37ನೇ ವಯಸ್ಸಿನಲ್ಲೂ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್‌ಗೆ ತಲೆಬಾಗಿದ ಅಭಿಮಾನಿಗಳು; ವಿಶಿಷ್ಠ ಸಂಭ್ರಮಾಚರಣೆ ಮಾಡಿದ ಸ್ಟಾರ್ ಆಟಗಾರ! Video

ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಸಂಬಂಧಿಸಿದಂತೆ, ಭಾರತೀಯ ತಂಡದಲ್ಲಿ ಕೊಹ್ಲಿಯ ಸ್ಥಾನದ ಬಗ್ಗೆ ಟೀಕಾಕಾರರ ಒಂದು ವರ್ಗವು ಪ್ರಶ್ನೆಗಳನ್ನು ಎತ್ತುತ್ತಿರುವ ಸಮಯದಲ್ಲೇ, ಕೊಹ್ಲಿ ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ.
Virat Kohli Celebration
ವಿರಾಟ್ ಕೊಹ್ಲಿ ಸಂಭ್ರಮಾಚರಣೆ
Updated on: 

ಭಾರತೀಯ ಕ್ರಿಕೆಟ್‌ನ ದಿಗ್ಗಜ ವಿರಾಟ್ ಕೊಹ್ಲಿ, 37ನೇ ವಯಸ್ಸಿನಲ್ಲೂ ಫಿಟ್‌ನೆಸ್‌ ವಿಚಾರದಲ್ಲಿ ಒಂದು ಹೆಜ್ಜೆ ಎಲ್ಲರಿಗಿಂತಲೂ ಮುಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ, ಅನ್ಶುಲ್ ಕಾಂಬೋಜ್ ಅವರ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಕೊಹ್ಲಿ ಅದ್ಭುತ ಕ್ಯಾಚ್ ಒಂದನ್ನು ಹಿಡಿದು ಎಲ್ಲರನ್ನು ಬೆರಗುಗೊಳಿಸಿದರು. ಚೆಂಡು ಇನ್ನೇನು ನೆಲಕ್ಕೆ ಬೀಳುವಷ್ಟರಲ್ಲಿಯೇ ಎಡಕ್ಕೆ ಡೈವ್ ಮಾಡಿದ ಕೊಹ್ಲಿ ಕ್ಯಾಚ್ ಹಿಡಿದು ಎದುರಾಳಿ ಬ್ಯಾಟರ್ ಅನ್ನು ಪೆವಿಲಿಯನ್ ಕಡೆಗೆ ತೆರಳುವಂತೆ ಮಾಡಿದರು.

ಆ ಎಸೆತವು ಫುಲ್ ಡೆಲಿವರಿಯಾಗಿತ್ತು ಮತ್ತು ನಾಥನ್ ಸ್ಮಿತ್‌ ಅವರನ್ನು ಡ್ರೈವ್ ಮಾಡಲು ಪ್ರೇರೇಪಿಸಿತು; ಸ್ಮಿತ್ ಆ ಬಲೆಯಲ್ಲಿ ಬಿದ್ದು, ಚೆಂಡನ್ನು ಬಲವಾಗಿ ಹೊಡೆಯಲು ಪ್ರಯತ್ನಿಸಿದರು. ಚೆಂಡು ಬ್ಯಾಟ್‌ನ ದಪ್ಪ ಅಂಚಿಗೆ ತಾಗಿ, ಸೆಕೆಂಡ್ ಸ್ಲಿಪ್‌ನ ಬಲಕ್ಕೆ ಸಾಗಿತು. ಅಲ್ಲಿ ಕೊಹ್ಲಿ ಸರಿಯಾದ ಸಮಯಕ್ಕೆ ಡೈವ್ ಮಾಡಿ, ಚೆಂಡನ್ನು ಹಿಡಿದುಕೊಂಡರು - ಭಾರತದ ಅತ್ಯುತ್ತಮ ಆಟಗಾರರೊಬ್ಬರಿಂದ ಇದೊಂದು ಅತ್ಯುನ್ನತ ಕ್ಯಾಚ್ ಆಗಿತ್ತು.

