ಮೌನ ಮುರಿದ ಹರ್‌ಪ್ರೀತ್ ಬ್ರಾರ್! ಹೇಳಿದ್ದೇನು?

ಆರ್‌ಸಿಬಿ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಥ್ರೋ ಎಸೆದದ್ದು ಮತ್ತು ಚೆಂಡನ್ನು ಒರಟಾಗಿಸುವ ತಂತ್ರದ ಅಸಂಬದ್ಧ ತಪ್ಪುಗ್ರಹಿಕೆಯಿಂದ ಈ ಮಾತಿನ ಚಕಮಕಿ ನಡೆಯಿತು ಎಂದು ಬ್ರಾರ್ ತಿಳಿಸಿದರು.
Virat and Brar
ವಿರಾಟ್ ಕೊಹ್ಲಿ, ಹರ್‌ಪ್ರೀತ್ ಬ್ರಾರ್
Updated on

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಕಾನ್ ವಿರಾಟ್ ಕೊಹ್ಲಿ ಜೊತೆಗೆ ಪಂಜಾಬ್ ಕಿಂಗ್ಸ್ (PBKS) ಎಡಗೈ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿರುವ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ಕುರಿತು ಹರ್‌ಪ್ರೀತ್ ಬ್ರಾರ್ ಮೌನ ಮುರಿದಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಐಪಿಎಲ್ 2026 ಪಂದ್ಯದ ಸಂದರ್ಭದಲ್ಲಿ ನಡೆದ ಈ ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗಿತ್ತು. ಅಷ್ಟಕ್ಕೊ ಏನಾಯಿತು ಎಂಬುದರ ಬಗ್ಗೆ PBKS ಪಾಡ್‌ಕ್ಯಾಸ್ಟ್‌ನಲ್ಲಿ ನಿರೂಪಕಿ ಹರ್ಲೀನ್ ಡಿಯೋಲ್ ಜೊತೆಗೆ ಹರ್ ಪ್ರೀತ್ ಬ್ರಾರ್ ಮಾತನಾಡಿದ್ದಾರೆ.

ಕೊಹ್ಲಿ ಕೋಪಗೊಳ್ಳಲು ಕಾರಣವೇನು?

ಆರ್‌ಸಿಬಿ ಇನ್ನಿಂಗ್ಸ್‌ನ 9 ನೇ ಓವರ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಥ್ರೋ ಎಸೆದದ್ದು ಮತ್ತು ಚೆಂಡನ್ನು ಒರಟಾಗಿಸುವ ತಂತ್ರದ ಅಸಂಬದ್ಧ ತಪ್ಪುಗ್ರಹಿಕೆಯಿಂದ ಈ ಮಾತಿನ ಚಕಮಕಿ ನಡೆಯಿತು ಎಂದು ಬ್ರಾರ್ ತಿಳಿಸಿದರು.

ಇದು ಮಧ್ಯಾಹ್ನದ ಆಟವಾಗಿತ್ತು. ಡೆತ್ ಓವರ್‌ಗಳಲ್ಲಿ ನೆರವಾಗಲು ಬೌನ್ಸ್ ಥ್ರೋ ಮಾಡಲು ಕ್ಯಾಪ್ಟನ್ ಹೇಳಿದ್ದರು. ನಾನು ಸರಿಯಾದ ಎಸೆತವನ್ನೇ ಹಾಕಿದೆ. ಆದರೆ ಮಾರ್ಕಸ್ ಸ್ಟೊಯಿನಿಸ್ ಗೊಂದಲಕ್ಕೊಳಗಾದರು. ಅದನ್ನು ನೇರವಾಗಿ ಹಿಡಿಯಬೇಕೋ ಅಥವಾ ಒಂದು ಬೌನ್ಸ್ ನಂತರ ಹಿಡಿಯಬೇಕೋ ಎಂದು ಖಚಿತವಿಲ್ಲದ ಕಾರಣ ಅವರು ಒಂದು ಹೆಜ್ಜೆ ಹಿಂದಕ್ಕೆ ಇಟ್ಟರು. ಆಗ ವಿರಾಟ್ ನನ್ನತ್ತ ನೋಡಿದರು ಎಂದು ಬ್ರಾರ್ ನೆನಪಿಸಿಕೊಂಡರು 20 ವರ್ಷದಿಂದ ಆಡ್ತಿದ್ದೇನೆ. ನಿಮ್ಮ ಕೋಚ್ ಕೂಡ ನನಗೆ ಗೊತ್ತು. ನಿಮ್ಮ ಕೈ ತುಂಬಾ ದುರ್ಬಲವಾಗಿದೆ ಎಂದು ಕೊಹ್ಲಿ ಬ್ರಾರ್‌ಗೆ ಹೇಳಿದರು. ಅದು ಮಾತಿನ ಚಕಮಕಿಯಾಗಿರಲಿಲ್ಲ. ಅದೊಂದು ಗಂಭೀರ ಮಾತುಕತೆ ಅಷ್ಟೇ ಎಂದು ತಿಳಿಸಿದರು.

