U-19 Asia Cup: ವೀರೇಂದ್ರ ಸೆಹ್ವಾಗ್‌ ಪುತ್ರ ಆರ್ಯವೀರ್‌ ಬ್ಯಾಟಿಂಗ್ ಅಬ್ಬರ! ಆಕರ್ಷಕ ಶತಕ

ತಂದೆ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಆರ್ಯವೀರ್‌ 17 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಭಾರತ 70 ರನ್ ಗಳೊಂದಿಗೆ ಯುಎಇ ಬಗ್ಗುಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು
Aaryavir Sehwag
ಆರ್ಯವೀರ್‌
Updated on: 

ಒಮಾನ್: ಇಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಪಂದ್ಯದಲ್ಲಿ ಯುಇಎ ವಿರುದ್ಧ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಪುತ್ರ ಆರ್ಯವೀರ್‌ ಅಬ್ಬರದ ಶತಕ (160) ಮೂಲಕ ಅದ್ಬುತ ಪ್ರದರ್ಶನ ನೀಡಿದರು.

ತಂದೆ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಆರ್ಯವೀರ್‌ 17 ಬೌಂಡರಿಗಳು ಮತ್ತು ಏಳು ಸಿಕ್ಸರ್‌ಗಳೊಂದಿಗೆ ಶತಕ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಭಾರತ 70 ರನ್ ಗಳೊಂದಿಗೆ ಯುಎಇ ಬಗ್ಗುಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು

ಈ ಇನ್ನಿಂಗ್ಸ್‌ನಲ್ಲಿ ಯುವ ಏಕದಿನ ಪಂದ್ಯಗಳಲ್ಲಿ (Youth ODIs) ಭಾರತೀಯ ಆಟಗಾರ ಗಳಿಸಿದ ಐದನೇ ಅತಿ ಹೆಚ್ಚು ಸ್ಕೋರ್ ಇದಾಗಿದೆ. 2017ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಶುಭಮನ್ ಗಿಲ್ 160 ರನ್ ಗಳಿಸಿದ್ದರು. ಹಾಗೆಯೇ 2009ರಲ್ಲಿ ಹೋಬಾರ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮಯಾಂಕ್ ಅಗರ್ವಾಲ್ ಕೂಡ ಇದೇ ಮೊತ್ತವನ್ನು (160 ರನ್) ದಾಖಲಿಸಿದ್ದರು.

ಅಂಡರ್-19ನಲ್ಲಿ ಭಾರತೀಯ ಆಟಗಾರನ ಗರಿಷ್ಠ ಸ್ಕೋರ್ ಅಂಬಟಿ ರಾಯುಡು ಅವರ ಹೆಸರಿನಲ್ಲಿದೆ. ಅವರು 2002ರಲ್ಲಿ ಟಾಂಟನ್‌ನಲ್ಲಿ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಅಜೇಯ 177 ರನ್ ಗಳಿಸಿದ್ದರು.

ವೈಭವ್ ಸೂರ್ಯವಂಶಿ ಕ್ರಮವಾಗಿ 175 (2026ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ) ಮತ್ತು 171 (2025ರಲ್ಲಿ ಯುಎಇ ವಿರುದ್ಧ) ರನ್ ಗಳಿಸುವ ಮೂಲಕ, ಈ ಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಅತಿ ಹೆಚ್ಚು ಸ್ಕೋರ್‌ಗಳನ್ನು ಹೊಂದಿದ್ದಾರೆ.

Aaryavir Sehwag
U-19 Asia Cup: ಆರ್ಯವೀರ್ ಸೆಹ್ವಾಗ್-ಲಕ್ಷ್ಯ ರೈಚಂದಾನಿ ಸ್ಫೋಟಕ ಬ್ಯಾಟಿಂಗ್; ನೇಪಾಳ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

2022ರಲ್ಲಿ ಉಗಾಂಡಾ ವಿರುದ್ಧ ರಾಜ್ ಬಾವಾ ಗಳಿಸಿದ ಅಜೇಯ 162 ರನ್, ಯುವ ಏಕದಿನ ಪಂದ್ಯಗಳಲ್ಲಿ ಭಾರತೀಯ ಆಟಗಾರನೊಬ್ಬನ ನಾಲ್ಕನೇ ಅತಿ ಹೆಚ್ಚು ಸ್ಕೋರ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X