ಅಷ್ಟೇ ಅಲ್ಲದೆ, ಕ್ಯಾಚ್ ಹಿಡದ ನಂತರ ಕೊಹ್ಲಿ ವಿಶಿಷ್ಠ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. 'ಬಿಲ್ಲು-ಬಾಣ' ಹಿಡಿದು ನಿಂತಿರುವಂತೆ ಸಂಭ್ರಮಾಚರಣೆ ಮಾಡಿದರು.

ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಸಂಬಂಧಿಸಿದಂತೆ, ಭಾರತೀಯ ತಂಡದಲ್ಲಿ ಕೊಹ್ಲಿಯ ಸ್ಥಾನದ ಬಗ್ಗೆ ಟೀಕಾಕಾರರ ಒಂದು ವರ್ಗವು ಪ್ರಶ್ನೆಗಳನ್ನು ಎತ್ತುತ್ತಿರುವ ಸಮಯದಲ್ಲೇ, ಕೊಹ್ಲಿ ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಹೀಗೆ ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದರೂ, ಮೈದಾನದಲ್ಲಿ ಕೊಹ್ಲಿ ತೋರುವ ಚುರುಕಾದ ಹಾಗೂ ಕಸರತ್ತುಪೂರ್ಣ ಪ್ರದರ್ಶನಗಳು, ಅವರು ತಮ್ಮ ಮೇಲೆ ಮತ್ತು ತಮ್ಮ ಆಟದ ಮೇಲೆ ಎಷ್ಟು ಶ್ರಮ ಹಾಕುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತಲೇ ಇವೆ.

ಪಂದ್ಯ ಆರಂಭಕ್ಕೂ ಮುನ್ನ, ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಪ್ರಮುಖ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ರಗ್ಬಿ ದಂತಕಥೆ ಕೆವೆನ್ ಮೀಲಾಮು ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ, 'ಆಲ್ ಬ್ಲ್ಯಾಕ್ಸ್' (ನ್ಯೂಜಿಲೆಂಡ್ ರಗ್ಬಿ ತಂಡ) ತಂಡದ ಈ ದಿಗ್ಗಜ ಆಟಗಾರ, ಅವರೆಲ್ಲರಿಗೂ ಅವರ ಹೆಸರಿರುವ ವಿಶೇಷ ಜರ್ಸಿಗಳನ್ನು ಉಡುಗೊರೆಯಾಗಿ ನೀಡಿದರು. ನ್ಯೂಜಿಲೆಂಡ್ ರಾಷ್ಟ್ರೀಯ ರಗ್ಬಿ ತಂಡಕ್ಕಾಗಿ 132 ಪಂದ್ಯಗಳನ್ನು ಆಡಿರುವ ಮೀಲಾಮು, 'ಆಲ್ ಬ್ಲ್ಯಾಕ್ಸ್' ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಮತ್ತು ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

2011 ಮತ್ತು 2015ರ ರಗ್ಬಿ ವಿಶ್ವಕಪ್‌ಗಳನ್ನು ಗೆದ್ದ ತಂಡಗಳ ಪ್ರಮುಖ ಸದಸ್ಯರಾಗಿದ್ದ ಮೀಲಾಮು, ಪಂದ್ಯ ಆರಂಭಕ್ಕೂ ಮುನ್ನ ಭಾರತೀಯ ಆಟಗಾರರ ಮೂವರ ತಂಡಕ್ಕೆ ವಿಶೇಷ ಜರ್ಸಿಗಳನ್ನು ಹಸ್ತಾಂತರಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ಆಟಗಾರರನ್ನು ಕ್ರೀಡಾಂಗಣದೊಳಗೆ ಕರೆತರುವ ಸಂದರ್ಭದಲ್ಲಿ, ಸಾಂಸ್ಕೃತಿಕ ಪ್ರತಿನಿಧಿಗಳು ನಡೆಸಿಕೊಟ್ಟ ಸಾಂಪ್ರದಾಯಿಕ ಮಾವೋರಿ ಗಾಯನವು ಪಂದ್ಯಪೂರ್ವ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X