ವಾಸ್ತವವಾಗಿ ಇದು ಮಧ್ಯಾಹ್ನದ ಪಂದ್ಯವಾಗಿತ್ತು. ಆದ್ದರಿಂದ, ನಾವು ಮಾಡಿದ ಯಾವುದೇ ಥ್ರೋಗಳು ಬೌನ್ಸ್‌ನಲ್ಲಿರುವಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ನಾಯಕ ಶ್ರೇಯಸ್ ಅಯ್ಯರ್ ಎಲ್ಲಾ ಥ್ರೋಗಳು ಒಂದೇ ಬೌನ್ಸ್ ಆಗಿರುವಂತೆ ನಮಗೆ ಹೇಳಿದ್ದರು. ಆದ್ದರಿಂದ, ನಾವೆಲ್ಲರೂ ಹಾಗೆ ಮಾಡುತ್ತಿದ್ದೆವು. ಆದರೆ ಕೊಹ್ಲಿ ಅವರಿಗೆ ಏನನ್ನೂ ಹೇಳಲಿಲ್ಲ ಎಂದು ಬ್ರಾರ್ ಹೇಳಿದರು. ಸ್ಟೊಯಿನಿಸ್‌ಗೆ ಚೆಂಡನ್ನು ಹಾಕಿದ್ದೆ. ಅದನ್ನು ನೇರವಾಗಿ ತೆಗೆದುಕೊಳ್ಳಬೇಕೆ ಅಥವಾ ಬೌನ್ಸ್‌ನಲ್ಲಿ ತೆಗೆದುಕೊಳ್ಳಬೇಕೆ ಎಂದು ಖಚಿತವಿಲ್ಲದ ಕಾರಣ ಅವರು ಒಂದು ಹೆಜ್ಜೆ ಹಿಂದಕ್ಕೆ ಇಟ್ಟರು. ಸ್ಟೊಯಿನಿಸ್ ಒಂದು ಬೌನ್ಸ್ ಥ್ರೋ ತೆಗೆದುಕೊಂಡಾಗ ವಿರಾಟ್ ಭಾಯ್ ನನ್ನನ್ನು ನೋಡಿದರು. ನಾನು ಪಾಯಿಂಟ್‌ನಲ್ಲಿ ನಿಂತಿದ್ದೆ ಎಂದು ಬ್ರಾರ್ ತಿಳಿಸಿದರು.

Virat and Brar
'ಅದಕ್ಕಾಗಿಯೇ ನಾನು ಅಲ್ಲಿಂದ ಹೊರಬಂದೆ': ಟೆಸ್ಟ್ ನಾಯಕತ್ವದಿಂದ ನಿರ್ಗಮಿಸಿದ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ

ನಾನು ಅಲ್ಲಿ ನಿಂತಿರುವುದನ್ನು ಕೊಹ್ಲಿ ನೋಡಿದರು. ಆದ್ದರಿಂದ ನಾನು ಅವರತ್ತ ಹಿಂತಿರುಗಿ ನೋಡಬಾರದು ಎಂದು ನಿರ್ಧರಿಸಿದೆ. ಓವರ್ ಮುಗಿದ ನಂತರ ಅವರು ಬೇರೆ ಯಾವುದೋ ಕೆಲಸದಲ್ಲಿ ನಿರತರಾಗುತ್ತಾರೆ ಎಂದು ನಾನು ಭಾವಿಸಿದೆ. ನಂತರ, ನಾನು ಮುಂದಿನ ಓವರ್ ಬೌಲ್ ಮಾಡಬೇಕಿತ್ತು. ಅದಕ್ಕಾಗಿ ರನ್-ಅಪ್ ಅನ್ನು ಗುರುತಿಸುತ್ತಿದ್ದೆ. ಆಗ ಕೊಹ್ಲಿ ಕ್ರೀಸ್ ಪಕ್ಕದಲ್ಲಿ ಬಂದು 'ನಾನು 20 ವರ್ಷಗಳಿಂದ ಆಡುತ್ತಿದ್ದೇನೆ' ಎಂದು ಹೇಳಿದರು. ನಾನು ಉದ್ದೇಶಪೂರ್ವಕವಾಗಿ ಆ ಥ್ರೋ ಮಾಡಿಲ್ಲ ಎಂದು ಹೇಳಿದ್ದಾಗಿ ಹರ್‌ಪ್ರೀತ್ ಬ್ರಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com