'ವಿಶ್ವ ಕ್ರಿಕೆಟ್ IPLಗೆ ಹೊಂದಾಣಿಕೆ ಮಾಡಿಕೊಳ್ಳಬೇಕು': ಲಲಿತ್ ಮೋದಿ ಸಲಹೆಗೆ KKR ಮಾಲಕಿ ಜೂಹಿ ಚಾವ್ಲಾ ಬೆಂಬಲ!

ಹಾಲಿ ಇರುವ ಐಪಿಎಲ್ ವೇಳಾಪಟ್ಟಿಯನ್ನು ಬದಲಾಯಿಸಿ ಟೂರ್ನಿ ಆಯೋಜನೆ ಮಾಡಬೇಕು ಎಂಬ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರ ಈ ಸಲಹೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹಮಾಲೀಕಿ ಹಾಗೂ ನಟಿ ಜೂಹಿ..
KKR Co-Owner Endorses Lalit Modi's Idea, Wants IPL Window Moved
ಐಪಿಎಲ್ ಮತ್ತು ಲಲಿತ್ ಮೋದಿ
Updated on: 

ನವದೆಹಲಿ: ಐಪಿಎಲ್ ಪಂದ್ಯಾವಳಿಯನ್ನು ಏಪ್ರಿಲ್‌-ಮೇ ತಿಂಗಳ ಬದಲಿಗೆ ಜನವರಿಯಲ್ಲಿ ನಡೆಸಬೇಕು ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ವಿಶ್ವ ಕ್ರಿಕೆಟ್ IPLಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಲಲಿತ್ ಮೋದಿ ವಾದಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ ಮಾಲಕಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಾಲಿ ಇರುವ ಐಪಿಎಲ್ ವೇಳಾಪಟ್ಟಿಯನ್ನು ಬದಲಾಯಿಸಿ ಟೂರ್ನಿ ಆಯೋಜನೆ ಮಾಡಬೇಕು ಎಂಬ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರ ಈ ಸಲಹೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಸಹಮಾಲೀಕಿ ಹಾಗೂ ನಟಿ ಜೂಹಿ ಚಾವ್ಲಾ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುಡುವ ಬಿಸಿಲಿನಲ್ಲಿ ವಿಶ್ವದ ಅತಿದೊಡ್ಡ ಟಿ20 ಕ್ರಿಕೆಟ್ ಟೂರ್ನಿ ನಡೆಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಸದ್ಯ ಐಪಿಎಲ್ ಪಂದ್ಯಾವಳಿ ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತದೆ. ಆದರೆ ಉತ್ತರ ಭಾರತದ ಹಲವು ನಗರಗಳಲ್ಲಿ ಈ ಅವಧಿಯಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತದೆ.

2026ರ ಐಪಿಎಲ್ ವೇಳೆಯೂ ಆಟಗಾರರು ಮತ್ತು ಪ್ರೇಕ್ಷಕರು ಬಿಸಿಲಿನ ತಾಪಕ್ಕೆ ತೀವ್ರ ತೊಂದರೆ ಅನುಭವಿಸಿದ್ದರು. ಹೀಗಾಗಿ ಪಂದ್ಯಾವಳಿಯ ವೇಳಾಪಟ್ಟಿ ಬದಲಿಸುವ ಕುರಿತು ಚರ್ಚೆ ಶುರುವಾಗಿದೆ.

KKR Co-Owner Endorses Lalit Modi's Idea, Wants IPL Window Moved
ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ಮಳೆಗಾಹುತಿ: ಟಾಸ್ ಕೂಡ ನಡೆಯದೆ ರದ್ದು!

ದೇಶೀ ಟೂರ್ನಿ, ಬಿಸಿಸಿಐ ಸ್ವತಂತ್ರವಾಗಿ ನಿರ್ಧರಿಸಬಹುದು

ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಐಪಿಎಲ್ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅನುಮತಿ ಅಥವಾ ವಿಶೇಷ ಸಮಯದ ಅವಕಾಶ ಪಡೆಯುವ ಅಗತ್ಯವಿಲ್ಲ. ಇದು ದೇಶೀಯ ಟೂರ್ನಿಯಾಗಿರುವುದರಿಂದ ಯಾವಾಗ ನಡೆಸಬೇಕು ಎಂಬುದನ್ನು ಬಿಸಿಸಿಐ ಸ್ವತಂತ್ರವಾಗಿ ನಿರ್ಧರಿಸಬಹುದು ಎಂದು ಅವರು ಹೇಳಿದ್ದಾರೆ.

ಏಪ್ರಿಲ್‌-ಮೇ ತಿಂಗಳ ಸುಡುವ ಬಿಸಿಲಿನಿಂದ ಆಟಗಾರರನ್ನು ರಕ್ಷಿಸಲು ಐಪಿಎಲ್ ಅನ್ನು ಜನವರಿ ಅಥವಾ ಅಕ್ಟೋಬರ್‌ನಲ್ಲಿ ನಡೆಸುವ ಬಗ್ಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಐಪಿಎಲ್ ಈಗಾಗಲೇ ವಿಶ್ವದ ಪ್ರಮುಖ ಕ್ರೀಡಾ ಟೂರ್ನಿಗಳಲ್ಲಿ ಒಂದಾಗಿ ಬೆಳೆದಿದೆ. ಹೀಗಾಗಿ ವಿಶ್ವ ಕ್ರಿಕೆಟ್ ವೇಳಾಪಟ್ಟಿಗೆ ಐಪಿಎಲ್ ಹೊಂದಿಕೊಳ್ಳುವುದಕ್ಕಿಂತ, ವಿಶ್ವ ಕ್ರಿಕೆಟ್ ವೇಳಾಪಟ್ಟಿಯೇ ಐಪಿಎಲ್‌ಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವಂತಾಗಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಲಲಿತ್ ಮೋದಿ ಸಲಹೆಗೆ ಜೂಹಿ ಚಾವ್ಲಾ ಸಾಥ್

ಲಲಿತ್ ಮೋದಿ ಅವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಕೆಕೆಆರ್ ಸಹಮಾಲೀಕಿ ಜೂಹಿ ಚಾವ್ಲಾ, ಜನವರಿಯಲ್ಲಿ ಐಪಿಎಲ್ ನಡೆಸುವ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿದ್ದಾರೆ. ವಿಶ್ವದ ದೊಡ್ಡ ಕ್ರಿಕೆಟ್ ಟೂರ್ನಿಯನ್ನು ಅತ್ಯಂತ ಬಿಸಿಲಿನ ಅವಧಿಯಲ್ಲೇ ಏಕೆ ನಡೆಸಬೇಕು ಎಂದು ಪ್ರಶ್ನಿಸಿರುವ ಅವರು, ಜನವರಿಯಲ್ಲಿ ಪಂದ್ಯಾವಳಿ ಆಯೋಜಿಸುವುದರಿಂದ ಆಟಗಾರರು ಮತ್ತು ಪ್ರೇಕ್ಷಕರಿಗೆ ಉತ್ತಮ ಅನುಭವ ಸಿಗಲಿದೆ ಎಂದಿದ್ದಾರೆ.

ಉತ್ತಮ ಹವಾಮಾನ ಇದ್ದರೆ ಆಟದ ಗುಣಮಟ್ಟವೂ ಹೆಚ್ಚಲಿದೆ. ಐಪಿಎಲ್ ಸಾಕಷ್ಟು ಬದಲಾಗಿದೆ. ಹಾಗಾಗಿ ಅದರ ವೇಳಾಪಟ್ಟಿಯೂ ಬದಲಾಗುವ ಸಮಯ ಬಂದಿದೆ ಎಂದು ಜೂಹಿ ಚಾವ್ಲಾ ಅಭಿಪ್ರಾಯಪಟ್ಟಿದ್ದಾರೆ.

2027ರ ಐಪಿಎಲ್ ವೇಳಾಪಟ್ಟಿಯಲ್ಲೂ ಬದಲಾವಣೆ ಸಾಧ್ಯತೆ

ಇದೇ ವೇಳೆ, 2027ರ ಐಪಿಎಲ್ ಪಂದ್ಯಾವಳಿಯನ್ನು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ಆರಂಭಿಸುವ ಕುರಿತು ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಈ ಬಗ್ಗೆ ಜೂನ್‌ನಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಮೇ ತಿಂಗಳ ಕೊನೆಯ ಭಾಗದಲ್ಲಿ ಎದುರಾಗುವ ಬಿಸಿಲು ಮತ್ತು ಮುಂಗಾರು ಪೂರ್ವ ಮಳೆಯ ಸಮಸ್ಯೆ ತಪ್ಪಿಸಲು ಟೂರ್ನಿಯನ್ನು ಮಾರ್ಚ್ ಕೊನೆಯ ವಾರಕ್ಕಿಂತ ಮುಂಚಿತವಾಗಿ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದರು.

2026ರ ಐಪಿಎಲ್ ಮಾರ್ಚ್ 28 ಅಥವಾ 29ರಂದು ಆರಂಭವಾಗಿ ಮೇ 31ರಂದು ಮುಕ್ತಾಯಗೊಂಡಿತ್ತು. ಮೇ 15ರ ನಂತರ ಹಲವು ನಗರಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆಯಿರುವುದರಿಂದ ಆಟಗಾರರು ಮತ್ತು ಪ್ರೇಕ್ಷಕರಿಗೆ ಅನುಕೂಲವಾಗುವಂತೆ ವೇಳಾಪಟ್ಟಿ ರೂಪಿಸುವ ಬಗ್ಗೆ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಯುತ್ತಿದೆ ಎಂದು ಅವರು ಹೇಳಿದ್ದರು. ಆದರೆ ಐಪಿಎಲ್ ಅನ್ನು ಜನವರಿಯಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X